Advertisement

ನಿಕೋಟಿನ್‌ ಇದ್ದರೆ ಹಣವಿಲ್ಲ!

08:03 PM Jan 26, 2020 | Lakshmi GovindaRaj |

ಫಿಲಿಪ್ಪೀನ್ಸ್‌ನ ಒಂದು ಊರಲ್ಲಿ ಬಹಳಷ್ಟು ಗಂಡಸರು ಸಿಗರೇಟ್‌ ಮತ್ತು ಮದ್ಯದ ಚಟಕ್ಕೆ ಬಿದ್ದಿದ್ದರು. ಅವರ ವ್ಯಸನದಿಂದಾಗಿ ಅವರ ಕುಟುಂಬಗಳು ಪರಿತಪಿಸುತ್ತಿದ್ದವು. ಯಾವ ಶಿಬಿರ ಏರ್ಪಡಿಸಿದರೂ ಅವರಿಗೆ ಸಿಗರೇಟು ಮತ್ತು ಮದ್ಯವನ್ನು ಬಿಟ್ಟಿರಲು ಆಗುತ್ತಲೇ ಇರಲಿಲ್ಲ.

Advertisement

ಕಡೆಗೆ ಆಸ್ಪತ್ರೆಯವರು ಒಂದು ಉಪಾಯ ಹೂಡಿದರು. ವ್ಯಸನಿಗಳು ಯಾರಿದ್ದರೋ ಅವರಿಗೆ 6 ತಿಂಗಳ ಕಾಲ ಸೇವಿಂಗ್ಸ್‌ ಅಕೌಂಟ್‌ ಖಾತೆಯನ್ನು ತೆರೆಸಲಾಯಿತು. ಆ ಆರು ತಿಂಗಳ ನಂತರ ಮಾಡುವ ರಕ್ತಪರೀಕ್ಷೆಯಲ್ಲಿ ನಿಕೋಟಿನ್‌ ಮತ್ತು ಆಲ್ಕೋಹಾಲ್‌ ಅಂಶ ಕಂಡುಬರಬಾರದು ಎನ್ನುವುದು ಆಸ್ಪತ್ರೆಯವರು ಶರತ್ತು ವಿಧಿಸಿದರು. ಕಂಡು ಬಂದರೆ ಉಳಿತಾಯ ಖಾತೆಯ ಹಣ ಧರ್ಮಾರ್ಥ ಸೇವೆಗಳಿಗೆ ನೀಡಲಾಗುತ್ತದೆ.

ರಕ್ತದಲ್ಲಿ ನಿಕೋಟಿನ್‌ ಅಂಶ ಕಂಡು ಬರದೇ ಇದ್ದರೆ ಮಾತ್ರ ಉಳಿತಾಯ ಖಾತೆಯಲ್ಲಿರುವ ಅಷ್ಟೂ ಹಣ ಅವರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಚ್ಚರಿಯೆಂಬಂತೆ, ಯಾರು ಯಾರಿಗೆ ಸಿಗರೇಟು, ಮದ್ಯ ಬಿಟ್ಟಿರಲು ಆಗುವುದೇ ಇಲ್ಲ ಎಂಬು ತಿಳಿಯಲಾಗಿತ್ತೋ ಅವರಲ್ಲಿ ಮುಕ್ಕಾಲು ಪಾಲು ಮಂದಿ ಉಳಿತಾಯ ಖಾತೆಯ ಹಣವನ್ನು ಪಡೆದುಕೊಂಡರು!

Advertisement

Udayavani is now on Telegram. Click here to join our channel and stay updated with the latest news.

Next