Advertisement

ಜೈಲಲ್ಲಿದ್ದೇ ಐಐಟಿ ರ್‍ಯಾಂಕ್‌ ಪಡೆದ ಸೂರಜ್‌!

08:28 PM Mar 25, 2022 | Team Udayavani |

ಪಾಟ್ನಾ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಖೈದಿಯೊಬ್ಬ ಉನ್ನತ ವಿದ್ಯಾಭ್ಯಾಸದ ಆಸೆಯೊಂದಿಗೆ ಐಐಟಿ ರೂರ್ಕಿಯ ಸ್ನಾತಕೋತ್ತರ ಪದವಿಯ “ಜಂಟಿ ಪ್ರವೇಶ ಪರೀಕ್ಷೆ'(ಜೆಎಎಂ)ಯನ್ನು ಬರೆದು, ಅದರಲ್ಲಿ ರ್‍ಯಾಂಕ್‌ ಪಡೆದುಕೊಂಡಿದ್ದಾನೆ.

Advertisement

23 ವರ್ಷದ ಸೂರಜ್‌ ಕುಮಾರ್‌ ಈ ಸಾಧನೆ ಮಾಡಿರುವವ. ರಾಜಸ್ಥಾನದ ಕೋಟಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತ, ಅಲ್ಲಿನ ಮೊಸ್ಮಾ ಗ್ರಾಮದಲ್ಲಿ 2021ರ ಮಾರ್ಚ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅದೇ ಹಿನ್ನೆಲೆ ಆತ 2021ರ ಏಪ್ರಿಲ್‌ನಿಂದಲೇ ಬಿಹಾರದ ನವಾದಾ ವಿಭಾಗೀಯ ಜೈಲಿನಲ್ಲಿದ್ದಾನೆ.

ಅಲ್ಲಿದ್ದುಕೊಂಡೇ ಪರೀಕ್ಷೆಗೆ ತಯಾರಿ ನಡೆಸಿದ್ದಾನೆ. ಜೈಲಿನಲ್ಲಿದ್ದ ವಿದ್ಯಾವಂತ ಖೈದಿಗಳು ಮತ್ತು ಜೈಲಧಿಕಾರಿಗಳ ಸಹಾಯದಿಂದ ಹೆಚ್ಚಿನ ತರಬೇತಿ ಪಡೆದುಕೊಂಡಿದ್ದಾನೆ.

2022ರ ಫೆ.13ರಂದು ಪರೀಕ್ಷೆ ನಡೆದಿದ್ದು, ಅದರಲ್ಲಿ ಆತ 100ಕ್ಕೆ 50.33 ಅಂಕ ಪಡೆದಿದ್ದಾನೆ ಹಾಗೂ 54ನೇ ರ್‍ಯಾಂಕ್‌ ಪಡೆದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next