Advertisement

Nitishಗೆ ಭಾರೀ ಹಿನ್ನಡೆ: ಜಾತಿ ಆಧಾರಿತ ಶೇ.65 ಮೀಸಲಾತಿ ಕಾಯ್ದೆ ರದ್ದುಗೊಳಿಸಿದ ಹೈಕೋರ್ಟ್

02:53 PM Jun 20, 2024 | Team Udayavani |

ಪಾಟ್ನಾ: ಆರ್ಥಿಕವಾಗಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಿಹಾರ ಸರ್ಕಾರ ಜಾರಿ ಮಾಡಿದ್ದ ಶೇ.65 ಮೀಸಲಾತಿಯನ್ನು ಪಾಟ್ನಾ ಹೈಕೋರ್ಟ್‌ ಗುರುವಾರ (ಜೂನ್‌ 20) ರದ್ದುಗೊಳಿಸಿದೆ.‌

Advertisement

ಇದನ್ನೂ ಓದಿ:ಕೆಲಸದ ನಿಮಿತ್ತ ಶಿವಮೊಗ್ಗ ತೆರಳುವ ವೇಳೆ ಹೃದಯಾಘಾತ… ಮೇಲಿನಕುರುವಳ್ಳಿಯ ಶಶಿಧರ್ ನಿಧನ

2023ರ ನವೆಂಬರ್‌ ನಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ಸರ್ಕಾರ ಹೊಸ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಅವರು ಈ ತೀರ್ಪು ನೀಡಿದ್ದಾರೆ.

ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಲಾಗಿತ್ತು ಎಂದು ಅರ್ಜಿದಾರರಲ್ಲಿ ಒಬ್ಬರಾದ ರಿತಿಕಾ ರಾಣಿ ಪರ ವಕೀಲರು ತಿಳಿಸಿದ್ದಾರೆ.

ಮೀಸಲಾತಿಗೆ ತಿದ್ದುಪಡಿ ತಂದ ಕುರಿತು ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್‌ ಮಾರ್ಚ್‌ ನಲ್ಲಿ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಅಂತಿಮ ತೀರ್ಪನ್ನು ಪ್ರಕಟಿಸಿರುವುದಾಗಿ ವರದಿ ವಿವರಿಸಿದೆ.

Advertisement

ಎಎನ್‌ ಐ ನ್ಯೂಸ್‌ ಏಜೆನ್ಸಿ ವರದಿ ಪ್ರಕಾರ, ಬಿಹಾರದ ಖಾಲಿ ಹುದ್ದೆಗಳ ಮತ್ತು ಸೇವೆಗಳ ತಿದ್ದುಪಡಿ ಕಾಯ್ದೆ 2023 ಮತ್ತು ಬಿಹಾರದ (ಶಿಕ್ಷಣ ಸಂಸ್ಥೆಗಳ ಪ್ರವೇಶ) ಮಿಸಲಾತಿ ಕಾಯ್ದೆ 2023 ಅಸಾಂವಿಧಾನಿಕ ಹಾಗೂ ಸಂವಿಧಾನದ ಸಮಾನತೆ ಕಲಂ 14,15 ಮತ್ತು 16ರ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್‌ ಘೋಷಿಸಿದೆ.

2023ರಲ್ಲಿ ನಿತೀಶ್‌ ಕುಮಾರ್‌ ಸರ್ಕಾರ ಜಾತಿ ಗಣತಿ ಆಧಾರದ ಮೇಲೆ ಅಧಿಕೃತವಾಗಿ ಎರಡು ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಈ ಕಾಯ್ದೆಯಿಂದ ಉದ್ಯೋಗ ಮತ್ತು ಶಾಲಾ, ಕಾಲೇಜುಗಳ ಪ್ರವೇಶಾತಿ ಮೀಸಲು ಪ್ರಮಾಣವನ್ನು ಹೆಚ್ಚಳಗೊಳಿಸಿತ್ತು. ಎಸ್‌ ಸಿ, ಎಸ್‌ ಟಿ, ಇಬಿಸಿ, ಒಬಿಸಿ ವರ್ಗಗಳಿಗೆ ಇದ್ದ ಶೇ.50ರಷ್ಟು ಮೀಸಲಾತಿಯನ್ನು ಶೇ.65ಕ್ಕೆ ಏರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next