Advertisement

ಅರ್ಥಶಾಸ್ತ್ರದ ಅರಿವಿದ್ದರೆ ಉತ್ತಮ ಬದುಕು

03:13 PM Jun 06, 2018 | Team Udayavani |

ಅರ್ಥಶಾಸ್ತ್ರ ಬದುಕಿನ ಮೇಲೆ ಬೀರುವ ಪರಿಣಾಮ ಏನು?
ಬದುಕಿನಲ್ಲಿ ಆರ್ಥಶಾಸ್ತ್ರವೇ ಎಲ್ಲ. ಅರ್ಥಶಾಸ್ತ್ರದ ಆನುಭವವಿದ್ದರೆ ಸುಂದರ ಬದುಕು ರೂಪಿಸಿಕೊಳ್ಳಬಹುದು. ನಮ್ಮ ದೈನಂದಿನ ವ್ಯವಹಾರ ಚೆನ್ನಾಗಿ ನಡೆಯಬೇಕಿದ್ದರೆ ಅರ್ಥಶಾಸ್ತ್ರದ ಅರಿವು ಬಹುಮುಖ್ಯ.

Advertisement

ಅರ್ಥಶಾಸ್ತ್ರ ಕಲಿಕೆ ಕಷ್ಟ ಎನ್ನುತ್ತಾರೆ? ಯಾಕೆ? ಮತ್ತು ಇದನ್ನು ಕಲಿಯುವ ಸುಲಭೋಪಾಯವೇನು?
ಕಷ್ಟ ಎನ್ನುವುದನ್ನು ದೂರವಿಟ್ಟು, ಆಸಕ್ತಿ ಬೆಳೆಸಿಕೊಂಡರೆ ಕಲಿಕೆ ಸುಲಭವಾಗುತ್ತದೆ. ಆಸಕ್ತಿ ಬೆಳೆಸಿಕೊಂಡು ಹಾಗೂ ಅನಿವಾರ್ಯವಾಗಿ ಪ್ರತಿಯೊಬ್ಬನಿಗೂ ಬೇಕು ಎಂಬುದನ್ನು ಅರಿತುಕೊಂಡಾಗ ಕಲಿಕೆ ಸರಳವಾಗುತ್ತದೆ.

ವ್ಯಕ್ತಿತ್ವ ವಿಕಸನಗೊಳಿಸಲು ಇರುವ ಅತ್ಯಂತ ಸರಳ ವಿಧಾನ ಯಾವುದು?
ಆಸಕ್ತಿ ವಹಿಸಬೇಕು. ವ್ಯಕ್ತಿತ್ವ ವಿಕಸನ ತರಬೇತಿಗಳಲ್ಲಿ ಭಾಗವಹಿಸುವುದು ಹಾಗೂ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವುದು ಅಗತ್ಯ.

ರಂಗ ಕಲೆ ಕಲಿಕೆಗೆ ಯುವ ಜನರ ಆಸಕ್ತಿ ಹೇಗಿದೆ?
ರಂಗಕಲೆ ಎಂಬುದು ಇತರ ಕೆಲಸಗಳ ಜತೆ ಬೆಳೆಸಿಕೊಂಡರೆ ಉತ್ತಮ. ಇಂದಿನ ಶೈಕ್ಷ ಣಿಕ ವಿಧಾನ, ಪರೀಕ್ಷಾ  ಸಿದ್ಧತೆ, ಓದಿಗಾಗಿ ಒತ್ತಡದಿಂದ ಅನಿವಾರ್ಯವಾಗಿ ವಿದ್ಯಾರ್ಥಿಗಳು ಈ ಕ್ಷೇತ್ರಗಳತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೂ ಹಲವರು ಮನೆಯ ಇಂತಹ ವಾತಾವರಣದಿಂದ ಹೊರಗೆ ಬಂದು ರಂಗಕಲೆ ಕಲಿಕೆಯ ಜತೆಗೆ ಉತ್ತಮ ಸಾಧನೆ ಮಾಡಿದ್ದಾರೆ.

ರಂಗ ಕಲೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆಯೇ?
ಕಷ್ಟ. ಆದರೆ ಸಾಧನೆಯ ಛಲವಿದ್ದರೆ ಖಂಡಿತಾ ಸಾಧ್ಯವಿದೆ. ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ವೃತ್ತಿಯಲ್ಲಿ ಸಂತೃಪ್ತಿ, ಮಾನಸಿಕ ಒತ್ತಡಗಳನ್ನು ನಿವಾರಿಕೊಳ್ಳಲು ಸಾಧ್ಯ. ರಂಗಕಲೆ ಮಾನಸಿಕ ಶಕ್ತಿ ನೀಡಲು ಸಹಕಾರಿಯಾಗಿದೆ. ಅದನ್ನೇ ನಂಬಿ ಕೊಂಡು
ಬದುಕುವುದು ಕಷ್ಟವಾದರೂ ಆದರ ಜತೆ ಬದುಕುವುದು ಸುಲಭ.

Advertisement

ಜ್ಞಾನ ವೃದ್ಧಿ, ವ್ಯಕ್ತಿತ್ವ ವಿಕಸನಕ್ಕೆ ರಂಗಕಲೆ ಹೇಗೆ ಪೂರಕ?
ರಂಗಕಲೆ ಎನ್ನುವುದು ಆಹಾರದಲ್ಲಿ ಉಪಾಹಾರ ಇದ್ದ ಹಾಗೆ. ಪರಿಸರ ಸಂರಕ್ಷಣೆ, ಮತದಾರರ ಜಾಗೃತಿ ಮೊದಲಾದ ವಿಷಯಗಳ ಬಗ್ಗೆ ಅಭಿನಯದ ಮೂಲಕ ನಾಟಕ, ಬೀದಿ ನಾಟಕ ಮೊದಲಾದವುಗಳನ್ನು ಮಾಡುವುದರಿಂದ ಆ ವಿಷಯಗಳ ಬಗ್ಗೆ ಜ್ಞಾನವೂ ಲಭಿಸುತ್ತದೆ ಹಾಗೂ ವ್ಯಕ್ತಿತ್ವ ವಿಕಸನವೂ ಆಗುತ್ತದೆ. 

ಜಿಎಸ್‌ಟಿ ದೇಶದ ಆರ್ಥಿಕ ಬೆಳವಣಿಗೆಗೆ ಉತ್ತಮವೇ? ಹೇಗೆ?
 ಖಂಡಿತವಾಗಿಯೂ ಉತ್ತಮ. ಎಲ್ಲ ವಸ್ತುಗಳ ಮೇಲೆ, ಸೇವೆಗಳ ಮೇಲೆ ತೆರಿಗೆ ವಿಧಿಸುವುದರಿಂದ ಖರ್ಚು ಹಾಗೂ ಆದಾಯ ಲೆಕ್ಕಕ್ಕೆ ಸಿಗುತ್ತದೆ. ಆರಂಭಿಕ ಹಂತದಲ್ಲಿ ಇದನ್ನು ಅರ್ಥೈಸಿಕೊಳ್ಳುವುದು ಕಷ್ಟ, ಹೊಂದಿಕೊಂಡ ಬಳಿಕ ಪ್ರಯೋಜನದ ಆರಿವಾಗುತ್ತದೆ.

ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next