Advertisement

ಸುಭಾಷ್‌ನಗರ: ನೀರಿದರೂ ಉಪಯೋಗ ಅಸಾಧ್ಯ!

11:21 AM Apr 20, 2018 | Team Udayavani |

ಮುನ್ನೂರು: ನೀರಿನ ಸಮಸ್ಯೆ ಪಟ್ಟಣ ಸಹಿತ ಗ್ರಾಮೀಣ ಪ್ರದೇಶವನ್ನು ಬಿಟ್ಟಿಲ್ಲ. ನೀರಿನ ಕೊರತೆಯಾದಾಗ ಜನರ ಒತ್ತಡ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳ ಮೇಲೆ ಹೆಚ್ಚಾದಂತೆ ಬೋರ್‌ವೆಲ್‌ ಬಾವಿ ತೆರೆಯುವ ಕೆಲಸ
ಪ್ರಾರಂಭಗೊಳ್ಳುತ್ತದೆ. ಆದರೆ ಬಾವಿ ತೆರೆದ ಮೇಲೆ ಅದರ ಸುದ್ದಿಗೆ ಜನಪ್ರತಿನಿಧಿಗಳು ಹೋಗುವುದಿಲ್ಲ. ಅಂತಹದೊಂದು ಬಾವಿ ಮುನ್ನೂರು ಗ್ರಾಮದ ಸುಭಾಷ್‌ನಗರ ಬಳಿ ನಿರ್ಮಾಣಗೊಂಡು ವರ್ಷ ಕಳೆ ದರೂ ಜನರ ಉಪಯೋಗಕ್ಕೆ ಸಿಗದೆ ಪಾಳು ಬಿದ್ದಿದೆ.

Advertisement

ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಸುಭಾಷ್‌ನಗರ ಹೆಚ್ಚು ಜನವಸತಿ ಇರುವ ಪ್ರದೇಶ. ಸುಮಾರು 300ಕ್ಕೂ ಹೆಚ್ಚು ಮನೆಗಳಿವೆ. ಎಪ್ರಿಲ್‌ ತಿಂಗಳ ಬಳಿಕ ಇಲ್ಲಿ ನೀರಿನ ಸಮಸ್ಯೆ ಪ್ರಾರಂಭಗೊಳ್ಳುತ್ತದೆ. ನೀರಿನ ಸಮಸ್ಯೆ ಹೆಚ್ಚಾದಾಗ ಈ ಪ್ರದೇಶದ ಜನರ ಬೇಡಿಕೆಯಂತೆ ಮೂರು ವರ್ಷದ ಹಿಂದೆ ಜಿ.ಪಂ. ಸದಸ್ಯರಾಗಿದ್ದ ಎನ್‌.ಎಸ್‌. ಕರೀಂ ಜಿ. ಪಂ. ನಿಧಿಯಡಿ ಕುಡಿಯುವ ನೀರಿಗಾಗಿ ಬಾವಿ ಮಂಜೂರು ಮಾಡಿಸಿದ್ದರು. ಬಾವಿ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಬಾವಿಯಲ್ಲಿ ನೀರಿದ್ದರೂ ಜನರ ಬಳಕೆಗೆ ಲಭ್ಯವಾಗಿಲ್ಲ.

8.5 ಲಕ್ಷ ರೂ. ಖರ್ಚು
ಈ ಪ್ರದೇಶದ ಜನರಿಗೆ ಶಾಶ್ವತ ಕುಡಿಯುವ ನೀರು ಮತ್ತು ಸ್ಥಳೀಯರಿಗೆ ನೀರು ಸೇದುವ ನಿಟ್ಟಿನಲ್ಲಿ ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಬಾವಿ ನಿರ್ಮಾಣ ನಡೆಸಲಾಗಿತ್ತು. ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಬಾವಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಬಾವಿ ನಿರ್ಮಾಣವಾಗಿದ್ದರು. ಬಾವಿಯ ಕೆಳ ಹಂತದವರೆಗೂ ಕಾಂಕ್ರೀಟ್‌ ನಡೆಸಿ ದ್ದರಿಂದ ನೀರಿನ ಸೆಳೆ ಕಾಂಕ್ರೀಟ್‌ನಿಂದ ಸುತ್ತುವರೆದಿದೆ. ತಳ ಭಾಗದಲ್ಲಿ ಮಾತ್ರ ರಿಂಗ್‌ ಹಾಕಿದ್ದು, ನೀರಿದ್ದರೂ ಬಳಕೆಗೆ ಸಾಧ್ಯವಾಗುತ್ತಿಲ್ಲ. ಮೂರು ವರ್ಷದಿಂದ ನೀರು ತೆಗೆಯದ ಕಾರಣ ನೀರು ಹಾಳಾ ಗಿದ್ದು, ಕಸಕಡ್ಡಿಗಳು ಬಾವಿಯೊಳಗೆ ಬಿದ್ದಿವೆ. ಇನ್ನೊಂದೆಡೆ ನೀರೆತ್ತಲು ಹಾಕಿ ರುವ ರಾಟೆಯ ಕಂಬಗಳು ಮತ್ತು ಸುತ್ತುಗೋಡೆ ಕಳಪೆಯಾಗಿದ್ದು, ಜನರು ನೀರು ಸೇದಲು ಭಯಪಡುತ್ತಿದ್ದಾರೆ. ಈ ಬಾವಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎನ್ನುತ್ತಾರೆ ಸ್ಥಳೀಯರು.

 ದುರಸ್ತಿಗೆ ಯೋಜನೆ
ಬಾವಿಯೊಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್‌ ಹಾಕಿದ್ದರಿಂದ ಜನ ರಿಗೆ ಈ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ  ಎಂಜಿನಿಯರ್‌ ಗಳನ್ನು ಕರೆಸಿ ಬಾವಿಯನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಜಿ. ಪಂ. ಗೆ ನೀಡಿದ್ದು, ಕ್ಷೇತ್ರದ ಸುಭಾಷ್‌ನಗರದ ಈ ಬಾವಿ ಮತ್ತು ಸಂತೋಷ್‌ ನಗರದ ಬಾವಿಯ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಮಂಜೂರಾದರೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು.
-ಧನಲಕ್ಷ್ಮಿ ಗಟ್ಟಿ ಸದಸ್ಯರು, ಜಿ.ಪಂ.

ಕಳಪೆ ಕಾಮಗಾರಿ
ಬಾವಿ ನಿರ್ಮಾಣವಾದ ಸ್ಥಳದಲ್ಲಿ ನೀರಿನ ಮೂಲ ದೊಡ್ಡದಿದೆ. ಆದರೆ ಕಳಪೆ ಕಾಮಗಾರಿ ಮತ್ತು ಗುತ್ತಿಗೆದಾರರ ಅಸಡ್ಡೆಯಿಂದ ಸರಕಾರದ ಹಣ ಪೋಲಾಗುತ್ತಿದೆ. ನಿರ್ಮಾಣ ಸಂದರ್ಭದಲ್ಲಿ ಕಾಂಕ್ರೀಟ್‌ ಹಾಕದಂತೆ ಮನವಿ ಮಾಡಲಾ ಗಿತ್ತು. ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಮೂರು ವರ್ಷವಾದರೂ ಬಾವಿಯ ನೀರು ಉಪಯೋಗಕ್ಕಿಲ್ಲದಂತಾಗಿದೆ. 
-ಡೆನ್ನಿಸ್‌ ಲೋಬೋ ಸ್ಥಳೀಯ ನಿವಾಸಿ.

Advertisement

 ವಸಂತ್‌ ಎನ್‌. ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next