Advertisement

ನೀರಿನಲ್ಲಿರುವ ವಿಷಾಂಶ ಪತ್ತೆ ಹಚ್ಚಿ ತೆಗೆವ ಉಪಕರಣ: IISER ಸಾಧನೆ

12:32 PM May 17, 2018 | udayavani editorial |

ಕೋಲ್ಕತ : ಇಲ್ಲಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸಯನ್ಸ್‌ ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ (IISER) ಖಾಸಗಿ ಕಂಪೆನಿಯೊಂದರ ಸಹಭಾಗಿತ್ವದಲ್ಲಿ ನೀರಿನಲ್ಲಿರುವ ವಿಷಾಂಶವನ್ನು ತೆಗೆದು ಅದನ್ನು ಮನೆ ಬಳಕೆಗೆ ಮತ್ತು ಕುಡಿಯುವುದಕ್ಕೆ ಯೋಗ್ಯ ಮಾಡುವ ಹೊಸ ಉಪಕರಣವನ್ನು ಅಭಿವೃದ್ಧಿಪಡಿಸಿದೆ.

Advertisement

ಆರ್ಸೆನಿಕ್‌ ಸೆನ್ಸರ್‌ ಆ್ಯಂಡ್‌ ರಿಮೂವಲ್‌ ಮೀಡಿಯ ಎಂಬ ಹೆಸರಿನ ಈ ಉಪಕರಣವು ನೀರಿನಿಂದ ವಿಷಾಂಶವನ್ನು ತೆಗೆದು ಅದನ್ನು ಕುಡಿಯಲು ಮತ್ತು ಮನೆ ಬಳಕೆಗೆ ಯೋಗ್ಯವನ್ನಾಗಿ ಮಾಡಲು ಆತ್ಯಂತ ಪರಿಣಾಮಕಾರಿಯಾಗಿದ್ದು ಇದರ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ ಎಂದು ಐಐಎಸ್‌ಇಆರ್‌ ನಿದೇರ್ಶಕ ಸೌರವ್‌ ಪಾಲ್‌ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಡಾ. ರಾಜಾ ಷಣ್ಮುಗಂ ನೇತೃತ್ವದ ಐಐಎಸ್‌ಇಆರ್‌ ಸಂಶೋಧನ ತಂಡ ಈ ಆರ್ಸೆನಿಕ್‌ ಸೆನ್ಸೆರ್‌ ಉಪಕರಣವನ್ನು ರಾಸಾಯನಿಕ ಉತ್ಪಾದಿಸುವ ಪ್ರಮುಖ ಕಂಪೆನಿಯೊಂದರ ಪ್ರಯೋಗಾಲಯದಲ್ಲಿ  ಅಭಿವೃದ್ಧಿ ಪಡಿಸಿದೆ. ಈ ಉಪಕರಣವನ್ನು ಬಳಸಿದಾಗ ಅದು ಒಡನೆಯೇ ವಿಷಾಂಶಯುಕ್ತ ನೀರಿನ ಬಣ್ಣ ಬದಲಾಗುವುದನ್ನು ತೋರಿಸುತ್ತದೆ ಎಂದು ಡಾ. ರಾಜಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next