ಇಂದೋರ್: ಮಧ್ಯಪ್ರದೇಶದ ಸಿಂಗ್ರೌಲಿ-ಪ್ರಯಾಗ್‌ರಾಜ್ ನಡುವೆ ನಿರ್ಮಿಸಲುದ್ದೇಶಿಸಿರುವ 70 ಕಿ.ಮೀ. ಹೆದ್ದಾರಿ ಕಾಮಗಾರಿಯಲ್ಲಿ, ಪರಿಹಾರ ಪಡೆಯಲೆಂದೇ 2 ತಿಂಗಳಲ್ಲಿ 3000 ನಕಲಿ ಮನೆಗಳು ನಿರ್ಮಾಣವಾಗಿವೆ.
ಎನ್‌ಎಚ್‌ಎಐ (ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಜಮೀನು ವಶ ಪಡಿಸಿಕೊಂಡಿದೆ.
ಸಿಂಗ್ರೌಲಿ-ಪ್ರಯಾಗ್‌ರಾಜ್ ಮಾರ್ಗದಲ್ಲಿ ಹೆದ್ದಾರಿ ನಿರ್ಮಿ ಸಲು ಈ ಮಾರ್ಚ್‌ನಲ್ಲಿ ಎನ್‌ಎಚ್‌ಎಐ ಅಧಿಸೂಚನೆ ಹೊರಡಿ
ಸಿತ್ತು. ಚಿತ್ರಾಂಗಿ, ದೂಧ್‌ಮಾನಿಯಾ ತಾಲೂಕುಗಳಲ್ಲಿನ ಒಟ್ಟು 33 ಹಳ್ಳಿ
ಗಳಲ್ಲಿ ರಸ್ತೆ ನಿರ್ಮಾಣವಾಗಲಿದೆ. ಅಧಿಸೂಚನೆ ವ್ಯಾಪ್ತಿಗೆ ಬಂದಿರುವ ಸ್ಥಳಗಳನ್ನು ಮಾರುವಂತಿಲ್ಲ ಎಂದೂ ಆದೇಶಿಸಲಾಗಿದೆ.
ಏನಿದು ಸಂಚು?: ಭೂಮಿಯ ಒಡೆಯರಾದ ಬಡರೈತರು ಮತ್ತು ಬ್ರೋಕರ್‌ಗಳ ನಡುವೆ ಸ್ಟಾಂಪ್ ಪೇಪರ್‌ನಲ್ಲಿ ಒಪ್ಪಂದವಾಗಿದೆ. ಮನೆಗಳನ್ನು ಬ್ರೋಕರ್‌ಗಳು ನಿರ್ಮಿಸುತ್ತಾರೆ. ಇದಕ್ಕೆ ಪರಿಹಾರ ಸಿಕ್ಕರೆ ಅದರಲ್ಲಿ ಶೇ.80 ಕಟ್ಟಿದವರಿಗೆ, ಬಾಕಿ ಶೇ.20 ಭೂಮಾಲಕರಿಗೆ! ಎಂದಿನಂತೆ ಜಾಗದ ಮಾಲಕರಿಗೆ ಸರಕಾರ ನೀಡುವ ಪರಿಹಾರವೂ ಸಿಕ್ಕುತ್ತದೆ.