ಮುಂಬೈ: ಬಾಂಬೆ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾರ್ಚ್ 31ರಂದು ನಡೆದ ಫರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿದ್ದ ವಿವಾದಿತ ರಾಮಾಯಣ ನಾಟಕಕ್ಕೆ ಸಂಬಂಧಿಸಿದಂತೆ ಎಂಟು ವಿದ್ಯಾರ್ಥಿಗಳಿಗೆ 1.2 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Ukraine ಯುದ್ಧ ನಿಲ್ಲಿಸುವ ಮೋದಿಗೆ ಪೇಪರ್ ಲೀಕ್ ತಡೆಯಲಾಗುವುದಿಲ್ಲವೇ? : ರಾಹುಲ್
ಹಿಂದೂಗಳ ಪವಿತ್ರ ಪುರಾಣ ಕಥೆಯಾದ ರಾಮಾಯಣವನ್ನು ಆಧರಿಸಿ ರಾಹೋವನ್ ನಾಟಕವನ್ನು ಪ್ರದರ್ಶಿಸಿದ್ದು, ಇದರಲ್ಲಿ ಹಿಂದೂ ಧಾರ್ಮಿಕ ನಂಬಿಕೆಯ ಬಗ್ಗೆ ಆಕ್ಷೇಪಾರ್ಹ ಡೈಲಾಗ್ ಹೇಳಿ, ನಿಂದಿಸಿರುವ ಬಗ್ಗೆ ಕೆಲವು ವಿದ್ಯಾರ್ಥಿಗಳು ದೂರು ನೀಡಿರುವುದಾಗಿ ವರದಿ ವಿವರಿಸಿದೆ.
ದೂರಿನ ನಂತರ ಮೇ 8ರಂದು ಶಿಸ್ತು ಸಮಿತಿ ಸಭೆ ನಡೆದಿದ್ದು, ಜೂನ್ 4ರಂದು ದಂಡ ವಿಧಿಸಿರುವುದಾಗಿ ತಿಳಿಸಿತ್ತು. ನಾಲ್ಕು ವಿದ್ಯಾರ್ಥಿಗಳಿಗೆ ತಲಾ 1.2 ಲಕ್ಷ ದಂಡ ವಿಧಿಸಿದ್ದು, ಇತರ ನಾಲ್ವರು ವಿದ್ಯಾರ್ಥಿಗಳಿಗೆ ತಲಾ 40,000 ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ಬಾಂಬೆ ಐಐಟಿ ತಿಳಿಸಿದೆ.
ಒಂದು ವೇಳೆ ವಿದ್ಯಾರ್ಥಿಗಳು ದಂಡ ಕಟ್ಟಲು ವಿಫಲರಾದರೆ, ಇನ್ನಷ್ಟು ನಿರ್ಬಂಧ ವಿಧಿಸಲಾಗುವುದು ಎಂದು ಐಐಟಿ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಏಪ್ರಿಲ್ 8ರಂದು ನಡೆದಿದ್ದ ನಾಟಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.