Advertisement

ಕಾಮಗಾರಿಯಲ್ಲಿ ಲೋಪ ಕಂಡರೆ ಕ್ರಮ

01:12 PM Jul 28, 2019 | Team Udayavani |

ಹನೂರು: ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಒಂದೊಮ್ಮೆ ಯಾವುದೇ ಲೋಪ ದೋಷ ಕಂಡುಬಂದಲ್ಲಿ ಮುಲಾಜಿಲ್ಲದೆ ಕಾನೂನಿನ ಚೌಕಟ್ಟಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರ್‌.ನರೇಂದ್ರ ತಿಳಿಸಿದರು. ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಆದಿಜಾಂಬವ ಬಡಾವಣೆಗೆ 20 ಲಕ್ಷರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಸೂಕ್ತ ಕ್ರಮ: ಸಾರ್ವಜನಿಕರಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಉದ್ದೇಶದಿಂದ ಬಡಾವಣೆಗಳಿಗೆ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ನಿರ್ಮಾಣಗೊಂಡ ರಸ್ತೆಗಳು ಕನಿಷ್ಟ ಮುಂದಿನ 20 ವರ್ಷಗಳ ದೀರ್ಘಾ ವಧಿಯವರೆಗೆ ಬಾಳಿಕೆಗೆ ಬರುವಂತಿರಬೇಕು. ಒಂದೊಮ್ಮೆ ಯಾವುದೇ ಲೋಪದೋಷ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಅನುದಾನ: ಇದೇ ವೇಳೆ ಗ್ರಾಮಸ್ಥರು ಇದೀಗ ನೀಡಿರುವ ಅನುದಾನದಲ್ಲಿ ಒಂದು ಬೀದಿಗೆ ಮಾತ್ರ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಪಕ್ಕದ ಬೀದಿಯಲ್ಲಿ ಒಂದೆಡೆ ಚರಂಡಿ ಮಾತ್ರ ನಿರ್ಮಾಣ ಮಾಡಲಾಗಿದ್ದು ಆ ಬೀದಿಗೂ ರಸ್ತೆ ಮತ್ತು ಮತ್ತೂಂದು ಕಡೆ ಚರಂಡಿ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯೆ ಮರುಗದ ಮಣಿ, ತಾಪಂ ಸದಸ್ಯ ರಾಜೇಂದ್ರ, ಸದಸ್ಯೆ ಶಿವಮ್ಮ, ಮುಖಂಡರಾದ ಪಾಳ್ಯ ಕೃಷ್ಣ, ಲೊಕ್ಕನಹಳ್ಳಿ ರವಿ, ಗುರುಮಲ್ಲಪ್ಪ, ಗುತ್ತಿಗೆದಾರ ಫ‌ಯಾಜ್‌ಖಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next