Advertisement

ಅಕ್ರಮ ಚಟುವಟಿಕೆಗಳ ತಾಣ ಶಾಲಾ-ಕಾಲೇಜು ಆವರಣ!

11:42 AM Aug 23, 2019 | Team Udayavani |

ನರೇಗಲ್ಲ: ಪಟ್ಟಣದ ಸರ್ಕಾರಿ ಪ್ರೌಢ ಶಾಲೆ, ಪಪೂ ಕಾಲೇಜು ಹಾಗೂ ಪದವಿ ಕಾಲೇಜಗಳು ಒಂದೇ ಆವರಣ ಇಂದು ಅಕ್ರಮ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

Advertisement

ನಿತ್ಯ ಶಾಲಾ, ಕಾಲೇಜು ಮುಗಿದ ನಂತರ ಕಿಡಿಗೇಡಿಗಳು ಕಾಲೇಜು ಆವರಣದಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅಕ್ರಮ, ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಆವರಣದಲ್ಲಿ ಒಂದೇ ಒಂದು ವಿದ್ಯುತ್‌ ದೀಪಗಳು ಇಲ್ಲದೇ ಇರುವುದರಿಂದ ಪುಂಡ ಪೋಕರಿಗಳ ತಾಣವಾಗಿದೆ.

ಇಲ್ಲಿ ಪ್ರೌಢ, ಪಿಯು ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಪ್ರತ್ಯೇಕವಾಗಿ ಕಟ್ಟಡಗಳು ಹೊಂದಿವೆ. ಈ ಶಾಲಾ ವಾತಾವರಣ ಯಾವಾಗಲೂ ಶಾಂತವಾಗಿರುತ್ತದೆ. ಆದರೆ ರಾತ್ರಿ ವೇಳೆ ಶಾಲಾ ಸಂಕೀರ್ಣದಲ್ಲಿ ವಿದ್ಯುತ್‌ ಇಲ್ಲದೇ ಇರುವುದರಿಂದ ಇದೊಂದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನುವುದು ಈ ಭಾಗದ ಜನರ ಆರೋಪವಾಗಿದೆ.

ಸಂಬಂಧಿಸಿದ ಆಡಳಿತ ವರ್ಗವು ಸರ್ಕಾರಿ ಶಾಲಾ ಸಮುಚ್ಚಯಕ್ಕೆ ತಕ್ಷಣವೇ ವಿದ್ಯುತ್‌ ಸೌಲಭ್ಯ ಕಲ್ಪಿಸಬೇಕು. ಅಲ್ಲಿ ಕನಿಷ್ಟ ಏನಿಲ್ಲವೆಂದರೂ ನಾಲ್ಕೈದು ಕಡೆಗಳಲ್ಲಿ ಹೈಮಾಸ್ಟ್‌ ಬಲ್ಪಗಳನ್ನು ಅಳವಡಿಸಿದರೇ ಎಲ್ಲೆಡೆಯೂ ಬೆಳಕು ಬೀಳುವುದರಿಂದ, ಶಾಲಾ ವಾತಾವರಣವು ಸ್ವಚ್ಛ ಹಾಗೂ ಎಲ್ಲೆಡೆಯೂ ಎಲ್ಲವೂ ಕಾಣಿಸುತ್ತದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗುಡದಪ್ಪ ಗೋಡಿ, ಹುಲ್ಲಗಪ್ಪ ಬಂಡಿವಡ್ಡರ ಹೇಳಿದರು.

ಹಿಂದೆ ನಮ್ಮ ಸರ್ಕಾರವಿದ್ದಾಗ, ಬಡ, ದೀನ ದಲಿತರಿಗೆ ಹಾಗೂ ಶಿಕ್ಷಣ ವಂಚಿತ ಶಿಕ್ಷಣಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ದೊಡ್ಡ ಪ್ರಮಾಣ ಅನುದಾನ ಬಿಡುಗಡೆಗೊಳಿಸುವುದರ ಜತೆಗೆ ಸ್ಥಳೀಯ ಜಮೀನು ನೀಡಿದ ದಾನಿಗಳ ಸಹಕಾರದೊಂದಿಗೆ ಇಲ್ಲಿ ಬೃಹತ್‌ ಕಟ್ಟಡ ನಿರ್ಮಿಸಲಾಗದೆ. ಶೀಘ್ರ ವಿದ್ಯುತ್‌ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುವ ಪ್ರಯತ್ನ ಮಾಡುವೆ. •ಕಳಕಪ್ಪ ಬಂಡಿ, ಶಾಸಕರು.
•ಸಿಕಂದರ ಎಂ. ಆರಿ
Advertisement
Advertisement

Udayavani is now on Telegram. Click here to join our channel and stay updated with the latest news.

Next