Advertisement

ರಾಷ್ಟ್ರೀಯ ಹೆದ್ದಾರಿ ದೂರುಗಳಿದ್ದರೆ 1033ಕ್ಕೆ ಕರೆ ಮಾಡಿ

03:58 PM Jan 28, 2018 | Team Udayavani |

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ಮಾಹಿತಿ ನೀಡಲು ಅಥವಾ ಹೆದ್ದಾರಿಗಳಲ್ಲಿನ ಲೋಪ ದೋಷಗಳ ಕುರಿತಂತೆ ದೂರು ಸಲ್ಲಿಸಲು, 1033 ಎಂಬ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯನ್ನು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಚಾಲ್ತಿಗೆ ತರಲಿದ್ದು, ಫೆಬ್ರವರಿ ಮೊದಲ ವಾರದಿಂದ ಇದು ಕಾರ್ಯಾರಂಭವಾಗಲಿದೆ‌. 

Advertisement

ಈ ಬಗ್ಗೆ ವಿವರಿಸಿದ ಎನ್‌ಎಚ್‌ಎಐ ಮುಖ್ಯಸ್ಥ ದೀಪಕ್‌ ಕುಮಾರ್‌, “”ರಸ್ತೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ಅಪಘಾತಕ್ಕೊಳಗಾಗುವ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸೇರಿಸಲು ಹೊಸ ಟೋಲ್‌ ಫ್ರೀ ಸಂಖ್ಯೆ ನೆರವಾಗುತ್ತದೆ. ಇದಕ್ಕಾಗಿ, ಹೆದ್ದಾರಿಗಳ ಅಲ್ಲಲ್ಲಿ ಆ್ಯಂಬುಲೆನ್ಸ್‌ ಸೌಲಭ್ಯ ನೀಡುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ” ಎಂದು ತಿಳಿಸಿದರು.  ಏತನ್ಮಧ್ಯೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಾರ್ಪೊರೇಟ್‌ ಸ್ವರೂಪ ಕೊಡುವ ಆಶಯ ಹೊಂದಿದ್ದ ಕೇಂದ್ರ ಹಣಕಾಸು ಸಚಿವಾಲಯ ಸದ್ಯಕ್ಕೆ ಆ ಪ್ರಸ್ತಾವನೆಯನ್ನು ಕೈಬಿಟ್ಟಿದೆ ಎಂದು “ಟೈಮ್ಸ್‌ ಆಫ್ ಇಂಡಿಯಾ’ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next