Advertisement

ಸೋಲಾರ್‌ ಬಸ್‌ ಮೂಲಕ ಐಐಟಿ ಪ್ರಾಧ್ಯಾಪಕನ ಭಾರತ ಪರ್ಯಟನೆ

12:15 AM Feb 23, 2023 | Team Udayavani |

ಸುರತ್ಕಲ್‌: “ಸೋಲಾರ್‌ ಮ್ಯಾನ್‌ ಆಫ್‌ ಇಂಡಿಯಾ ಎಂದೇ ಖ್ಯಾತಿ ಹೊಂದಿರುವ ಎನರ್ಜಿ ಸ್ವರಾಜ್‌ ಸಂಸ್ಥಾಪಕ, ಸೋಲಾರ್‌ ಕುರಿತ ಜಾಗೃತಿ ಅಭಿಯಾನ ಹಮ್ಮಿಕೊಳ್ಳುತ್ತಿರುವ ಐಐಟಿ ಪ್ರಾಧ್ಯಾಪಕ ಪ್ರೊ| ಚೇತನ್‌ ಸಿಂಗ್‌ ಸೋಲಂಕಿ ತಮ್ಮ ಸೋಲಾರ್‌ ಬಸ್‌ನೊಂದಿಗೆ ಎನ್‌ಐಟಿಕೆಗೆ ಭೇಟಿ ನೀಡಿದರು.

Advertisement

ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿದ ಅವರು, ಹವಾಮಾನ ಬದಲಾಗುತ್ತಿಲ್ಲ. ಜನತೆಯ ಪಾಲ್ಗೊಳ್ಳುವಿಕೆ ಇಲ್ಲದೆ ಸರಕಾರದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಹವಾಮಾನ ಬದಲಾವಣೆಯು ಅತ್ಯಂತ ತೀವ್ರವಾದ ಸಮಸ್ಯೆಯಾಗಿದೆ ಎಂಬುದನ್ನು ಅರಿತುಕೊಂಡು ಮಾಲಿನ್ಯ ಮುಕ್ತ ಸೋಲಾರ್‌ ಶಕ್ತಿಯ ಬಲವರ್ಧನೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.
ಪ್ರಭಾರ ನಿರ್ದೇಶಕ ಮತ್ತು ಡೀನ್‌ ಪ್ರೊ| ಎಸ್‌.ಎಂ. ಕುಲಕರ್ಣಿ ಹಾಗೂ ಸಂಸ್ಥೆಯ ಪ್ರಮುಖರು, ವಿವಿಧ ವಿಭಾಗಗಳ ಡೀನ್‌ ರಿಜಿಸ್ಟ್ರಾರ್‌, ಜಂಟಿ ರಿಜಿಸ್ಟ್ರಾರ್‌, ಡೀನ್‌ ಅಕಾಡೆಮಿಕ್‌, ಅಸೋಸಿಯೇಟ್‌ ಡೀನ್‌ ಆರ್‌ ಆಂಡ್‌ ಸಿ, ಸಿಬಂದಿ ಮತ್ತು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ನ. 2020 ರಲ್ಲಿ ಸೋಲಾರ್‌ ಬಸ್‌ನಲ್ಲಿ ಈ ಎನರ್ಜಿ ಸ್ವರಾಜ್‌ ಯಾತ್ರೆಯನ್ನು ಪ್ರಾರಂಭಿಸಿದ ಸೋಲಂಕಿ ಅವರು 2030ರ ವರೆಗೆ 11 ವರ್ಷಗಳ ಕಾಲ ಈ ಯಾತ್ರೆ ಮುಂದುವರಿಸಲಿದ್ದಾರೆ. ಸೋಲಾರ್‌ ಬಸ್‌ನಲ್ಲಿ ತಮ್ಮ ನಿತ್ಯ ಜೀವನ ನಡೆಸುತ್ತಿರುವ ಇವರು ಸೋಲಾರ್‌ ಶಕ್ತಿಯ ಮಹತ್ವದ ಬಗ್ಗೆ ಇದರ ವ್ಯಾಪಕ ಬಳಕೆಗೆ ಉತ್ತೇಜನ ನೀಡಲು ಪ್ರಪಂಚದಾದ್ಯಂತ 30 ದೇಶಗಳಲ್ಲಿ ಸೌರಶಕ್ತಿಯ ಬಗ್ಗೆ ಸಂದೇಶವನ್ನು ಹರಡಿಸಿದ್ದಾರೆ. ಈ ಎನರ್ಜಿ ಸ್ವರಾಜ್‌ ಯಾತ್ರೆಯ ಭಾಗವಾಗಿ, ಅವರು ಈಗಾಗಲೇ 36ಸಾವಿರ ಕಿ.ಮೀ. ಗಿಂತ ಹೆಚ್ಚು ಪ್ರಯಾಣಿಸಿದ್ದಾರೆ. 17 ರಾಜ್ಯಗಳಲ್ಲಿ ಸುಮಾರು 1.30 ಲಕ್ಷ ಜನರಿಗೆ ಮಾಹಿತಿ ತಲುಪಿದ್ದಾರೆ. ಈ ಯಾತ್ರೆಯ ಮುಖ್ಯ ಗುರಿಯು 100 ಕೋಟಿಗೂ ಹೆಚ್ಚು ಜನರಿಗೆ “ಇಂಧನ ಸಾಕ್ಷರತೆ’ಯನ್ನು ಉತ್ತೇಜಿಸುವುದು. ಮತ್ತು 1 ಕೋಟಿ ಕುಟುಂಬಗಳನ್ನು ಶೇ. 100 ಸೌರಶಕ್ತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದಾಗಿದೆ.

ಪ್ರಶಸ್ತಿಯ ಗರಿ
ಪ್ರೊ| ಸೋಲಂಕಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐಇಇಇ ಯ ಗ್ಲೋಬಲ್‌ ಗ್ರ್ಯಾಂಡ್‌ ಪ್ರಶಸ್ತಿ, ಯೋಜನೆಗಾಗಿ ಪ್ರಧಾನ ಮಂತ್ರಿಗಳ ನಾವೀನ್ಯ ಪ್ರಶಸ್ತಿ, ಒಎನ್‌ಜಿಸಿಯ ಯಿಂದ ಸೋಲಾರ್‌ ಚುಲ್ಹಾ ಡಿಸೈನ್‌ ಚಾಲೆಂಜ್‌ನಲ್ಲಿ ಮೊದಲ ಬಹುಮಾನ, ಮೂರು ಗಿನ್ನೆಸ್‌ ವಿಶ್ವ ದಾಖಲೆ, ಎರಡು ಯುವ ವಿಜ್ಞಾನಿ ಪ್ರಶಸ್ತಿಗಳು, ಸಿಎಸ್‌ಐಆರ್‌ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next