Advertisement

‘ಭಾರತದ ಅರ್ಥ ವ್ಯವಸ್ಥೆ ವೇಗದ ಅಭಿವೃದ್ಧಿ ಕಾಣಲಿದೆ’

09:32 AM Nov 19, 2019 | Hari Prasad |

ಹೊಸದಿಲ್ಲಿ: ಮುಂದಿನ ದಶಕದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುವ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಮರ್ಥ್ಯ ಭಾರತಕ್ಕೆ ಇದೆ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೇಳಿದ್ದಾರೆ.

Advertisement

‘ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿದ ಅವರು, ಈ ಅವಧಿಯಲ್ಲಿ ದೇಶದ ಜನರು ಬಡತನದಿಂದ ಮೇಲಕ್ಕೆ ಬರಲಿದ್ದಾರೆ ಎಂದಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಹೆಚ್ಚಿನ ಹೂಡಿಕೆ ಮಾಡಲು ಅವಕಾಶ ಕೊಡಬೇಕು ಎಂದಿರುವ ಅವರು, ದೇಶದಲ್ಲಿ ಆಧಾರ್‌ ಆಧಾರಿತ ಅರ್ಥ ವ್ಯವಸ್ಥೆ ಜಾರಿಯಾಗಿರುವುದು ನಿಜಕ್ಕೂ ಪರಿಣಾಮ ಬೀರಿದೆ ಎಂದಿದ್ದಾರೆ.

ವಿತ್ತೀಯ ಸೇವೆಗಳ ಕ್ಷೇತ್ರದಲ್ಲಿ ಮತ್ತು ಹೊಸ ನಾವಿನ್ಯ ಸಂಶೋಧನೆಯನ್ನು ಭಾರತದಲ್ಲಿ ಕಾಣುತ್ತಿದ್ದೇವೆ. ಆಧಾರ್‌ ಆಧಾರಿತ ವ್ಯವಸ್ಥೆ ಮತ್ತು ಯುಪಿಐ ಆಧಾರಿತ ಪಾವತಿಯ ಬಳಕೆಯೂ ಹೆಚ್ಚಾಗಿದೆ. ಇದು ಶ್ಲಾಘನೀಯ ಎಂದು ಹೇಳಿದ್ದಾರೆ. ನಂದನ್‌ ನಿಲೇಕಣಿ ಸೇರಿದಂತೆ ಹಲವರ ಜತೆಗೆ ನಾವು ಪಾಲುದಾರಿಕೆ ಹೊಂದಿದ್ದೇವೆ. ಡಿಜಿಟಲ್‌ ಇಂಡಿಯಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದಿಂದ ಇತರ ದೇಶಗಳು ಕಲಿಯುವ ಅಂಶ ತುಂಬಾ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next