ಯಳಂದೂರು: ತಾಲೂಕಿನ ಕೆ.ದೇವರಹಳ್ಳಿ ಗ್ರಾಮದಲ್ಲಿ ಸರ್ವೆ ನಂ.5ರ ಖಾಸಗಿ ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ಸರ್ಕಾರಿ ಕಾಲುವೆಗೆ ಅಡ್ಡಲಾಗಿ ಖಾಸಗಿ ವ್ಯಕ್ತಿಯೊಬ್ಬರು ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಇದ್ದರಿಂದ ಹರಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಿಆರ್‌ಟಿ ಅರಣ್ಯದಿಂದ ಹಾದು ಬಂದಿರುವ ಕಾಲುವೆ ನೀರು ಹೊಂಗ ನೂರು ಗ್ರಾಮದ ಹಿರಿಕೆರೆಗೆ ಸೇರುತ್ತದೆ. ಅದಕ್ಕೆ ಅಡ್ಡಲಾಗಿ ರೈತರೊಬ್ಬರು ಸೇತುವೆ ನಿರ್ಮಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಕಂದಾಯ, ಅರಣ್ಯ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಹಿಸಿಲ್ಲ. ಹಾಗಾಗಿ, ಕಾಡಿನಿಂದ ಹರಿದು ಬರುವ ನೀರು ಹರಿದು ಹೋಗಲು ತೊಂದರೆಯಾಗುವು ದರ ಜತೆಗೆ ಕಾಡಿನ ಅಂಚಿನಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವುದರಿಂದ ವನ್ಯ ಪ್ರಾಣಿ, ಪಕ್ಷಿಗಳಿಗೆ ತೊಂದರೆ ಆಗುತ್ತದೆ. ಜೊತೆಗೆ, ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆಯುವ ಅಪಾಯವೂ ಇದೆ.
ಕಾನನ ಕಲ್ಲು, ಮರಳು ಬಳಕೆ: ಬಿಆರ್‌ಟಿ ಅರಣ್ಯದಿಂದ ಹಾದು ಹೋಗಿ ರುವ ಸರ್ಕಾರಿ ಕಾಲುವೆಗೆ ಇಲ್ಲೇ ಕಾಡಿ ನಲ್ಲೇ ಲಭ್ಯ ವಿರುವ ಕಲ್ಲು, ಮರಳನ್ನು ಶೇಖರಿಸಿ ಈ ಸೇತುವೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋ ಪವೂ ಕೇಳಿ ಬರುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿ ಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಆನೆ ಕಂದಕ ಬಳಿ ಹರಿಯುವ ನೀರಿನ ಝರಿ ನೀರಿಗೂ ಅಕ್ರಮವಾಗಿ ಮೋಟರ್ ಅಳವ ಡಿಸಿ ಪಡೆದುಕೊಳ್ಳಲಾಗು ತ್ತಿದೆ. ಈ ಝರಿಗೆ ಕುಡಿಯುವ ನೀರಿನ ಸುತ್ತಮು ತ್ತಲಿನ ವನ್ಯಪ್ರಾಣಿಗಳು, ಪಕ್ಷಿಗಳು ಬರು ತ್ತದೆ. ಈ ನೀರಿನ ಬಳಕೆ ಬಗ್ಗೆ ಅರಣ್ಯಾಧಿ ಕಾರಿಗಳು ಕ್ರಮ ವಹಿಸಿಲ್ಲ ಎಂಬುದು ಪರಿಸರ ಪ್ರೇಮಿಗಳ ದೂರಾಗಿದೆ.
ದೇವರಹಳ್ಳಿ ಗ್ರಾಮದ ಬಳಿ ಸರ್ಕಾರಿ ಕಾಲುವೆಗೆ ಅಡ್ಡ ಲಾಗಿ ಸೇತುವೆ ನಿರ್ಮಿಸುತ್ತಿ ರುವ ಬಗ್ಗೆ ನಮಗೆ ಯಾವುದೇ ದೂರು ಬಂದಿಲ್ಲ. ಸೇತುವೆ ನಿರ್ಮಾಣದ ಬಗ್ಗೆ ನಮಗೆ ಮಾಹಿತಿಯೂ ಇಲ್ಲ.
–ಆನಂದಪ್ಪನಾಯಕ್, ತಹಶೀಲ್ದಾರ್,ಯಳಂದೂರು
ತಾಲೂಕಿನ ಕೆ.ದೇವರಹಳ್ಳಿ ಗ್ರಾಮದಲ್ಲಿ ಹಾದು ಹೋಗಿ ರುವ ಸೇತುವೆ ಕಾಮಗಾರಿ ನಿರ್ಮಿ ಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ತಿಳಿದು ಕ್ರಮವಹಿಸಲಾಗುವುದು.
–ಮಹದೇವಯ್ಯ, ಎಸಿಎಫ್, ಬಿಆರ್‌ಟಿ ಯಳಂದೂರು