Advertisement
ಮೇಲಡ್ಕ ಭಾಗದ ಮಕ್ಕಳು ಶಾಲೆಗೆ ಹೋಗಬೇಕಾದರೆ ಏಳು ಕಿ.ಮೀ. ದೂರದ ಮುದ್ರಾಡಿಗೆ ಹೋಗಬೇಕು. ಹಾಗೆ ಹೋಗುವ ದಾರಿಯಲ್ಲಿ ಇರುವುದೇ ಈ ಹೊಳೆ. ನೀರು ಕಡಿಮೆ ಪ್ರಮಾಣದಲ್ಲಿದ್ದರೆ ಮನೆಯವರು ಎತ್ತಿಕೊಂಡು ಹೋಗಿ ಆಚೆದಡ ಸೇರಿಸುತ್ತಾರೆ. ಒಂದು ವೇಳೆ ಉಕ್ಕಿ ಹರಿಯುತ್ತಿದ್ದರೆ ದೊಡ್ಡವರಿಗೂ ದಾಟಲು ಸಾಧ್ಯವಿಲ್ಲ. ಅಷ್ಟು ಭಯಾನಕ ಸೆಳೆತವಿರುತ್ತದೆ ನದಿಗೆ.
ಹೊಳೆ ದಾಟಲು ಒಂದು ಕಿರು ಸೇತುವೆ ಅಥವ ಕಾಲು ಸಂಕ ನಿರ್ಮಾಣ ಮಾಡಿಕೊಡುವಂತೆ ಸುಮಾರು ಎರಡು ದಶಕಗಳಿಂದ ಆಡಳಿತ ವರ್ಗಕ್ಕೆ ಮನವಿ ಮಾಡಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳು ಶಾಲೆಗೆ ಹೊಗುವ, ಬರುವ ಸಮಯದಲ್ಲಿ ಹೊಳೆ ಕಾಯುವುದೇ ಇಲ್ಲಿನವರ ನಿತ್ಯ ಕಾಯಕವಾಗಿದೆ.
Related Articles
ಮಳೆಗಾಲ ಬಂದರೆ ಯಾವುದೇ ವಾಹನ ಹೊಳೆ ದಾಟುವುದಿಲ್ಲ. ಹೀಗಾಗಿ ಮಳೆ ಮುನ್ನವೇ ಮನೆಯ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿ ಕೊಂಡಿರಬೇಕು.
ವರಂಗ ಪೇಟೆಯಲ್ಲಿರುವ ಪಡಿತರ ಕೇಂದ್ರದಿಂದ ತಿಂಗಳ ಪಡಿತರ ತರಬೇಕಾದರೂ ಸಂಕಷ್ಟ. ರಿಕ್ಷಾದವರು ಬರುವುದಿಲ್ಲ. ಹೀಗಾಗಿ ಹೊತ್ತುಕೊಂಡೇ ಬರಬೇಕು. ನೀರನ್ನು ದಾಟಿಯೇ ಹೋಗಬೇಕು.
ಒಂದು ವೇಳೆ ಹೊಳೆ ದಾಟಿ ಹೊರಗೆ ಹೋದ ಮೇಲೆ ನೀರು ಉಕ್ಕಿದರೆ ಮರಳಿ ಮನೆಗೆ ಬರುವುದು ಸಾಧ್ಯವಿಲ್ಲ. ಆಗೆಲ್ಲ ನೆರೆಮನೆಯೇ ಇವರಿಗೆ ಆಸರೆ.
Advertisement
ನಮ್ಮ ಮಕ್ಕಳಿಗೆ ರಕ್ಷಣೆ ಯಾಕಿಲ್ಲ?ಕಳೆದ 25 ವರ್ಷಗಳಿಂದ ಈ ಭಾಗಕ್ಕೆ ಒಂದು ಕಾಲು ಸಂಕ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದರೂ ಈವರೆಗೆ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ ಎಂಬುದು ಸ್ಥಳೀಯ ಮಹಿಳೆಯರ ಅಳಲು. ಎಲ್ಲರಿಗೂ ಸಿಗುವ ಮೂಲ ಸೌಕರ್ಯ ನಮ ಗೇಕೆ ಸಿಗುವುದಿಲ್ಲ, ನಮ್ಮ ಮಕ್ಕಳುಶಿಕ್ಷಣ ಪಡೆಯಬಾರದ ಎಂಬ ಪ್ರಶ್ನೆ ಇವರದ್ದು. ಇಲ್ಲಿ 10ಕ್ಕೂ ಅಧಿಕ ಕುಟುಂಬಗಳು ಮಳೆಗಾಲದಲ್ಲಿ ಸಂಕಷ್ಟಕ್ಕೆ ಬೀಳುತ್ತವೆ. ಮರದ ಸಂಕವೂ ನಿಲ್ಲುವುದಿಲ್ಲ
ಇಲ್ಲಿನ ದೊಡ್ಡ ಸಮಸ್ಯೆ ಏನೆಂದರೆ ಇಲ್ಲಿ ಮರದ ಕಾಲು ಸಂಕ ನಿರ್ಮಿಸಲು ಸಾಧ್ಯವೂ ಇಲ್ಲ. ಮೇಲ್ನೋಟಕ್ಕೆ ಇದು ನಿರಾಳವಾಗಿ ಹರಿಯುವ ಹೊಳೆಯಂತೆ ಕಂಡರೂ ವೇಗ ಅಪಾರ. ಅದರಲ್ಲೂ ನೀರು ಉಕ್ಕಿದಾಗ ರುದ್ರ ನರ್ತನವೆ. ಹೀಗಾಗಿ ಇಲ್ಲಿ ಮರದ ಕಾಲು ಸಂಕ ನಿರ್ಮಿಸಿದರೆ ಅದು ಯಾವಾಗ ಬೇಕೆಂದರೂ ಕೊಚ್ಚಿ ಕೊಂಡು ಹೋಗಬಹುದು. ಹೀಗಾಗಿ ಇತ್ತೀಚೆಗೆ ಜನರು ಕಾಲು ಸಂಕವನ್ನು ನಿರ್ಮಿಸುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ. ನೀರಿನೊಡನೆ ಸೆಣಸಾಡಿ ಜೀವನ ಸಾಗಿಸುವುದೇ ಅನಿವಾರ್ಯ ಎಂಬ ಸ್ಥಿತಿಯಾಗಿದೆ. ಆರೋಗ್ಯ ಹದಗೆಟ್ಟರೆ ದೇವರೇ ಗತಿ
ಈ ಭಾಗದ ಜನರಿಗೆ ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟರೆ ದೇವರೆ ಗತಿ. ಕೆಲವು ವರ್ಷದ ಹಿಂದೆ ಅತ್ತೆಯವರಿಗೆ ಸೌಖ್ಯ ಇಲ್ಲದಾಗ ಬಟ್ಟೆಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗಿದ್ದರು. ನನಗೆ ಸೌಖ್ಯ ಇಲ್ಲದಾಗ ಹೊತ್ತುಕೊಂಡೇ ಹೋಗಿದ್ದು ಎಂದು ಸ್ಥಳೀಯ ಮಹಿಳೆ ಸುರೇಖಾ ಹೇಳುತ್ತಾರೆ. – ಜಗದೀಶ್ ಅಂಡಾರು