Advertisement

ಕನಕಪುರ ಪ್ರಾಂತ್ಯದಲ್ಲಿ ಕಾವೇರಿ ಹೆಚ್ಚು ಮಲಿನ!

08:15 PM Oct 08, 2021 | Team Udayavani |

ಚೆನ್ನೈ: ಕರ್ನಾಟಕ ಹಾಗೂ ತಮಿಳುನಾಡಿನ ಜೀವನದಿಯಾಗಿರುವ ಕಾವೇರಿ ನದಿಯ ನೀರು, ಕರ್ನಾಟಕದ ಕನಕಪುರ ಹಾಗೂ ತಮಿಳುನಾಡಿನ ಮೆಟ್ಟೂರು ವ್ಯಾಪ್ತಿಯಲ್ಲಿ ಹೆಚ್ಚು ಕಲುಷಿತವಾಗುತ್ತಿದೆ ಎಂದು ಮದ್ರಾಸ್‌ ಐಐಟಿ ತಜ್ಞರ ವರದಿಯೊಂದು ಹೇಳಿದೆ.

Advertisement

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ಪರಿಸರ ಇಲಾಖೆ ಮತ್ತು ಯುನೈಟೆಡ್‌ ಕಿಂಗ್‌ಡಮ್‌ನ ನ್ಯಾಚುಲರ್‌ ಎನ್ವಿರಾನ್‌ಮೆಂಟ್‌ ರಿಸರ್ಚ್‌ ಕೌನ್ಸಿಲ್‌ನ ಧನಸಹಾಯದಿಂದ ನಡೆಸಲಾಗಿರುವ ಈ ಸಂಶೋಧನೆಯಲ್ಲಿ, ಕಾವೇರಿಯ ನೀರಿನಲ್ಲಿ ಸಾಂಪ್ರದಾಯಿಕ ಮಲಿನತೆಯ ಜೊತೆಗೆ ಆಧುನಿಕ ತ್ಯಾಜ್ಯಗಳೂ (ಔಷಧಗಳು, ಕೀಟನಾಶಕಗಳು, ಕೈಗಾರಿಕಾ ತ್ಯಾಜ್ಯಗಳು ಇತ್ಯಾದಿ) ಕಾಣಿಸಿಕೊಂಡಿದ್ದು, ಇದರಿಂದ ಮನುಷ್ಯರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ವರದಿಯ ವಿಶೇಷತೆಯೇನು?
ಈ ಹಿಂದೆಯೂ ಕಾವೇರಿ ನೀರಿನ ಗುಣಮಟ್ಟವನ್ನು ಒರೆಗೆ ಹಚ್ಚುವಂಥ ಪರೀಕ್ಷೆಗಳು ನಡೆದಿದೆ. ಇದೇ ಮೊದಲ ಬಾರಿಗೆ ನದಿಯಲ್ಲಿನ ಮಲಿನಕ್ಕೆ ಕಾರಣವಾದ ಅಂಶಗಳ ಪ್ರಮಾಣವನ್ನು ಪತ್ತೆಹಚ್ಚಲಾಗಿದೆ. ಉದಾಹರಣೆಗೆ, ಕಾವೇರಿಯ ಪ್ರತಿ ಲೀಟರ್‌ ನೀರಿನಲ್ಲಿ 3,330.73 ನ್ಯಾನೋ ಗ್ರಾಂನಷ್ಟು ಕಾರ್ಬಾಮೆಝಿಪೈನ್‌ ಅಂಶವಿದೆ. ಇದು, ಅಪಸ್ಮಾರ ರೋಗಿಗಳಿಗೆ ನೀಡಲಾಗುವ ಔಷಧಿ. ಇದು ಆರೋಗ್ಯವಂತ ಮನುಷ್ಯರಲ್ಲಿ ಹಲವಾರು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇಂಥ ಅನೇಕ ತ್ಯಾಜ್ಯಗಳೊಂದಿಗೆ, ಪರ್ನನಲ್‌ ಕೇರ್‌ ಸಾಮಗ್ರಿಗಳು, ಪ್ಲಾಸ್ಟಿಕ್‌, ಅಗ್ನಿಶಾಮಕ ರಾಸಾಯನಿಕಗಳು, ಭಾರದ ಲೋಹಗಳ ಅಂಶಗಳೂ ನೀರಿನಲ್ಲಿ ಕರಗತವಾಗಿವೆ. ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ:

ತಜ್ಞರ ತಂಡ:
ಐಐಟಿ ಮದ್ರಾಸ್‌ನ ಜಯಕುಮಾರ್‌ ರಂಗನಾಥನ್‌, ಇನjಮಾಮ್‌ ಉಲ್‌ ಹಕ್‌ ಎಸ್‌., ಕಾಮರಾಜ್‌ ರಾಧಾಕೃಷ್ಣನ್‌, ಮಂಥಿರಮ್‌ ಕಾರ್ತಿಕ್‌ ರವಿಚಂದ್ರನ್‌, ಲಿಗೆ ಫಿಲಿಪ್‌. ನದಿ ಹರಿಯುವ ಪ್ರದೇಶಗಳಲ್ಲಿನ 12 ಸ್ಥಳಗಳಿಂದ ನೀರಿನ ಸ್ಯಾಂಪಲ್‌ ಪಡೆದು ಪರೀಕ್ಷೆ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next