Advertisement

ಜನರಿಂದ ಸಮಸ್ಯೆಯಾದರೆ ಫೋನ್‌ ಮಾಡಿ: ಡಿಸಿಎಂ

04:53 PM Apr 27, 2020 | Suhan S |

ಅಥಣಿ: ಉಪ-ಮುಖ್ಯಮಂತ್ರಿ ಲಕ್ಷ್ಮಣ ಸವದಿ ರವಿವಾರ ತಾಲೂಕಿನ ಹಲ್ಯಾಳ,ದರೂರ, ಸಂಕ್ರಟ್ಟಿ, ಶೇಗುಣಸಿ, ನದಿ-ಇಂಗಳಗಾಂವ, ತೀರ್ಥ, ಸಂಕ್ರಟ್ಟಿ, ಸಪ್ತಸಾಗರ, ಖವಟಕೋಪ್ಪ, ಚಿಕ್ಕೂಡ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಆಯಾ ಗ್ರಾಮ ಪಂಚಾಯತಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಮತ್ತು ಸ್ಥಳಿಯ ಜನಪ್ರತಿನಿಧಿಗಳ ಸಭೆ ಮಾಡಿದರು.

Advertisement

ಸಭೆಯಲ್ಲಿ ಡಿಸಿಎಂ ಸವದಿ ಆಶಾ- ಅಂಗನವಾಡಿ ಕಾರ್ಯಕರ್ತೆಯರ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ, ಪಿಡಿಓ ಮತ್ತು ಇತರೆ ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದರು. ಮತ್ತು ಸೋಂಕು ಹರಡದಂತೆ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಸಾರ್ವಜನಿಕರಿಂದ ಸಮಸ್ಯೆಯಾದರೆ ಆಶಾ ಕಾರ್ಯಕರ್ತೆಯರು ಅಥವಾ ಯಾವುದೇ ಸಿಬ್ಬಂದಿ ತಕ್ಷಣ ನನಗೆ ದೂರವಾಣೆ ಕರೆ ಮಾಡಿ. ನಿಮ್ಮ ಹಿಂದೆ ಸರಕಾರ ಇದೆ ಎಂದು ಧೈರ್ಯ ಹೇಳಿದರು. ಕೋವಿಡ್ 19 ಸೋಂಕು ಹರಡದಂತೆ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಮಹೇಶ ಕುಮಠಳ್ಳಿ, ತಾ.ಪ. ಅಧಿಕಾರಿ ರವೀಂದ್ರ ಬಂಗಾರೆಪ್ಪನವರ, ತಹಶೀಲ್ದಾರ ದುಂಡಪ್ಪ ಕೋಮಾರ, ಸಿ,ಪಿ.ಐ ಶಂಕರಗೌಡ ಬಸವನಗೌಡರ, ಗ್ರೇಡ್‌ 2 ತಹಶೀಲ್ದಾರ ರಾಜು ಬುರ್ಲಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next