Advertisement

ಕೋಚಿಂಗ್‌ ಸೆಂಟರ್‌ ವಿರುದ್ಧ ಕೇಸ್‌

09:35 AM May 02, 2018 | Team Udayavani |

ಹೊಸದಿಲ್ಲಿ: ತನ್ನ ಅನುಮತಿ ಇಲ್ಲದೆ ಫೋಟೋ ಬಳಸಿದ ಕೋಚಿಂಗ್‌ ಸೆಂಟರ್‌ ವಿರುದ್ಧ ದೆಹಲಿ ವಿದ್ಯಾರ್ಥಿ 5.85 ಕೋಟಿ ರೂ. ಮೊಕದ್ದಮೆ ಹೂಡಿದ್ದಾರೆ. ಜಾಹೀರಾತುಗಳಲ್ಲಿ ಕೋಚಿಂಗ್‌ ಸೆಂಟರ್‌ ಫೋಟೋ ಬಳಕೆ ಮಾಡಿ ತನ್ನ ಹೆಸರನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದರಿಂದ ತನಗೆ ಹಾಗೂ ಕುಟುಂಬದ ಖಾಸಗಿತನಕ್ಕೆ ಧಕ್ಕೆಯಾಗಿದೆ ಎನ್ನುವುದು ವಿದ್ಯಾರ್ಥಿಯ ಆರೋಪ. ಮಂಗಳವಾರ ದೆಹಲಿ ಹೈಕೋರ್ಟಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ‘ನೀವು ಪ್ರಕರಣವನ್ನು ಇತ್ಯರ್ಥಗೊಳಿಸುತ್ತೀರೋ ಇಲ್ಲವೋ’ ಎಂದು ಕೋಚಿಂಗ್‌ ಸೆಂಟರ್‌ನ ಆಡಳಿತ ಮಂಡಳಿಯನ್ನು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ನಿತಿನ್‌ ಎಂಬ ವಿದ್ಯಾರ್ಥಿ 2009ರ ಜಾಯಿಂಟ್‌ ಎಂಟ್ರಾನ್ಸ್‌ ಎಕ್ಸಾಮಿನೇಷನ್‌ನಲ್ಲಿ ಮೊದಲಿಗನಾಗಿದ್ದ. ಆತ ಈಗ ಗೂಗಲ್‌ನಲ್ಲಿ ಉದ್ಯೋಗ ಪಡೆದುಕೊಂಡಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next