Advertisement

ಆಗುಂಬೆ ಬಳಿ ಅಕ್ರಮ ಗೋಮಾಂಸ ಸಾಗಾಟ, ಇಬ್ಬರು ಬಂಧನ

04:36 PM Aug 12, 2021 | Team Udayavani |

ತೀರ್ಥಹಳ್ಳಿ : ತಾಲೂಕಿನ ಆಗುಂಬೆ  ಗಾಟಿಯ ಪಾರೆಸ್ಟ ತಪಾಸಣಾ ಗೇಟ್ ಬಳಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಆಗುಂಬೆ ಪೊಲೀಸರು ತಡೆದು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಇಂದು(ಗುರುವಾರ, ಆಗಸ್ಟ್ 12) ಬೆಳಗ್ಗಿನ ಜಾವ  ಸುಮಾರು 3.50 ಗಂಟೆಗೆ ನಡೆದಿದೆ ಎಂದು ತಿಳಿದುಬಂದಿದೆ.

Advertisement

ತರಕಾರಿ ಸಾಗಿಸಲು ಬಳಸುವ ಮಹೀಂದ್ರ ಪಿಕಪ್ ವಾಹನದಲ್ಲಿ ಎದುರು ಗೋಮಾಂಸವನ್ನು ಹಾಕಿ ಹಿಂದೆ ಜನರಿಗೆ ಕಾಣುವ ರೀತಿಯಲ್ಲಿ ತರಕಾರಿಗಳ ಚೀಲ ಇಟ್ಟುಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ವಾಹನವನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಮಾಹಿತಿ ಮೆರೆಗೆ ಈ ಸಾಗಾಣಿಕೆಯನ್ನು ತಡೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಕಾರ್ಯಕರ್ತರ ಜನ ಸೇವೆಯೇ ಬಿಜೆಪಿ ಮೇಲೆ ಜನತೆಯ ವಿಶ‍್ವಾಸ ಬಲಗೊಳ್ಳಲು ಕಾರಣ :ಈಶ್ವರಪ್ಪ

ಪಿಕಪ್ ವಾಹನದಲ್ಲಿ ಸುಮಾರು 400 ಕೆ.ಜಿ.ಗೋಮಾಂಸ ಇದೆ ಎಂದು ತಿಳಿದು ಬಂದಿದ್ದು, ಶಿವಮೊಗ್ಗದಿಂದ ಮಂಗಳೂರು ಕಡೆ ತೆರಳುವಾಗ ಆಗುಂಬೆಯ ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದು ತಪಾಸಣೆ ನಡೆಸಿದಾಗ ಈ ಕಳ್ಳ ಸಾಗಾಟ ಬಯಲಿಗೆ ಬಂದಿದೆ.

ತಪಾಸಣೆ ವೇಳೆ ಗೋಮಾಂಸ ಸಾಗಾಣಿಕೆ ಮಾಡುತ್ತಿರುವುದು ಸ್ಪಷ್ಟ ವಾಗಿದ್ದು, ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಮಂಗಳೂರು ನಿವಾಸಿಗಳೆಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದ್ದು, ಇರ್ಫಾನ್ ಮತ್ತು ಮೊಹ್ಮದ್ ಎಂದು ಗುರುತಿಸಲಾಗಿದೆ.

Advertisement

ಶಿವಮೊಗ್ಗದಿಂದ ಹೊರ ಜಿಲ್ಲೆ ಅದರಲ್ಲೂ ಕರಾವಳಿ ಭಾಗದ ಮೂಲಕ ಕೇರಳಕ್ಕೆ ಅಕ್ರಮ ಗೋವು ಹಾಗೂ ಅಕ್ರಮ ಗೋಮಾಂಸ ಸಾಗಿಸಲಾಗುತ್ತಿದೆ ಎಂಬ ಕೂಗು ಈ ಹಿಂದೆಯೇ ಕೇಳಿ ಬರುತ್ತಿತ್ತು. ಸದ್ಯ, ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಆಗುಂಬೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 8 ಹೊಸ ಡಿಪ್ಲೊಮಾ ಕೋರ್ಸುಗಳಿಗೆ ಚಾಲನೆ ನೀಡಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next