ಹಾಸನ: ನಗರ ಹೊರ ವಲಯ ಕೈಗಾರಿಕಾಭಿವೃದ್ಧಿಕೇಂದ್ರಕ್ಕೆ ಹೊಂದಿಕೊಂಡಂತೆ ಐಐಟಿ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಸ್ಥಾಪನೆಗೆ ಒಂದು ದಶಕದ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ 1,513 ಎಕರೆಭೂಮಿಯನ್ನು ನಿವೇಶನವಾಗಿ ಮಾರ್ಪಡಿಸಲುತೀರ್ಮಾನಿಸಲಾಗಿದೆ.
ಈ ಬೆಳವಣಿಗೆಯಿಂದಾಗಿಹಾಸನದ ಐಐಟಿ ಅಥವಾ ಉನ್ನತ ಶಿಕ್ಷಣದ ಕನಸುನುಚ್ಚು ನೂರಾಗಿದೆ.ಭೂ ಮಾಲೀಕರ ಸಮ್ಮತಿ: ಗವೇನಹಳ್ಳಿಯಸಮುದಾಯ ಭವನದಲ್ಲಿ ಗುರುವಾರ ಶಾಸಕಪ್ರೀತಂ ಜೆ.ಗೌಡ ಅವರ ಸಮ್ಮುಖದಲ್ಲಿ ನಡೆದಕೆಐಎಡಿಬಿ ಹಿರಿಯ ಅಧಿಕಾರಿಗಳು ಮತ್ತು ಐಐಟಿಗೆಭೂಮಿ ಬಿಟ್ಟುಕೊಟ್ಟಿದ್ದ ಭೂ ಮಾಲೀಕರ ಸಭೆಯಲ್ಲಿಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರಿಹಾರದಬದಲು ಒಂದು ಎಕರೆಗೆ ಚದರ 10,781 ಅಡಿನಿವೇಶನವನ್ನು ಭೂ ಮಾಲೀಕರಿಗೆಅಭಿವೃದ್ಧಿಪಡಿಸಿಕೊಟ್ಟು ಉಳಿದ ಭೂಮಿಯನ್ನುವಸತಿ ಬಡಾವಣೆ ನಿರ್ಮಾಣಕ್ಕೆ ಬಳಸಲು ಒಪ್ಪಂದ ಮಾಡಿಕೊಳ್ಳಲಾಯಿತು.
ಈ ಒಡಂಬಡಿಕೆಗೆ ಭೂಮಾಲೀಕರು ಸಮ್ಮತಿಳಿಸಿದರು.ಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು: ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಹಾಸನದಲ್ಲಿ ಐಐಟಿ ಸ್ಥಾಪನೆಯ ಪ್ರಯತ್ನಆರಂಭವಾಯಿತು.
ಆನಂತರ ಧರ್ಮಸಿಂಗ್‌ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಉಸ್ತುವಾರಿಸಚಿವರಾಗಿದ್ದ ಎಚ್.ಡಿ.ರೇವಣ್ಣ ಅವರು ಐಐಟಿಮಂಜೂರಾತಿಗೆ ತೀವ್ರ ಪ್ರಯತ್ನ ನಡೆಸಿಐಐಟಿಗಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಆರಂಭವಾಗಿತ್ತು.ಗವೇನಹಳ್ಳಿ, ಬೊಮ್ಮನಾಯ್ಕನಳ್ಳಿ,ಬುಸ್ತೇನಹಳ್ಳಿ, ಕಸ್ತೂರವಳ್ಳಿ, ಚಿಕ್ಕ ಬಸವನಹಳ್ಳಿಮತ್ತಿತರ ಹಳ್ಳಿಗಳ ವ್ಯಾಪ್ತಿಯ 1,513 ಎಕರೆಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆ ಕೆಐಎಡಿಬಿಮೂಲಕ ನಡೆದಿತ್ತು. ಐಐಟಿಗಾಗಿ 1053 ಎಕರೆಯನ್ನೂ ಹಂಚಿಕೆ ಮಾಡಲಾಗಿತ್ತು. ಆದರೆ ಎನ್‌ಡಿಎಸರ್ಕಾರದಲ್ಲಿ ಐಐಟಿ ಧಾರವಾಡದ ಪಾಲಾಯಿತು.
ಎಕರೆಗೆ ಚದರ 10,781 ಅಡಿ ಭೂಮಿ:ಒಂದೂವರೆ ದಶಕದಿಂದ ಐಐಟಿಗಾಗಿಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ ವಸತಿಬಡಾವಣೆ ನಿರ್ಮಿಸಲು ತೀರ್ಮಾನಿಸಲಾಗಿದ್ದು,ಈಗಾಗಲೇ ಭೂ ಪರಿಹಾರ ಪಡೆದುಕೊಂಡಿರುವರೈತರು ಬಡ್ಡಿ ಸಹಿತ ಪರಿಹಾರದ ಮೊತ್ತಹಿಂತಿರುಗಿಸಿದರೆ, ಎಕರೆಗೆ 10,781 ಅಡಿ ಭೂಮಿಬಿಟ್ಟುಕೊಡಲು ಗುರುವಾರ ನಡೆದ ಸಭೆಯಲ್ಲಿತೀರ್ಮಾನಿಸಲಾಗಿದೆ