ಒತ್ತುವರಿದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
Advertisement
ನಗರದ ರಿಂಗ್ ರಸ್ತೆಗೆ ಹೊಂದಿಕೊಂಡಿರುವ ಶಿವಬಸವ ನಗರದ ಸರ್ವೇ ನಂ. 273/ಈ ವ್ಯಾಪ್ತಿಯ ಪ್ಲಾಟ್ ನಂ.8 ಮಾಲಿಕ ವಾಸಿಮ್ ಗೌಸ್ ಮೋದಿನ ಸಾಬ ಶಿರಹಟ್ಟಿ ಎಂಬಾತನಿಗೆ ಸೇರಿತ್ತು. ಅವರು 2012 ರಲ್ಲಿ ಸಿದ್ಧಲಿಂಗಪ್ಪ ಚಳಗೇರಿ ಎಂಬುವರರಿಗೆ ಮಾರಾಟ ಮಾಡಿದ್ದರು. ಸಿದ್ದಲಿಂಗಪ್ಪ ಚಳಗೇರಿ ಅವರು ತಮ್ಮ 1514 ಚದುರ ಅಡಿ ಪೈಕಿ 1163 ಚ.ಅಡಿಯನ್ನು ಮಂಜು ಬ್ಯಾಲಿಹಾಳ ಎಂಬುವವರಿಗೆ ಮಾರಾಟ ಮಾಡಿದ್ದರು.
ಜಾಗವನ್ನು 1550 ಚ.ಅಡಿಯ ಒಂದು, 1163 ಚ.ಅಡಿಯ ಎರಡು ನಿವೇಶನಗಳನ್ನಾಗಿಸಿ, ದಾನಪತ್ರ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ:ಮದುವೆ ದಿನವೇ ಗ್ರಾಮಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮದುಮಗ
Related Articles
ಸಂಶಯಗೊಂಡ ಶಿವಬಸವ ನಗರದ ಸುಧಾರಣಾ ಸಮಿತಿ, ಮೂಲ ದಾಖಲೆಗಳನ್ನು ಪರಿಶೀಲಿಸಿ, 21-6-2018ರಲ್ಲಿ ನಗರಸಭೆಗೆ
ದೂರು ಸಲ್ಲಿಸಲಾಗಿತ್ತು. 27-6-2018ರಲ್ಲಿ ಅನಧಿಕೃತ ಕಟ್ಟಡಗಳನ್ನು 7 ದಿನಗಳಲ್ಲಿ ತೆರವುಗೊಳಿಸುವಂತೆ ಸೂಚಿಸಿ ಹಳ್ಳ ಒತ್ತುವರಿದಾರರಿಗೆ ನಗರಸಭೆಯಿಂದ ನೋಟಿಸ್ ನೀಡಿತ್ತು. ಆದರೂ, ಕಟ್ಟಡ ಮಾಲೀಕರು ಕ್ಯಾರೇ ಎನ್ನಲಿಲ್ಲ. ಹೀಗಾಗಿ, ಶಿವಬಸವನಗರದ ಸುಧಾರಣಾ ಸಮಿತಿ ಪ್ರಮುಖರು, ಹಂತ ಹಂತವಾಗಿ ಹೋರಾಟ ಮುಂದುವರಿಸಿದರು.
Advertisement
ಈ ಕುರಿತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅನಧಿಕೃತ ಕಟ್ಟಡಗಳನ್ನು ನಗರಸಭೆ ಮೂಲಕ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ.
ನಗರಸಭೆಯಿಂದ ಒತ್ತುವರಿ ತೆರವು: ಈ ಕುರಿತು ಜಿಲ್ಲಾಧಿಕಾರಿಗಳ ಸೂಚನೆ ಬರುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಜೆಸಿಬಿ ಅಂಗಳಕ್ಕಿದಿವೆ. ನೋಡನೋಡುತ್ತಿದ್ದಂತೆ ಅನಧಿಕೃತ ಎರಡು ಕಟ್ಟಡಗಳನ್ನು ನೆಲಕ್ಕುರುಳಿಸಿರುವುದಅವಳಿ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಿಗಳ ಮೇಲೆ ಕ್ರಮವಿಲ್ಲವೇ?: ಹಳ್ಳದ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿದ್ದ ಮನೆಗಳನ್ನು ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ, ಹಳ್ಳದ ಜಾಗೆಯನ್ನು ಅತಿಕ್ರಮಿಸಿದ್ದಲ್ಲದೇ, ಕುಟುಂಬಸ್ಥರ ಹೆಸರಲ್ಲಿ ದಾನ ಪತ್ರ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ, ಅನಧಿಕೃತ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.