Advertisement

MBA ಕಾಲೇಜುಗಳಲ್ಲಿ IIM ಬೆಂಗಳೂರು ಪ್ರಥಮ

08:36 PM Oct 26, 2023 | Team Udayavani |

ನವದೆಹಲಿ: ಜಗತ್ತಿನ ಪ್ರಮುಖ ಎಂಬಿಎ ಕಾಲೇಜುಗಳ 2024ನೇ ಸಾಲಿನ ಶ್ರೇಯಾಂಕಕ್ಕೆ ಸಂಬಂಧಿಸಿದಂತೆ ಕ್ವಾಕೆರೆಲ್ಲಿ ಸೈಮಂಡ್ಸ್‌ (ಕ್ಯೂ.ಎಸ್‌) ವರ್ಲ್ಡ್ ಯುನಿವರ್ಸಿಟಿ ರ್‍ಯಾಂಕಿಂಗ್ಸ್‌ ಪ್ರಕಟಗೊಂಡಿದೆ. ಅದರಲ್ಲಿ ಮೊದಲ 250 ಶ್ರೇಯಾಂಕಗಳಲ್ಲಿ ದೇಶದ ಎಂಬಿಎ ಕಾಲೇಜುಗಳು ಸ್ಥಾನ ಪಡೆದುಕೊಂಡಿವೆ.

Advertisement

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ 48ನೇ ರ್‍ಯಾಂಕ್‌ ಪಡೆದುಕೊಂಡು ಟಾಪ್‌ 50ರ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಐಐಎಂ ಅಹ್ಮದಾಬಾದ್‌ ಮತ್ತು ಕಲ್ಕತ್ತಾ ಕ್ರಮವಾಗಿ 53 ಮತ್ತು 59ನೇ ಸ್ಥಾನಗಳನ್ನು ಪಡೆದುಕೊಂಡಿವೆ. 78ನೇ ರ್‍ಯಾಂಕ್‌ನಲ್ಲಿ ಹೈದರಾಬಾದ್‌ ಮತ್ತು ಮೊಹಾಲಿಯಲ್ಲಿ ಇರುವ ಇಂಡಿಯನ್‌ ಸ್ಕೂಲ್‌ ಆಫ್ ಬ್ಯುಸಿನೆಸ್‌, 201ರಿಂದ 250ನೇ ರ್‍ಯಾಂಕ್‌ ಸಾಲಿನಲ್ಲಿ ಉದಯಪುರ, ಇಂದೋರ್‌, ಲಕ್ನೋ ಐಐಎಂಗಳು ಇವೆ. ಇದೇ ಶ್ರೇಯಾಂಕದಲ್ಲಿ ಗುರುಗ್ರಾಮದಲ್ಲಿ ಇರುವ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌, ಜೆಮ್‌ಶೆಡ್‌ಪುರದಲ್ಲಿರುವ ಕ್ಸೇವಿಯರ್‌ ಸ್ಕೂಲ್‌ ಆಫ್ ಮ್ಯಾನೇಜ್‌ಮೆಂಟ್‌ ಕೂಡ ಇದ್ದು, ಕೋಲ್ಕತಾದಲ್ಲಿರುವ ಇಂಟರ್‌ನ್ಯಾಷನಲ್‌ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ಗೆ 251ನೇ ರ್‍ಯಾಂಕ್‌ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next