Advertisement

ಸಮುದ್ರದ ನೀರಿನಿಂದ ಜಲಜನಕ

10:13 AM Jan 18, 2020 | Hari Prasad |

ಹೊಸದಿಲ್ಲಿ: ಸಮುದ್ರದ ನೀರಿನಿಂದ ಜಲಜನಕ ಇಂಧನ ತಯಾರಿಸುವ ಉಪಕರಣವೊಂದನ್ನು ಮದ್ರಾಸ್‌ ಐಐಟಿ ವಿದ್ಯಾರ್ಥಿಗಳು ತಯಾರಿಸಿದ್ದು, ಇದರಿಂದಾಗಿ ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಚಾಲ್ತಿಯಲ್ಲಿರುವ ಪರಿಸರ ಸ್ನೇಹಿ ಇಂಧನ ರೂಪಿಸುವ ಪ್ರಯತ್ನಗಳಿಗೆ ಹೊಸ ಇಂಬು ಸಿಗುವ ಸಾಧ್ಯತೆಗಳಿವೆ ಎಂದು ಆಶಿಸಲಾಗಿದೆ.

Advertisement

ಎಸಿಎಸ್‌ ಸಸ್ಟೈನಬಲ್‌ ಕೆಮಿಸ್ಟ್ರಿ ಆ್ಯಂಡ್‌ ಇಂಜಿನಿಯರಿಂಗ್‌ ಎಂಬ ನಿಯತಕಾಲಿಕೆಯಲ್ಲಿ ಈ ಪರಿಕರದ ಬಗ್ಗೆ ಲೇಖನ ಪ್ರಕಟಿಸಲಾಗಿದೆ. ‘ಅಗತ್ಯ ಬಿದ್ದಾಗ, ಆ ಸಮಯಕ್ಕೆ ಎಷ್ಟು ಬೇಕೋ ಅಷ್ಟು ಜಲಜನಕವನ್ನು ಮಾತ್ರ ಉತ್ಪಾದಿಸುವ ಅನುಕೂಲವನ್ನು ಕಲ್ಪಿಸಲಾಗಿದೆ.

ಇನ್ನು, ಜಲಜನಕದ ದಹನದಿಂದ ಸಾಂಪ್ರದಾಯಿಕ ತೈಲಗಳ ದಹನದ ವೇಳೆ ಉತ್ಪತ್ತಿಯಾಗುವ ಕಾರ್ಬನ್‌ ಮಾನಾಕ್ಸೈಡ್‌ನ‌ಂಥ ಮಾರಕ ಅನಿಲ ಉತ್ಪತ್ತಿ ಆಗುವುದಿಲ್ಲ. ಹಾಗಾಗಿ, ಭವಿಷ್ಯದಲ್ಲಿ ಜಲಜನಕ ಆಧಾರಿತ ವಾಹನಗಳು ಹೆಚ್ಚು ಬಳಕೆಗೆ ಬರಲಿವೆ. ಆಗ, ಈ ಹೊಸ ಪರಿಕರ ಹೆಚ್ಚೆಚ್ಚು ಪ್ರಯೋಜನಕಾರಿಯಾಗಲಿದೆ’ ಎಂದು ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next