Advertisement

ಇಗ್ಗೋಡ್ಲು: ರೋಟರಿಯಿಂದ 25 ಮನೆ ಹಸ್ತಾಂತರ

10:43 PM Jun 19, 2019 | Team Udayavani |

ಮಡಿಕೇರಿ: ಸೂರಿಲ್ಲದವರಿಗೆ ಮನೆ ನಿಮಿ9ಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗಬೇಕೆಂದು ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್‌ ಬ್ಯಾನರ್ಜಿ ಕರೆ ನೀಡಿದ್ದಾರೆ.

Advertisement

ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181 ನಿಂದ ರೀ ಬಿಲ್ಡ್ ಕೊಡಗು ಯೋಜನೆಯಡಿ ನಿರ್ಮಿಸಲಾದ 25 ಮನೆಗಳನ್ನು ಜಲಪ್ರಳಯ ಸಂತ್ರಸ್ಥರಿಗೆ ಹಸ್ತಾಂತರಿಸಿ ಕಲ್ಯಾಣ್‌ ಬ್ಯಾನರ್ಜಿ ಮಾತನಾಡಿದರು.

ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ರೋಟರಿ ಜಿಲ್ಲೆ 3181 ವತಿಯಿಂದ 25 ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.

ರೋಟರಿ ಜಿಲ್ಲಾ ಗವನ9ರ್‌ ಪಿ.ರೋಹಿನಾಥ್‌ ಮಾತನಾಡಿ, . ಕೇವಲ 3 ತಿಂಗಳಲ್ಲಿ 25 ಮನೆಗಳನ್ನು ತಲಾ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂತ್ರಸ್ಥರಿಗೆ ಯೋಗ್ಯ ಮನೆಗಳನ್ನು ನಿಗಥಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ ಎಂದರು.

ರೋಟರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟ ಹ್ಯಾಬಿಟೇಟ್ ಫಾರ್‌ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿದೇ9ಶಕ ರಾಜನ್‌ ಸ್ಯಾಮುವೆಲ್ ಮಾತನಾಡಿ, ಹ್ಯಾಬಿಟೇಟ್ ಫಾರ್‌ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು 25 ಮನೆಗಳನ್ನು ತಲಾ 5 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ್ದು 10 ಕುಟುಂಬಗಳಲ್ಲಿ ಮಹಿಳೆಯರೇ ನಿವ9ಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫ‌ಲಾನುಭವಿಗಳಾಗಿದ್ದಾರೆ ಎಂದು ಹೆಉಈಳಿದರು.

Advertisement

ಹ್ಯಾಬಿಟೇಟ್ ಫಾರ್‌ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಹಿರಿಯ ನಿದೇ9ಶಕ ಸಂಜಯ್‌ ದಾಸ್ವಾನಿ ರೋಟರಿಯ ರೀಬಿಲ್ಡ್ ಕೊಡಗು ರೋಟರಿ ಮಾಜಿ ಗವರ್ನರ್‌ ಕೃಷ್ಣಶೆಟ್ಟಿ ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ, ರೋಟರಿ ಜಿಲ್ಲೆಯ ಮಾಜಿ ಗವರ್ನರ್‌ ಗಳಾದ ಡಾ| ನಾಗಾರ್ಜುನ್‌, ದೇವದಾಸರೈ, ಮಾತಂಡ ಸುರೇಶ್‌ ಚಂಗಪ್ಪ, ಆರ್‌.ಕೃಷ್ಣ, ನಾಗೇಂದ್ರಪ್ರಸಾದ್‌, ಮುಂದಿನ ಸಾಲಿನ ರೋಟರಿ ಗವರ್ನರ್‌ ಜ್ಯೊಸೆಫ್ ಮ್ಯಾಥ್ಯು, ನಿಯೋಜಿತ ಗವನ9ರ್‌ ರಂಗನಾಥ ಭಟ್ ಉಪಸ್ಥಿತರಿದ್ದರು.

ಫ‌ಲಾನುಭವಿಗಳಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಲಾಯಿತು ಕುಶಾಲನಗರ ಇನ್ನರ್‌ ವೀಲ್ ಸಂಸ್ಥೆಯಿಂದ 25 ಫ‌ಲಾನುಭವಿಗಳಿಗೆ ಗ್ಯಾಸ್‌ ಸ್ಟೌವ್‌ ಮತ್ತು ವಾಟರ್‌ ಫಿಲ್ಟರ್‌ ಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next