ನವ ದೆಹಲಿ : ಉತ್ತರ ಪ್ರದೆಶದ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಕ್ಕೆ ಬಂದಲ್ಲಿ, ಕೋವಿಡ್ ಸೋಂಕಿನ ನಿರ್ವಹಣೆಯ ಬಗ್ಗೆ ಲೆಕ್ಕ ಪರಿಶೋಧನೆ ನಡೆಸುತ್ತೇವೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಕೋವಿಡ್ ಸಂಬಂಧಿಸಿದ ದತ್ತಾಂಶಗಳನ್ನು ತಮ್ಮ ಲೋಪ ದೋಷಗಳನ್ನು ಮುಚ್ಚಿಡುವ ಸಲುವಾಗಿ ಸುಳ್ಳು ಲೆಕ್ಕಗಳನ್ನು ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಕೋವಿಡ್ ನಿರ್ವಣೆಯ ದತ್ತಾಂಶಗಳನ್ನು ಮುಚ್ಚಿಟ್ಟಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : ರೇವಣಸಿದ್ದೇಶ್ವರ ಏತ ನೀರಾವರಿಗೆ ಹಣ ಕೊಡಿಸಿದರೆ ಎಂಬಿಪಿ ಪ್ರತಿಮೆ ಸ್ಥಾಪನೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋವಿಡ್ ನಿರ್ವಹಣೆಯ ಅಂಕಿ ಅಂಶಗಳನ್ನು, ದತ್ತಾಂಶಗಳನ್ನು ಸುಳ್ಳು ವರದಿ ಮಾಡಿದೆ. ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಜನರ ಪರವಾಗಿ ನಿಂತಿಲ್ಲ. ಕೋವಿಡ್ ಸೋಂಕಿತರಿಗೆ ಸೌಲಭ್ಯದ ಕೊರತೆಗಳಿವೆ. ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ಔಷಧಿಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು, ಸರ್ಕಾರ ವಿರುದ್ಧ ಯಾವ ಕ್ರಮವನ್ನು ಕೂಡ ತೆಗೆದುಕೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸೋಂಕಿನಿಂದ ಮೃತಪಟ್ಟವರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಲಿಲ್ಲ. ಕೋವಿಡ್ ನಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರ ಇದ್ದು, ಇಲ್ಲದಂತಾಗಿತ್ತು ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಬಸ್ ಚಾಲಕ,ನಿರ್ವಾಹಕನಿಂದ ರಿಕ್ಷಾ ಚಾಲಕನಿಗೆ ಯದ್ವಾ ತದ್ವಾ ಹಲ್ಲೆ