Advertisement

1091ಕ್ಕೆ ಕರೆ ಮಾಡಿದರೆ ಡ್ರಾಪ್‌ ನೀಡುವುದು ಫೇಕ್‌ ನ್ಯೂಸ್‌: ಪೊಲೀಸ್‌ ಇಲಾಖೆ ಸ್ಪಷ್ಟನೆ

02:45 PM Aug 23, 2024 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಮಹಿಳೆಯರು 1091ಗೆ ಕರೆ ಮಾಡಿದರೆ, ಪೊಲೀಸರು ಕರೆದೊಯ್ದು ಮನೆಗೆ ಡ್ರಾಪ್‌ ಕೊಡುತ್ತಾರೆ ಎಂಬ ಸುದ್ದಿಯನ್ನು ಕೆಲ ಕಿಡಿಗೇಡಿಗಳು ವೈರಲ್‌ ಮಾಡಿದ್ದು, ಅದಕ್ಕೆ ಸ್ಪಷ್ಟನೆ ನೀಡಿರುವ ರಾಜ್ಯ ಪೊಲೀಸರು, ಇದೊಂದು ಸುಳ್ಳು ಸಂದೇಶ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಎಕ್ಸ್‌ ಹಾಗೂ ಫೇಸ್‌ಬುಕ್‌ನಲ್ಲಿ ಕೆಲ ಕಿಡಿಗೇಡಿಗಳು “ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ಅವಧಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಯಾವುದಾದರೂ ವಾಹನ ದೊರೆಯದಿದ್ದಾಗ, ಸಹಾಯ ವಾಣಿ 1091ಗೆ ಕರೆ ಮಾಡಿದರೆ, ಪೊಲೀಸರೇ ವಾಹನದಲ್ಲಿ ಉಚಿತವಾಗಿ ಕರೆದೊಯ್ದು ಮನೆಗೆ ಡ್ರಾಪ್‌ ಕೊಡುತ್ತಾರೆ’ ಎಂದು ಪೋಸ್ಟ್‌ ಮಾಡಿದ್ದರು.

ಅದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸರು, ಇಂತಹ ಹೊಸ ಯೋಜನೆಯನ್ನು ಪೊಲೀಸರು ಜಾರಿಗೆ ತಂದಿಲ್ಲ. ಇದು ಶುದ್ಧ ಸುಳ್ಳು. ಇದನ್ನು ಸಾರ್ವಜನಿಕರು ನಂಬಬಾರದು. ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ಈ ಪೋಸ್ಟ್‌ ಮಾಡಿದ ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next