Advertisement

ಪ್ರಾಮಾಣಿಕರಾಗಿದ್ದರೆ ದಾಳಿಗೇಕೆ ಹೆದರಬೇಕು?

06:18 AM Mar 29, 2019 | Vishnu Das |

ಕೆ.ಆರ್‌.ನಗರ: ಸಿಎಂ ಕುಮಾರ ಸ್ವಾಮಿ ಐಟಿ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಂಡು ಜನರ ಅನುಕಂಪ ಗಿಟ್ಟಿಸಲು ಮುಂದಾಗಿದ್ದು, ಅವರು ಏನೇ ಮಾಡಿದರೂ ನನಗೆ ಆತಂಕವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್‌ ಹೇಳಿ
ದರು.

Advertisement

ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ ಗುರು ವಾರ ಮತ ಯಾಚನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತನಿಖಾ ಸಂಸ್ಥೆ ಅಧಿಕಾರಿಗಳು ಅವರ ಕೆಲಸ ಅವರು ಮಾಡಿಕೊಂಡು ಹೋಗುತ್ತಾರೆ. ಅದರಲ್ಲಿ ರಾಜಕೀಯ ಬೆರೆಸುವುದು ತರವಲ್ಲ. ದಾಳಿಗೊಳಗಾದವರು ಪ್ರಾಮಾಣಿಕರಾಗಿದ್ದರೆ ಯಾಕೆ ಹೆದರಬೇಕು ಎಂದು ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಹಿಂದೆ ನಿಮ್ಮ ಕೈವಾಡ ಇದೆಯಾ
ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಕೇಂದ್ರ ಸರ್ಕಾರ ಮತ್ತು ತೆರಿಗೆ ಇಲಾಖೆ ನನ್ನ
ಮಾತು ಕೇಳುವಷ್ಟು ಪ್ರಭಾವ ನನಗಿದೆಯೇ ಎಂದು ಮರುಪ್ರಶ್ನೆ ಹಾಕಿದರು.

ದಾಳಿ ರಾಜಕೀಯ ಪ್ರೇರಿತ
ಮಂಡ್ಯ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿ ರಾಜಕೀಯ ಪ್ರೇರಿತ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌ .ಪುಟ್ಟರಾಜು ಆರೋಪಿಸಿದರು.

ನನ್ನ ಮಕ್ಕಳ(ಸೋದರನ ಪುತ್ರರು)ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ನನಗೆ ಶಾಕ್‌ ನೀಡಬಹು ದೆಂದು ಬಿಜೆಪಿ ಭಾವಿಸಿದಂತಿದೆ. ನಾವು ತಪ್ಪು ಮಾಡಿದ್ದರೆ ತಾನೇ
ಹೆದರೋಕೆ? ನಾನು ರೈತಾಪಿ ಕುಟುಂಬದಿಂದ ಬಂದವನು. ಎಲ್ಲ ಲೆಕ್ಕವನ್ನೂ ಪಕ್ಕಾ ಇಟ್ಟಿದ್ದೇನೆ. 5 ರೂ. ಸಂಪಾದನೆ ಮಾಡಿದ್ದಕ್ಕೂ ಲೆಕ್ಕ ಇದೆ. ಅದನ್ನ ಖರ್ಚು ಮಾಡಿದ್ದಕ್ಕೂ ಲೆಕ್ಕ ಇಟ್ಟಿದ್ದೇನೆ ಎಂದು ವಿಶ್ವಾಸದಿಂದ ನುಡಿದರು. ಇದು ಐಟಿ ದಾಳಿಯಲ್ಲ, ರಾಜಕೀಯ ಪ್ರೇರಿತ ದಾಳಿ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ಮುಖ್ಯಮಂತ್ರಿ ಆಪ್ತ ಎನ್ನುವ ಕಾರಣಕ್ಕೆ ನನ್ನ ಮನೆ ಮೇಲೆ ದಾಳಿ ನಡೆದಿದೆ. ಚುನಾವಣೆ ನಡೆಯುತ್ತಿರುವ
ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನ ಮನೆಯಲ್ಲಿ ಚುನಾವಣೆ ಖರ್ಚಿಗೆ ಭಾರೀ ಮೊತ್ತದ ಹಣ ಇಟ್ಟಿ¨ªಾರೆಂಬ ಗುಮಾನಿ ಇವರದ್ದು. ಬಂದವರಿಗೆ ಖಾಲಿ ಡಬ್ಬ ಸಿಗುತ್ತದೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದರು.

Advertisement

ಮಂಡ್ಯದ ಬಿಜೆಪಿ ಅಭ್ಯರ್ಥಿ ಅನುಕೂಲಕ್ಕೆ ದಾಳಿ’
ಮೈಸೂರು: ಆದಾಯ ತೆರಿಗೆ ದಾಳಿ ಮೂಲಕ ಬಿಜೆಪಿಯವರು ಭಯದ ವಾತಾವರಣ ಸೃಷ್ಟಿಸಲು ಮುಂದಾಗಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ, ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ, ಬೇಕಿದ್ದರೆ ನನ್ನ ಮನೆ ಮೇಲೂ ದಾಳಿ ಮಾಡಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಅನುಕೂಲವಾಗಲಿ ಎಂದು ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿದ್ದಾರೆ. ಇಂತಹ ದಾಳಿಗಳಿಗೆ ನಾವು ಹೆದರುವುದಿಲ್ಲ. ಎಷ್ಟೇ ದಾಳಿಗಳಾದರೂ ನನ್ನ ಮಗ ನಿಖೀಲ್‌ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದರು.

ದೇಶದಲ್ಲಿ ಎಲ್ಲೂ ಅಕ್ರಮಗಳೇ ನಡೆಯುತ್ತಿಲ್ಲವಾ? ಯಡಿಯೂರಪ್ಪ ಏನು ಸಾಚಾನಾ? ಯಡಿಯೂರಪ್ಪ ಎಷ್ಟು ದುಡ್ಡು ಮಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಶಿವಮೊಗ್ಗದಲ್ಲಿ ಬಿಜೆಪಿಯವರು ಚುನಾವಣೆಗೆ ದುಡ್ಡೇ ಖರ್ಚು ಮಾಡುತ್ತಿಲ್ವಾ? ಎಂದು ಪ್ರಶ್ನೆಗಳ ಸುರಿಮಳೆಗರೆದ ಕುಮಾರಸ್ವಾಮಿ, ಚುನಾವಣಾ ಸಂದರ್ಭದಲ್ಲಿ ಜೆಡಿಎಸ್‌ ನಾಯಕರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ಮಾಡುವ ಅಗತ್ಯ ಏನಿತ್ತು? ಶಿವಮೊಗ್ಗದಲ್ಲೂ ಐಟಿ ದಾಳಿ ಆಗಿದೆ. ದೇವೇಗೌಡರ ಆಪ್ತ ಪರಮೇಶ್‌ ಸಣ್ಣದೊಂದು ಅಂಗಡಿ ಇಟ್ಟುಕೊಂಡಿದ್ದಾರೆ. ಅವರನ್ನೂ ಬಿಡದೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿನ ಬಿಜೆಪಿಯವರ ಮನೆ ಮೇಲೆ ಏಕೆ ದಾಳಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಪಾಂಡವಪುರ, ಚಿನಕುರಳಿಯಲ್ಲಿ ಪ್ರತಿಭಟನೆ

ಪಾಂಡವಪುರ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸಹೋದರನ ಮಕ್ಕಳ ಮನೆ ಮೇಲೆ ನಡೆದಿರುವ ಐಟಿ ದಾಳಿಯನ್ನು ವಿರೋಧಿಸಿ ಚಿನಕುರಳಿ ಮತ್ತು ಪಾಂಡವಪುರದಲ್ಲಿ ಜೆಡಿಎಸ್‌ ಕಾರ್ಯಕರ್ತರು, ಸಚಿವರ ಬೆಂಬಲಿಗರು ಹಾಗೂ ಅಭಿಮಾನಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಐಟಿ ಅಧಿಕಾರಿಗಳ ದಾಳಿ ವಿಷಯ ತಿಳಿದು ತಾಲೂಕಿನ ಚಿನಕುರಳಿ ಗ್ರಾಮದ ಸಿ.ಎಸ್‌. ಪುಟ್ಟರಾಜು ಅವರ ನಿವಾಸದ ಬಳಿ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರು ನಂತರ ಪಾಂಡವಪುರ-ಕೆ.ಆರ್‌.ಪೇಟೆ ರಸ್ತೆಗೆ ತೆರಳಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆತಡೆಯಿಂದ ಪಾಂಡವಪುರ- ಕೆ.ಆರ್‌.ಪೇಟೆ ನಡುವೆ ಕೆಲ ಸಮಯದವರೆಗೆ ಸಂಚಾರ ಅಸ್ತವ್ಯಸ್ತವಾಗಿತ್ತು. ಹೆದ್ದಾರಿ ತಡೆಯಿಂದ ಪ್ರಯಾಣಿಕರು ಹಲವು ಸಮಯದವರೆಗೆ ತೀವ್ರ ತೊಂದರೆ ಅನುಭವಿಸಿದರು. ಪುಟ್ಟರಾಜು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಖಂಡಿಸಿ, ಜೆಡಿಎಸ್‌ ಕಾರ್ಯಕರ್ತರು ಮೈಸೂರಿನ ನ್ಯಾಯಾಲಯದ ಎದುರು ಇರುವ ಗಾಂಧೀಜಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next