Advertisement

ಸಬ್ಸಿಡಿ ಬರುತ್ತಿದೆಯೇ, ಇಲ್ಲವೇ..? ಹೇಗೆ ನೋಡುವುದು..? ಇಲ್ಲಿದೆ ಮಾಹಿತಿ

06:59 PM Jul 12, 2021 | Team Udayavani |

ನವ ದೆಹಲಿ : ಎಲ್ ಪಿ ಜಿ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತದೆಯೋ , ಇಲ್ಲವೋ..? ಎನ್ನುವುದನ್ನು ನೀವು ತಿಳಿದುಕೋಳ್ಳಬೇಕು ಎಂದಾದರೇ, ಸುಲಭ ಮಾರ್ಗವಿದೆ. ನೀವು ಆನ್ ಲೈನ್ ಮೂಲಕಚೇ ನೀವೇ ಸ್ವತಃ ಇದನ್ನು ಪರಿಶೀಲಿಸಿಕೊಳ್ಳಬಹುದು.

Advertisement

ಇದನ್ನೂ ಓದಿ : BSY ಕುರ್ಚಿ ಅಲುಗಾಡುತ್ತಿದ್ದು, ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ : ಸಿದ್ದು

ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ :

  1.  www.mylpg.in ತೆರೆಯಿರಿ.
  2. ಸ್ಕ್ರೀನ್  ಬಲ ಭಾಗದಲ್ಲಿ ಅನಿಲ ಕಂಪನಿಗಳ ಗ್ಯಾಸ್ ಸಿಲಿಂಡರ್‌ ಗಳ ಫೋಟೋ ಕಾಣಿಸುತ್ತದೆ.
  3. ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್‌ ನ ಫೋಟೋ ಮೇಲೆ  ಕ್ಲಿಕ್ ಮಾಡಿ.
  4. ಸ್ಕ್ರೀನ್ ಮೇಲೆ ಹೊಸದೊಂದು ವಿಂಡೋ ತೆರೆಯುತ್ತದೆ. ಅದರಲ್ಲಿ  ಗ್ಯಾಸ್  ಪೂರೈಕೆದಾರರ ಫೋಟೋ ಕಾಣ ಸಿಗುತ್ತದೆ.
  5. ಮೇಲೆ ಬಲ ಭಾಗದಲ್ಲಿರುವ ಸೈನ್-ಇನ್ ಮಾಡಿ, ಆ ನಂತರ ನ್ಯೂ ಯುಸರ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು.
  6. ಸೈನ್ ಇನ್ ಮಾಡಿ. ನಿಮ್ಮ ಬಳಿ ಐಡಿ ಇಲ್ಲದಿದ್ದರೆ,  ನ್ಯೂ ಯುಸರ್ ಮೇಲೆ ಟ್ಯಾಪ್ ಮಾಡುವ ಮೂಲಕ  ವೆಬ್‌ ಸೈಟ್‌ ಗೆ ಲಾಗಿನ್ ಮಾಡಬೇಕಾಗುತ್ತದೆ.
  7. ವಿಂಡೋ ತೆರೆದುಕೊಳ್ಳುತ್ತದೆ, ಬಲಭಾಗದಲ್ಲಿರುವ ವೀವ್ ಸಿಲಿಂಡರ್ ಬುಕಿಂಗ್ ಹಿಸ್ಟರಿ ಮೇಲೆ  ಟ್ಯಾಪ್ ಮಾಡಬೇಕು.
  8. ಯಾವ ಸಿಲಿಂಡರ್‌ ಗೆ ಸಬ್ಸಿಡಿ ನೀಡಲಾಗಿದೆ ಹಾಗೂ ಯಾವಾಗ ಸಬ್ಸಿಡಿ ನೀಡಲಾಗಿದೆ ಎನ್ನುವುದನ್ನು ನೀವು ಇಲ್ಲಿ ಪಡೆಯಬಹುದು.
  9. ಗ್ಯಾಸ್ ಬುಕ್ ಮಾಡಿದ್ದರೆ ಹಾಗೂ ಸಬ್ಸಿಡಿ ಹಣವನ್ನು ಸ್ವೀಕರಿಸದಿದ್ದರೆ ಫೀಡ್ ಬ್ಯಾಕ್ ಬಟನ್ ಕ್ಲಿಕ್ ಮಾಡಿ.
  10. ನೀವು ಸಬ್ಸಿಡಿ ಹಣವನ್ನು ಸ್ವೀಕರಿಸದ ದೂರನ್ನು  ಸಲ್ಲಿಸಲು ಆಯ್ಕೆ ತೆರೆದುಕೊಳ್ಳುತ್ತದೆ.
  11. 18002333555 ಟೋಲ್ ಫ್ರೀ ನಂಬರ್ ಗೆ ಉಚಿತವಾಗಿ ಕರೆ ಮಾಡಿ ಕೂಡಾ  ದೂರು ದಾಖಲಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಪ್ರವಾಸಿ, ಧಾರ್ಮಿಕ ಸ್ಥಳದಲ್ಲಿ ಜನಜಂಗುಳಿ; ಕೋವಿಡ್ 3ನೇ ಅಲೆಗೆ ಆಹ್ವಾನ: ಐಎಂಎ ಕಳವಳ

Advertisement

Udayavani is now on Telegram. Click here to join our channel and stay updated with the latest news.

Next