Advertisement

ಉದ್ಯಾನವನದಲ್ಲಿ ಅಕ್ರಮ ಬಿದಿರು ಸಾಗಣೆ

03:53 PM Oct 31, 2020 | Suhan S |

ಪಾಂಡವಪುರ: ಪಟ್ಟಣದ ವಿಶ್ವೇಶ್ವರಯ್ಯ ನಾಲೆಯ ಬಳಿ ಇರುವ ಸಾರ್ವಜನಿಕರ ಉದ್ಯಾನವನ (ಪಾರ್ಕ್‌) ನಲ್ಲಿರುವ ಬಿದಿರು ಮರಗಳ ಅಕ್ರಮ ವಾಗಿ ಕದ್ದು ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಕಂಡರು ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ.

Advertisement

ಮಧ್ಯಾಹ್ನ ಕೆಲವು ಅಪರಿಚಿತ ವ್ಯಕ್ತಿಗಳು ಬಿದಿರು ಮರಗಳನ್ನು ಅಕ್ರಮವಾಗಿ ಕಡಿದು ಬೇರೆಡೆಗೆ ಸಾಗಿ ಸು ತ್ತಿ ದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಬಿದಿರು ಮರ ಕಡಿಯುತ್ತಿದ್ದ ಅಪ ರಿಚಿತರನ್ನು ಪ್ರಶ್ನಿಸಿದರೆ, ಅವರು ತಡವರಿಸಿಕೊಂಡು ಪುರಸಭೆ ಅಧಿಕಾರಿಗಳು ಕಡಿಯಲು ಹೇಳಿದ್ದಾರೆ ಎಂದಿದ್ದಾರೆ. ತಕ್ಷಣ ಕೆಲವು ಪರಿಸರ ಪ್ರೇಮಿಗಳು ಪುರಸಭೆ ಅಧಿಕಾರಿಗಳನ್ನು ದೂರ ವಾಣಿ ಮೂಲಕ ಸಂಪರ್ಕಿಸಿ. ಮರ ಕಡಿದಿರುವ ಬಗ್ಗೆ ಪ್ರಶ್ನಿಸಿದರೆ ತಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ

ಮುಖ್ಯಾಧಿಕಾರಿ ಮಂಜುನಾಥ್‌. ಯಾವುದೇ ಪ್ರಯೋಜನವಿಲ್ಲ:ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ದ್ದಾರೆ. ಮರ ಕಡಿದಿರುವ ಬಗ್ಗೆ ಖಾತರಿಪಡಿಸಿ ಕೊಂಡು ಛಾಯಾಚಿತ್ರ ವನ್ನು ತೆಗೆದುಕೊಂಡು ಮೇಲಾಧಿ ಕಾರಿಗಳಿಗೆ ತಿಳಿಸಿದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಪರಿಸರ ಪ್ರೇಮಿಗಳ ಅಳಲು.

ನಿರ್ವಹಣೆ ಹೊಣೆ ಯಾರಿಗೆ: ಬಿದಿರು ಮರಗಳ ಕಳ್ಳ ಸಾಗಣೆ ನಡೆಯುತ್ತಿದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಈ ಉದ್ಯಾನವನದಲ್ಲಿ ನಿತ್ಯ ನೂರಾರು ಜನ ವಾಯುವಿಹಾರಕ್ಕೆ ಬರುತ್ತಾರೆ. ಈ ವನ ಕಾವೇರಿ ನೀರಾವರಿ ನಿಗಮದ ಇಲಾಖೆಗೆ ಒಳಪಟ್ಟಿದ್ದು, ಇದರ ನಿರ್ವಾಹಣೆಯ ಹೊಣೆ ಪುರಸಭೆ ಹೊತ್ತಿದೆ. ಆದರೆ, ಇಲ್ಲಿಯ ಪಾರ್ಕ್‌ ಯಾರಿಗೆ ಸೇರಬೇಕು ಎಂಬುದು ತಿಳಿದಿಲ್ಲ. ಪುರ ಸಭೆ ಅಧಿಕಾರಿಗಳನ್ನು ಕೇಳಿದರೆ ಪಾರ್ಕ್‌ ಸ್ವಚ್ಛತೆ ಹೊಣೆ ನಮಗೆ ಬರುತ್ತದೆ, ನಿರ್ವಹಣೆಯಲ್ಲ ಎನ್ನುತ್ತಾರೆ. ಇನ್ನೂ ನೀರಾವರಿ ಇಲಾಖೆ ಅಧಿಕಾರಿ ಗಳನ್ನು ಪ್ರಶ್ನಿಸಿದರೆ ನಾವು ಯಾರಿಗೂ ಮರ ಕಡಿ ಯಲು ಹೇಳಿಲ್ಲ ಎಂದು ಎಇಇ ಜಯ ರಾಮಯ್ಯ ತಿಳಿಸಿದ್ದಾರೆ.

ಆದರೆ, ಇದರ ಜವಾಬ್ದಾರಿ ಯಾರಿಗೆ ಎಂದು ಅಧಿಕಾರಿಗಳು ಸುಳಿವು ನೀಡುತ್ತಿಲ್ಲ. ಈ ಹಿಂದೆಯೂ ಮರ ಕಡಿಯ ಲಾಗಿತ್ತು: ಕಳೆದ ಆಗಸ್ಟ್‌ 28ರಂದು ಇದೇ ಉದ್ಯಾನವನದಲ್ಲಿ ಸುಮಾರು 2 ಟ್ರ್ಯಾಕ್ಟರ್‌ ಬಿದಿರು ಮರಗಳನ್ನು ಕಡಿದು ಸಾಗಣೆ ಮಾಡಲಾಗಿತ್ತು. ಈಗಲೂ ಅದೇ ರೀತಿ ಅಕ್ರಮವಾಗಿ ಬಿದಿರು ಮರಕಡಿದು ಸಾಗಣೆ ಮಾಡಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

Advertisement

ಕ್ರಮಕ್ಕೆ ಒತ್ತಾಯ: ಉದ್ಯಾನವನದಲ್ಲಿ ಅಕ್ರಮವಾಗಿ ಬಿದಿರು ಮರ ಕಡಿದು ಸಾಗಿಸುವ ಕೆಲಸ ನಡೆಯು ತ್ತಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next