Advertisement

ಭಿನ್ನಾಭಿಪ್ರಾಯ ಇದ್ದರೆ ಬೇಗ ಹೇಳಿ

09:34 AM Jan 31, 2018 | |

ಬೆಂಗಳೂರು: ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯ ಇದ್ದರೆ ಬೇಗ ಹೇಳಿ ಎಂದು ಬ್ಲಾಕ್‌ ಹಾಗೂ ಜಿಲ್ಲಾ ಅಧ್ಯಕ್ಷರಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ಸೂಚನೆ ಕೊಟ್ಟಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ನಮ್ಮ ಕ್ಷೇತ್ರ ನಮ್ಮ ಹೊಣೆ ಕಾರ್ಯಕ್ರಮದಲ್ಲಿ ಬ್ಲಾಕ್‌ ಹಾಗೂ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ನಾಯಕರು ಸೂಚನೆ ನೀಡಿದ್ದು, ಚುನಾವಣೆ ಹತ್ತಿರ ಇದೆ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್‌ ಎರಡಂಕಿ ಮುಟ್ಟಿದೆ.

Advertisement

ಸ್ಪಷ್ಟ ಬಹುಮತ ಬರುವಂತೆ ಮಾಡುವುದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಜವಾಬ್ದಾರಿ ಎಂದು ಅವರ ಹೆಗಲಿಗೆ ಹಾಕಿದ್ದಾರೆ.
ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌, ಮನೆ ಮನೆಗೆ ಕಾಂಗ್ರೆಸ್‌ ನಂತರ ನಮ್ಮ ಕ್ಷೇತ್ರ ನಮ್ಮ ಹೊಣೆ ಕಾರ್ಯಕ್ರಮ ಆರಂಭಿಸಿದ್ದೇವೆ. ರಾಜ್ಯದಲ್ಲಿ 57 ಸಾವಿರ ಬೂತ್‌ಗಳಿವೆ. ಪ್ರತಿ ಬೂತ್‌ ಮಟ್ಟದ ಕಾರ್ಯಕರ್ತರ ಮಾಹಿತಿ ಸಂಗ್ರಹಿಸಿದ್ದು, ಎಲ್ಲರೂ ಸಾಮಾಜಿಕ ಜಾಲ ತಾಣ ಬಳಕೆ ಮಾಡಲು ಸೂಚನೆ ನೀಡಿದ್ದೇವೆ. ನಮ್ಮ ಕ್ಷೇತ್ರ ನಮ್ಮ ಹೊಣೆ ಕಾರ್ಯಕ್ರಮ 
ದಲ್ಲಿ ಪಕ್ಷದ ಮುಖ್ಯಮಂತ್ರಿಯಾದಿಯಾಗಿ ಪ್ರತಿಯೊಬ್ಬ ಮುಖಂಡರು ತಾವು ಮತದಾನ ಮಾಡುವ ಬೂತ್‌ನಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ತಂದುಕೊಡಬೇಕು ಎಂದರು.

ಫೆ. 10 ರಿಂದ ರಾಹುಲ್‌ ಪ್ರವಾಸ: ಎಐಸಿಸಿ ಅಧ್ಯಕ್ಷರ ರಾಹುಲ್‌ ಗಾಂಧಿ ಫೆ.10 ರಿಂದ ರಾಜ್ಯದಲ್ಲಿ ಅಧಿಕೃತ ಚುನಾವಣಾ ಯಾತ್ರೆ ಆರಂಭಿಸಲಿದ್ದಾರೆ. ಹೈದರಾಬಾದ್‌ ಕರ್ನಾಟಕದ ಹೊಸಪೇಟೆಯಿಂದ ಮೊದಲ ಯಾತ್ರೆ ಆರಂಭಿಸಲಿದ್ದು, ಅಂದು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಬಸ್‌ನಲ್ಲಿ ಕೊಪ್ಪಳ, ರಾಯಚೂರು, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ
ಪ್ರವಾಸ ಮಾಡಲಿದ್ದಾರೆ ಎಂದರು.

ಮಠ ಭೇಟಿಗೆ ದಿನಾಂಕ ನಿಗದಿಯಾಗಿಲ್ಲ: ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಠಗಳು ಮತ್ತು ಹಿಂದೂ ದೇವಾಲಯಗಳಿಗೆ ಭೇಟಿ ನೀಡುವುದರಲ್ಲಿ ವಿಶೇಷವೇನಿಲ್ಲ. ಯಾವುದೇ ಮಠಗಳಿಗೆ ಭೇಟಿ ನೀಡುವ ಬಗ್ಗೆ ಅಧಿಕೃತ ದಿನಾಂಕ ನಿಗದಿಯಾಗಿಲ್ಲ. ಪ್ರವಾಸದ ಸಂದರ್ಭದಲ್ಲಿ ಯಾವುದಾದರೂ ದೇವಸ್ಥಾನ ಅಥವಾ ಮಠಕ್ಕೆ ಭೇಟಿ ನೀಡಲು ಆಹ್ವಾನ ಬಂದರೆ
ಅವರು ಭೇಟಿ ನೀಡುತ್ತಾರೆ ಎಂದರು.

ಮಾ.1 ರಿಂದ ಒಗ್ಗಟ್ಟಿನ ಯಾತ್ರೆ: ಮಾರ್ಚ್‌ 1 ರಿಂದ ರಾಜ್ಯ ಕಾಂಗ್ರೆಸ್‌ ನಾಯಕರು ಒಟ್ಟಾಗಿ ರಾಜ್ಯ ಚುನಾವಣಾ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ತಿಂಗಳು ಪೂರ್ಣ ಬೂತ್‌ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯಲಿದ್ದು, ಮಾರ್ಚ್‌ 1 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ನಾಯಕರೂ ಒಂದೇ ವಾಹನದಲ್ಲಿ ಪ್ರವಾಸ ಆರಂಭಿಸಲಿದ್ದಾರೆ ಎಂದರು. ಚುನಾವಣಾ ಪ್ರಚಾರಕ್ಕೆ ಅಕ್ಕ ಪಕ್ಕದ ರಾಜ್ಯಗಳ ಸಿನಿ ತಾರೆಯರನ್ನು ಕರೆ ತರುವ ಬಗ್ಗೆ ಚಿಂತನೆ ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯೇ ನಮಗೆ ದೊಡ್ಡ ಸ್ಟಾರ್‌ ಕ್ಯಾಂಪೇನರ್‌. ಅವರ ಸಾಮರ್ಥ್ಯ ಏನೆಂದು ಗುಜರಾತ್‌ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಹೇಳಿದರು.

Advertisement

ಪಕ್ಷದ್ರೋಹಿಗಳನ್ನು ಸೇರಿಸ್ಬೇಡಿ: ಸಚ್ಚಿದಾನಂದ
ಮಂಡ್ಯ: ಪಕ್ಷದ್ರೋಹಿ ಶಾಸಕರು ಕಾಂಗ್ರೆಸ್‌ ಸೇರುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ಸದಸ್ಯ ಎಸ್‌.ಸಚ್ಚಿದಾನಂದ ಹೇಳಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ಕೊತ್ತತ್ತಿ ಹೋಬಳಿ ವ್ಯಾಪ್ತಿಯ ಒಂದೇ ವೃತ್ತದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೆಡಿಎಸ್‌ ಬಂಡಾಯ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೊಂಡು ಪಕ್ಷದ ಅಧಿ ಕೃತ ಅಭ್ಯರ್ಥಿಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರ್ಯ ಕರ್ತರು ಎಂದಿಗೂ ಅವಕಾಶ ನೀಡಬಾರದು. ಪಕ್ಷ ಸಂಘಟನೆಗೆ ಹತ್ತಾರು ವರ್ಷಗ ಳಿಂದ ದುಡಿದವ ರಿಗೆ ರಾಜಕೀಯ ಅಧಿಕಾರ, ಅವಕಾಶಗಳು ಸಿಗಬೇಕು ಎನ್ನುವುದು ನಮ್ಮ ಬಯಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next