ಮಳೆ ನಮ್ಮ ಜೀವನದ ಬಹುಮುಖ್ಯ ಭಾಗ ಇದು ನಮ್ಮೆಲ್ಲರಿಗೂ ನೀರಿನ ಪ್ರಾಥಮಿಕ ಮೂಲವಾಗಿದೆ. ಆದರೆ ಮಳೆ ನಮಗೆ ನೀರನ್ನು ಮಾತ್ರ ನೀಡುವುದಿಲ್ಲ ಪ್ರಕೃತಿಯನ್ನು ಶಾಂತಗೊಳಿಸುತ್ತದೆ ಹಾಗೂ ಜೀವಸಂಕುಲಗಳ ಮೇಲೆ ಉÇÉಾಸಕರ ಪರಿಣಾಮವನ್ನು ಬೀರುತ್ತದೆ.
ಮಳೆಯ ದಿನಗಳಲ್ಲಿ ಪ್ರಕೃತಿಯು ಎಷ್ಟು ಲಯಬದ್ದ ಮತ್ತು ಹಿತಕರವಾಗಿರುತ್ತದೆ ಎಂದರೆ ಮೋಡಗಳು ಆಕಾಶದಲ್ಲಿ ಮೆರವಣಿಗೆ ಮಾಡುತ್ತಾ ಮಳೆಯ ಹನಿಗಳನ್ನ ಸುರಿಸುತ್ತವೆ. ಮರಗಳು ಮೋಹಕ ಆನಂದದಿಂದ ನಸುನಗುತ್ತಿರುತ್ತವೆ. ಕಪ್ಪೆಗಳು ಅಲ್ಲಿ- ಇಲ್ಲಿ ಓಡಾಡುತ್ತಿರುತ್ತವೆ. ಕೇಸರಿನ ನೀರಿನಲ್ಲಿ ಸಂತೋಷದಿಂದ ಜಿಗಿಯುವ ಮಕ್ಕಳು ಈ ಸುಂದರ ದೃಶ್ಯಗಳು ಗೋಚರವಾಗುವುದೇ ಮಳೆಗಾಲದ ಸಂದರ್ಭದಲ್ಲಿ. ಹರ್ಷಚಿತ್ತ¤ವಾಗಿ ಹೊಲಗಳಲ್ಲಿ ಬೇಸಾಯ ಮಾಡುವ ರೈತರು ಅವರ ಕಣ್ಣುಗಳಲ್ಲಿ ಹೊಸ ಭರವಸೆಗಳು ಹೊರ ಹೊಮ್ಮುವುದು ಮಳೆಗಾಲದಲ್ಲಿ.
ಆದರೆ ಈ ಕಾಲಘಟ್ಟದಲ್ಲಿ ಮಳೆಯು ಹವಾಮಾನಕ್ಕೆ ಅನುಗುಣವಾಗಿ ಬರುತ್ತಿಲ್ಲ ಅದಕ್ಕೆ ಕಾರಣ ಮನುಷ್ಯನೇ. ಮನುಷ್ಯನ ಅತಿಯಾದ ಆಸೆಯಿಂದಾಗಿ ಇಂದು ಪ್ರಕೃತಿಯಲ್ಲಿ ಮರಗಿಡಗಳು ಇಲ್ಲದೆ ಮಳೆಯ ಪ್ರಮಾಣ ಕಡಿಮೆ ಯಾಗಿದೆ ಇದರಿಂದ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಮಳೆ ಇದ್ದರೆ ಅಷ್ಟೇ ಬೆಳೆ ಹಾಗಾಗಿ ಮರಗಿಡಗಳನ್ನು ಬೆಳೆಸಿ ಉಳಿಸಬೇಕು.
ಭೂಮಿ ತಾಯಿ ಒಡಲು ತಂಪಾಗಿದ್ದರೆ. ಮಳೆ ಹವಾಮಾನಕ್ಕೆ ಅನುಗುಣವಾಗಿ ಸುರಿದರೆ ಹಸುರು ಚಿಗುರೊಡೆದು ಪ್ರಕೃತಿಯಲ್ಲಿ ಮರಗಿಡಗಳು ಬೆಳೆದು ಇದ್ದರೆ ನಮಗೆ ಉಸಿರಾಡಲು ಸರಿಯಾದ ಆಕ್ಸಿಜನ್ ಸಿಗುತ್ತದೆ. ಮಳೆ ಎಂಬುದು ನಮಗೂ ಹಾಗೂ ಈ ಪ್ರಕೃತಿಗೆ ಬಹುಮುಖ್ಯವಾಗಿರುವಂತದ್ದು.
ನವಿತಾ ಆರ್.
ಎಂ.ಜಿ.ಎಂ., ಉಡುಪಿ