ಆದರೆ, ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ (ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ) ತನ್ನ “ಸಂಭಾವ್ಯ ಸುಸ್ತಿದಾರ’ ಗ್ರಾಹಕರಿಗೆ ಚಾಕೊಲೇಟ್ ಪ್ಯಾಕ್ ಅನ್ನು ಕಳುಹಿಸಲಿದೆಯಂತೆ! ರಿಟೇಲ್ ಸಾಲಗಾರರು ಮಾಸಿಕ ಕಂತನ್ನು ಗ್ರಾಹಕರು ಸಮಯಕ್ಕೆ ಸರಿಯಾಗಿ ಪಾವತಿಸಲಿ ಎಂಬುವುದೇ ಬ್ಯಾಂಕ್‌ನ ಉದ್ದೇಶ.
Advertisement
ಪ್ರತಿ ತಿಂಗಳು ಬ್ಯಾಂಕ್ ಸಿಬ್ಬಂದಿಯು ಸಾಲಗಾರ ಗ್ರಾಹಕರಿಗೆ ಕರೆ ಮಾಡಿ, ಮಾಸಿಕ ಕಂತು ಪಾವತಿಸುವಂತೆ ನೆನಪಿಸುತ್ತಾರೆ. ಆದರೆ, ಯಾರು ಆ ತಿಂಗಳ ಕಂತಿನಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿರುತ್ತಾರೋ ಅಂಥವರು ಫೋನ್ ಕರೆಯನ್ನು ಸ್ವೀಕರಿಸುವುದಿಲ್ಲ ಎನ್ನುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಂಥ ಗ್ರಾಹಕರ ಮನೆಗೇ ಚಾಕೊಲೇಟ್ ಪ್ಯಾಕ್ ಅನ್ನು ಕಳುಹಿಸಿ, ಕಂತು ಪಾವತಿಸುವಂತೆ ನೆನಪಿಸುತ್ತೇವೆ ಎಂದು ಬ್ಯಾಂಕ್ ಹೇಳಿದೆ.