Advertisement

ಪ್ಲಾಸ್ಟಿಕ್‌ ಕೊಟ್ಟರೆ ಸಿಗಲಿದೆ ಒಂದು ಕೆ.ಜಿ.ಅಕ್ಕಿ!

09:49 PM Jan 02, 2020 | Sriram |

ಶಿರ್ವ: ಈಗೀಗ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್‌ ಕಸ. ಪ್ಲಾಸ್ಟಿಕ್‌ ನಿಷೇಧವಿದ್ದರೂ ಅದು ಅನುಷ್ಠಾನವಾಗುತ್ತಿಲ್ಲ. ಜನಜಾಗೃತಿಗಾಗಿ ಸಂಘ ಸಂಸ್ಥೆಗಳು ನಿರಂತರವಾಗಿ ಯತ್ನಿಸುತ್ತಿವೆ. ಏತನ್ಮಧ್ಯೆ ಶಿರ್ವದಲ್ಲೊಂದು ವಿನೂತನ ಯತ್ನ ಮಾಡಲಾಗಿದೆ. ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್‌.ಪಾಟ್ಕರ್‌ ತಮ್ಮ ವಾರ್ಡ್‌ನ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ, ಕರಪತ್ರದ ಜೊತೆಗೆ ಉಚಿತ ಬಟ್ಟೆ ಚೀಲಗಳನ್ನು ವಿತರಿಸುತ್ತಾರೆ ಅಷ್ಟೇ ಅಲ್ಲದೆ ಬಂಟಕಲ್ಲು -ಬಿಸಿರೋಡ್‌ ಲಯನ್ಸ್‌ ಕ್ಲಬ್‌ ಸಹಕಾರದೊಂದಿಗೆ ಪ್ಲಾಸ್ಟಿಕ್‌ ನೀಡಿದವರಿಗೆ ಕೆ.ಜಿ. ಅಕ್ಕಿ ನೀಡುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

Advertisement

ಸಾರ್ವಜನಿಕರಿಗೆ ಮಾಹಿತಿ
ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಅಥವಾ ರಸ್ತೆ ಬದಿಯಲ್ಲಿ ಹರಡಿಕೊಂಡಿರುವ ವಿವಿಧ ರೀತಿಯ ಪ್ಲಾಸ್ಟಿಕ್‌ ನೀಡಿದರೆ ಅಕ್ಕಿ ಸಿಗಲಿದೆ. ಸಂಘಟಕರಿಗೆ ತಿಳಿಸಿದಲ್ಲಿ ಮನೆಗೆ ತೆರಳಿ ಪ್ಲಾಸ್ಟಿಕ್‌ ಸಂಗ್ರಹಿಸಿ ಅಷ್ಟೇ ಕೆ.ಜಿ. ಅಕ್ಕಿಯನ್ನು ಸ್ಥಳದಲ್ಲೇ ನೀಡಲಾಗುತ್ತದೆ.

ಸಂಘಟಕರು ಈ ಕಾರ್ಯಕ್ರಮವನ್ನು 15 ದಿನಗಳ ಕಾಲ ಆಯೋಜನೆ ಮಾಡಿದ್ದಾರೆ. ಇದರೊಂದಿಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ನ್ನು ಬಂಟಕಲ್ಲಿನಲ್ಲಿ ಮುಖ್ಯರಸ್ತೆಯ ಪಾಟ್ಕರ್‌ ಎಂಟರ್‌ಪ್ರೈಸಸ್‌ ಮತ್ತು ಶಿರ್ವದಲ್ಲಿ ರಿಕ್ಷಾ ತಂಗುದಾಣದ ಹಿಂಬದಿಯ ಲಕ್ಷ್ಮೀ ಸ್ಟೋರ್ ನಲ್ಲಿ ನೀಡಿ ಅಕ್ಕಿ ಪಡೆಯಬಹುದು. ಜನರು 5 ಕೆಜಿಗಿಂತ ಹೆಚ್ಚಿನ ಪ್ಲಾಸ್ಟಿಕ್‌ ತಂದರೆ ಉಚಿತ ಬಟ್ಟೆ ಚೀಲದಲ್ಲಿ ಅಷ್ಟೇ ಅಕ್ಕಿ ಸಿಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಸ ಹೆಕ್ಕುವ ಸ್ಪರ್ಧೆ
ಈ ಮೊದಲು ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಮಂಡಳಿ ಮತ್ತು ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರ ತಂಡದೊಂದಿಗೆ ಶಂಕರಪುರದ ಸಾಲ್ಮರ ದಿಂದ ಶಿರ್ವದ ಪಂಜಿಮಾರು ಕೋಡುಗುಡ್ಡೆಯ ವರೆಗೆ ರಸ್ತೆ ಬದಿಯಲ್ಲಿರುವ ಪಾRಸ್ಟಿಕ್‌ ಹೆಕ್ಕುವ ಕಾರ್ಯಕ್ರಮ ನಡೆಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪ್ಲಾಸ್ಟಿಕ್‌ ಮುಕ್ತ ಸಮಾಜ
ಭವಿಷ್ಯದಲ್ಲಿ ಸ್ವತ್ಛ ಭಾರತ ದೊಂದಿಗೆ ಪ್ಲಾಸ್ಟಿಕ್‌ ಮುಕ್ತ ಭಾರತ ಆಗಬೇಕು. ಈ ನಿಟ್ಟಿನಲ್ಲಿಗ್ರಾಮ ಮಟ್ಟದಿಂದ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಾಗ ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯ.
– ಕೆ.ಆರ್‌. ಪಾಟ್ಕರ್‌,
ಶಿರ್ವ ಗ್ರಾ.ಪಂ. ಸದಸ್ಯ ,ಬಂಟಕಲ್ಲು ಲಯನ್ಸ್‌ ಕ್ಲಬ್‌ಅಧ್ಯಕ್ಷ

Advertisement

– ಸತೀಶ್ಚಂದ್ರ ಶೆಟ್ಟಿ ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next