Advertisement

ಐಐಎಂ ಪ್ರವೇಶ ಪರೀಕ್ಷೆ: ರಾಜ್ಯ ಪ್ರವೇಶಾಕಾಂಕ್ಷಿಗೆ ಶೇ.100 ಅಂಕ

11:12 PM Jan 04, 2020 | Lakshmi GovindaRaj |

ನವದೆಹಲಿ: ಪ್ರತಿಷ್ಠಿತ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ಎಂಬಿಎ ಕೋರ್ಸ್‌ಗೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್‌) ಫ‌ಲಿತಾಂಶ ಶನಿವಾರ ಪ್ರಕಟವಾಗಿದೆ. ಈ ಪೈಕಿ ಕರ್ನಾಟಕದ ಪ್ರವೇಶಾಕಾಂಕ್ಷಿ ಸೇರಿ ಹತ್ತು ಮಂದಿ ನೂರರಲ್ಲಿ ನೂರು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಅವರೆಲ್ಲರೂ ಎಂಜಿನಿಯರಿಂಗ್‌ ಪದವೀಧರರಾಗಿದ್ದಾರೆ. ಮಹಾರಾಷ್ಟ್ರದಿಂದ ನಾಲ್ವರು, ಉಳಿದವರು ಜಾರ್ಖಂಡ್‌, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಾಖಂಡಕ್ಕೆ ಸೇರಿದವರು.

Advertisement

ಒಟ್ಟು 21 ಮಂದಿ ಶೇ.99.9 ಫ‌ಲಿತಾಂಶ ಪಡೆದುಕೊಂಡಿದ್ದಾರೆ. ಅವರಲ್ಲಿ 19 ಮಂದಿ ತಾಂತ್ರಿಕ ಶಿಕ್ಷಣ ಪಡೆದವರು. ಇದೇ ಪ್ರವೇಶ ಪರೀಕ್ಷೆ ಮೂಲಕ ದೇಶದ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳ ಎಂಬಿಎ, ಪೋಸ್ಟ್‌ ಗ್ರಾಜ್ಯುವೇಟ್‌ ಪ್ರೊಗ್ರಾಂ ಇನ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ಗಳಿಗೂ ಪ್ರವೇಶ ಪಡೆಯಲಾಗುತ್ತದೆ. 1.34 ಲಕ್ಷ ಮಂದಿ ಪುರುಷರು ಮತ್ತು 75 ಸಾವಿರ ಮಂದಿ ಮಹಿಳೆಯರು, ಐವರು ತೃತೀಯ ಲಿಂಗಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next