Advertisement
ಭಾರತೀಯ ಚಿತ್ರರಂಗದಲ್ಲಿ ಇತಿಹಾಸವನ್ನು ನಿರ್ಮಿಸಿರುವ ಕನ್ನಡದ ಕಾಂತಾರ ಚಲನಚಿತ್ರದ ರಿಷಬ್ ಶೆಟ್ಟಿ ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಅತ್ಯುತ್ತಮ ನಟ ಪ್ರಶಸ್ತಿಗೆ ಎಂಡ್‌ಲೆಸ್ ಬಾರ್ಡರ್‌ನ ಪೌರಿಯಾ ರಹಿಮಿ ಸಾಮ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾರ್ಟಿ ಆಫ್ ಫೂಲ್ಸ್‌ನ ಮೆಲನೈ ಥೈರಿ ಪಾತ್ರರಾದರು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬ್ಲಾಗಸ್ ಲೆಸನ್ಸ್ ಚಿತ್ರದ ಸ್ಟೀಫನ್ ಕೊಮನ್‌ಡರೆವ್ ಅವರ ಪಾಲಾಯಿತು.
Related Articles
ನ. 20ರಿಂದ 28ರ ವರೆಗೆ ನಡೆದ ಉತ್ಸವದಲ್ಲಿ ವಿವಿಧ ದೇಶಗಳ 720ಕ್ಕೂ ಹೆಚ್ಚು ಚಲನಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನಗೊಂಡವು. 13 ವಿಶ್ವ ಪ್ರೀಮಿಯರ್, 18 ಅಂತಾರಾಷ್ಟ್ರೀಯ ಪ್ರೀಮಿಯರ್, 62 ಏಷ್ಯಾ ಪ್ರೀಮಿಯರ್‌ಹಾಗೂ 89 ಭಾರತ ಪ್ರೀಮಿಯರ್‌ಗಳು ಇದ್ದವು. ಒಟ್ಟು 105 ದೇಶಗಳ 2926 ಪ್ರವೇಶಗಳು ಚಿತ್ರೋತ್ಸವದ ಆಯ್ಕೆ ಸಮಿತಿಗೆ ಬಂದಿದ್ದವು.
ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ರಿಷಭ್ ಶೆಟ್ಟಿಯವರ ಕಾಂತಾರ ಹಾಗೂ ಸಂದೀಪ ಕುಮಾರರ “ಆರಿರಾರಿರೋ’ ಚಿತ್ರವೂ ಸೇರಿದಂತೆ 25 ಕಥಾ ಹಾಗೂ 20 ಕಥೇತರ ಚಿತ್ರಗಳು ಪ್ರದರ್ಶನಗೊಂಡವು. ಕಥಾ ವಿಭಾಗವನ್ನು ಮಲಯಾಳಿಯ ಆಟ್ಟಂ ಆರಂಭಿಸಿದರೆ, ಕಥೇತರ ವಿಭಾಗಕ್ಕೆ ಮಣಿಪುರ ಭಾಷೆಯ ಅಂಡ್ರೋ ಡ್ರೀಮ್ಸ… ಚಿತ್ರ ಚಾಲನೆ ನೀಡಿತ್ತು.
Advertisement
ಸಿನೆಮಾ ಜನರಿಗೆ ತಲುಪಲು ಚಿತ್ರೋತ್ಸವ ಪ್ರೇರಕಮಾನವ ಕೇಂದ್ರಿತ ಕಥೆಗಳನ್ನು ಹೇಳುವ ಸಿನೆಮಾಗಳು ಹೆಚ್ಚಾಗಬೇಕು. ಜನರು ಇಂತಹ ಸಿನೆಮಾಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವುಗಳು ಜನರಿಗೆ ತಲುಪುವುದಕ್ಕೆ ಇಂತಹ ಚಿತ್ರೋತ್ಸವಗಳು ಪ್ರೇರಕವಾಗುತ್ತವೆ ಎಂದು ಅಂತಾರಾಷ್ಟ್ರೀಯ ಸಿನೆಮಾ ವಿಭಾಗ ಸ್ಪರ್ಧೆಯ ತೀರ್ಪುಗಾರ ಸಮಿತಿಯ ಅಧ್ಯಕ್ಷ ಶೇಖರ್ ಕಪೂರ್ ಅವರು ತೀರ್ಪು ಪ್ರಕಟಿಸಿದ ಬಳಿಕ ತಿಳಿಸಿದರು.