ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರೈತರನ್ನು ಗೌರವಿಸುತ್ತಿಲ್ಲ, ಬದಲಾಗಿ ರೈತ ಚಳುವಳಿಯಲ್ಲಿ ನಿರತರಾದವನ್ನು ಕಡೆಗಣಿಸುವ ಮೂಲಕ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಯ ವಿರುದ್ಧ ನಡೆಸಲಾಗುತ್ತಿರುವ ರೈತ ಚಳುವಳಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಕಿಸಾನ್ ಅಧಿಕಾರ್ ದಿವಸ್’ ಅನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಮಸೂದೆಯನ್ನು ಹಿಂದಕ್ಕೆ ಪಡೆಯಲೇಬೇಕು. ಅಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದಿರುವ ರಾಹುಲ್, ಈ ಕಾಯ್ದೆ ರೈತರಿಗೆ ಯಾವುದೇ ಪ್ರಯೋಜನವನ್ನು ಉಂಟುಮಾಡುವುದಿಲ್ಲ. ಬದಲಾಗಿ ರೈತರನ್ನು ಮುಳುಗಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಈ ಬಾರಿಯ ಏರ್ ಶೋ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ: ರಾಜನಾಥ್ ಸಿಂಗ್
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಹಿಂದೆ ಕೂಡಾ ರೈತರ ಭೂಮಿಯನ್ನು ಕಸಿದುಕೊಳ್ಳಲು ಯತ್ನಿಸಿತ್ತು. ಇದೀಗ ತನ್ನ 2-3 ಜನ ಉದ್ಯಮ ಸ್ನೇಹಿತರ ಜೊತೆ ಸೇರಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡಕ್ಕೆ ಶುಭ ಕೋರಿದ ನಟ ದರ್ಶನ್
ನೂತನ ಕೃಷಿ ಮಸೂದೆಗೆ ಸಂಬಂಧಿಸಿದಂತೆ ರೈತರು ಹಾಗೂ ಸರ್ಕಾರದ ನಡುವಿನ ಹಲವು ಸುತ್ತಿನ ಮಾತುಕತೆಯ ಜೊತೆಗೆ 9ನೇ ಸುತ್ತಿನ ಮಾತುಕತೆ ಕೂಡಾ ವಿಫಲಗೊಂಡಿದ್ದು, ಮುಂದಿನ ಜನವರಿ 19 ರಂದು ಮತ್ತೆ ಸಭೆ ಕರೆಯಲಾಗಿದೆ ಎನ್ನಲಾಗಿದೆ.