Advertisement

‘ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ ಸುರಿದರೆ, ಕಠಿನ ಕ್ರಮ’

12:39 AM Jul 04, 2019 | Sriram |

ಮೂಲ್ಕಿ: ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು. ಅಂತಹವರು ಕಂಡರೆ ಸ್ಥಳೀಯಾಡಳಿತಕ್ಕೆ ಸಾರ್ವಜನಿಕರು ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಜಿ.ಪಂ. ಸದಸ್ಯ ವಿನೋದ್‌ ಬೊಳ್ಳೂರು ಹೇಳಿದರು.

Advertisement

ಕಿಲ್ಪಾಡಿಯ ಮೆಡಲಿನ್‌ ಶಾಲಾ ಸಭಾ ಭವನದಲ್ಲಿ ಜರಗಿದ ಕಿಲ್ಪಾಡಿ ಗ್ರಾ. ಪಂ.ನ ವರ್ಷದ ಪ್ರಥಮ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಪಂಚಾಯತ್‌ ಅಧ್ಯಕ್ಷ ಶ್ರೀಕಾಂತ್‌ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹ ಅಧಿಕಾರಿ ರಾಜೇಶ್‌ ನೋಡಲ್ ಅಧಿಕಾರಿಯಾಗಿದ್ದರು.

ತಾಯಿ ಕಾರ್ಡ್‌ ಕಡ್ಡಾಯ
ಇನ್ನು ಮುಂದೆ ಹೆತ್ತ ಮಗುವಿನ ಜನನ ದಾಖಲೆ ಬೇಕಾದರೆ ಸರಕಾರದ ತಾಯಿ ಕಾರ್ಡು ಕಡ್ಡಾಯ ಬೇಕು ಎಂಬ ಕಾನೂನು ಇರುವುದರಿಂದ ಆದಷ್ಟು ತಾಯಂದಿರು ಈ ವ್ಯವಸ್ಥೆಗೆ ನೋಂದಣಿಗೆೆ ಮುಂದಾಗುವಂತೆ ಆರೋಗ್ಯ ಇಲಾಖೆಯ ಸುಮಾ ಸಭೆಯಲ್ಲಿ ಪ್ರಕಟಿಸಿದರು.

ತಾ.ಪಂ. ಸದಸ್ಯ ಶರತ್‌ ಕುಬೆವೂರು, ಪಂಚಾಯತ್‌ ಸದಸ್ಯರಾದ ಗೋಪಿನಾಥ ಪಡಂಗ, ಅಬ್ದುಲ್ ಶರೀಫ್‌, ದಮಯಂತಿ, ಸುನೀತಾ ಆಚಾರ್‌, ಸಾವಿತ್ರಿ, ಶಾಂತಾ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.

Advertisement

ಪಿಡಿಒ ಹರಿಶ್ಚಂದ್ರ ಸಭೆಯ ನಡವಳಿಕೆಯ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ರಮೇಶ್‌ ಬಂಗೇರ ವಾರ್ಡ್‌ ಸಭೆ ಮತ್ತು ಕಚೇರಿ ನಡವಳಿಕೆಯ ವರದಿ ಮಂಡಿಸಿದರು. ಕಂದಾಯ ಅಧಿಕಾರಿ ಮಂಜುನಾಥ್‌, ಕೃಷಿ ಅಧಿಕಾರಿ ಬಶೀರ್‌, ಪಂಚಾಯತ್‌ರಾಜ್‌ ಎಂಜಿನಿಯರ್‌ ಪ್ರಶಾಂತ್‌ ಆಳ್ವ, ಸಮಾಜ ಕಲ್ಯಾಣ ಇಲಾ ಖೆಯ ಶುಭಾ ನಾಯಕ್‌, ಅಂಗನವಾಡಿ ಇಲಾಖೆಯ ನಾಗರತ್ನಾ, ಜಾನುವಾರು ಅಧಿಕಾರಿ ಸಂಪತ್‌ಕುಮಾರ್‌, ಮೆಸ್ಕಾಂ ಎಂಜಿನಿಯರ್‌ ವಿವೇಕನಂದ ಶೆಣೈ, ಆರೋಗ್ಯ ಇಲಾಖೆ ಸಹಾಯಕಿ ಸುಮಾ, ಪೊಲೀಸ್‌ ಇಲಾಖೆ ಮಹೇಶ್‌ ಎಚ್.ಕೆ., ಇಲಾಖೆಯ ಯೋಜನೆ ಮತ್ತು ಸರಕಾರದ ಸವಲತ್ತುಗಳ ಮಾಹಿತಿ ನೀಡಿದರು.

ಸಭೆಯಲ್ಲಿ ಕೇಳಿಬಂದ ದೂರು, ಸಲಹೆ

– ಕುಮಾರಮಂಗಲ ದೇವಸ್ಥಾನ ಬಳಿಯಲ್ಲಿ ಇರುವ ನದಿಯ ಹೂಳು ತೆಗೆದು ನದಿ ಉಳಿಸಬೇಕು.
-ಚರಂಡಿ ಕಾಮಗಾರಿಯಲ್ಲಿ ಕೆಳಭಾಗಕ್ಕೆ ಕಾಂಕ್ರೀಟ್ ಮಾಡದೆ ನೀರು ಇಂಗುವಂತೆ ವ್ಯವಸ್ಥೆ ಮಾಡಿ.
-ಸ್ವಚ್ಛ ಭಾರತ್‌ ಕಾರ್ಯಕ್ರಮದಡಿ ಅಂಗರಗುಡ್ಡೆ ಬಳಿಯ ಹೆದ್ದಾರಿಯಲ್ಲಿ ಬಿದ್ದಿರುವ ದುರ್ವಾಸನೆಯುಕ್ತ ಹಾಗೂ ಬಯೋ ವೇಸ್ಟ್‌ಗಳಿರುವ ತ್ಯಾಜ್ಯಗಳನ್ನು ಶಾಲಾ ಮಕ್ಕಳಿಂದ ಸ್ವಚ್ಛಗೊಳಿಸಲಾಗುತ್ತಿದೆ ಇದನ್ನು ನಿಲ್ಲಿಸಲು ಪಂಚಾಯತ್‌ ಮುಂದಾಗಬೇಕು.
-ಕುಬೆವೂರು ರಾಜ್ಯ ಹೆದ್ದಾರಿಯ ರಾಯಿ ತೋಟದ ಪಕ್ಕದಲ್ಲಿ ನಿರ್ಮಿಸಿರುವ ಕಾಲು ಸೇತುವೆಯಿಂದ ನಾಲ್ಕು ಮನೆಗಳು ಮುಳುಗಡೆಯ ಭಯದಿಂದ ಇರಬೇಕಾಗಿದೆ. ದೊಡ್ಡ ಸೇತುವೆ ನಿರ್ಮಿಸಿ ಇಲ್ಲವೆ ಕಾಲು ಸಂಕ ತೆಗದು ನೀರು ಹೋಗಲು ಬಿಟ್ಟು ಭಯ ಮುಕ್ತಗೊಳಿಸಿ.
-ರಕ್ಕಸ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ ಕ್ರಮ ತೆಗೆದುಕೊಳ್ಳಬೇಕು.
-ವ್ಯಾಸ ಮಹರ್ಷಿ ಶಾಲೆಯ ಬಳಿ ಚರಂಡಿ ಇಲ್ಲದೆ ನೀರು ರಸ್ತೆಯಲ್ಲಿ ಹೋಗುತ್ತಿದ್ದು ಶೀಘ್ರವೇ ಚರಂಡಿ ನಿರ್ಮಿಸಬೇಕು.
-ನಿರಂತರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬರದಿರುವುದಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ಕೇಳಿಬಂತು.
Advertisement

Udayavani is now on Telegram. Click here to join our channel and stay updated with the latest news.

Next