ಹೋರಾಟಕ್ಕೂ ಸಿದ್ಧ ಎಂದು ವಾಣಿಜ್ಯೋದ್ಯಮ ಸಂಘದ ಜಿಲ್ಲಾಧ್ಯಕ್ಷ ತ್ರಿವಿಕ್ರಮ ಜೋಶಿ ಎಚ್ಚರಿಸಿದರು.
Advertisement
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾದ ಈ ಜಲಾಶಯ ಲಕ್ಷಾಂತರ ಜನರಿಗೆ ಕುಡಿಯುವ ನೀರೊದಗಿಸುತ್ತಿದೆ. ಆದರೆ, ಈಗ ಕೇವಲ2.5 ಟಿಎಂಸಿ ಅಡಿ ನೀರು ಪಡೆಯುವುದಾಗಿ ಹೇಳುವ ಸರ್ಕಾರ ಮುಂದೆ ಒತ್ತಡ ಬಂದು ಯೋಜನೆ ವಿಸ್ತರಿಸಿದರೂ ಅಚ್ಚರಿಯಿಲ್ಲ. ಹೀಗಾಗಿ ಅದಕ್ಕೆ ಈಗಲೇ ಕಡಿವಾಣ ಹಾಕಬೇಕು. ಇದು ಬೇರೆ ಬೇರೆ ತಾಲೂಕುಗಳಿಗೆ ನೀರೊದಗಿಸುವ ಹುನ್ನಾರವಾಗಿದೆ ಎಂದರು.
ಈ ಕೂಡಲೇ ನಿರ್ಣಯ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನಪ್ರತಿನಿಧಿಗಳ ನಿಯೋಗ ಮನವಿ ಸಲ್ಲಿಸಲಿದ್ದು, ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು. ಜಲಾಶಯದ ಹಿನ್ನೀರಿನಲ್ಲಿ 2.3 ಟಿಎಂಸಿ ಅಡಿ ನೀರನ್ನು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಸಚಿವ ಸಂಪುಟ 2,350 ಕೋಟಿ ರೂ. ಯೋಜನೆಗೆ ಸಮ್ಮತಿ ನೀಡಿದೆ. ಜಲಾಶಯದಲ್ಲಿ ಕುದುರೆಮುಖ, ಬಳ್ಳಾರಿ ಸೇರಿ ವಿವಿಧೆಡೆ ನಡೆಸಿದ ಗಣಿಗಾರಿಕೆಯಿಂದ ಸುಮಾರು 30ರಿಂದ 35 ಟಿಎಂಸಿ ಅಡಿ ಹೂಳು ತುಂಬಿದೆ. ಜತೆಗೆ 20 ಟಿಎಂಸಿ ಅಡಿ ನೀರು ಆವಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಮೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಅಸಮರ್ಪಕವಾಗಿ ಲಭ್ಯವಾಗುತ್ತಿದ್ದು, ಇನ್ನು ಯೋಜನೆ ಜಾರಿಗೊಂಡಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಘದ ಸದಸ್ಯರಾದ ಹರವಿ ನಾಗನಗೌಡ, ಜಗದೀಶ ಗುಪ್ತಾ, ಎಂ.ಎನ್.ಮೂರ್ತಿ, ಜಂಬಣ್ಣ ಯಕ್ಲಾಸಪುರ ಇದ್ದರು.
Related Articles
ಬಿಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದ್ದು, ಇದರಿಂದ ಮೂರು ಜಿಲ್ಲೆಗಳ ಜನತೆಗೆ ಅನ್ಯಾಯವಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
Advertisement
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂಮೂರು ವರ್ಷಗಳಿಂದಮಳೆ ಬರದೆ ಇರುವುದರಿಂದ ತುಂಗಭದ್ರಾ ಜಲಾಶಯ ತುಂಬಿಲ್ಲ. ಇದರಿಂದ ರೈತರು ಬೆಳೆ ಇಲ್ಲದೆ ಕಷ್ಟದಲ್ಲಿರುವಾಗ
ಪಾವಗಡಕ್ಕೆ ನೀರು ಬಿಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು ಸರಿಯಲ್ಲ. ತುಂಗಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಅಧಿಕೃತವಾಗಿ ನೀರು ಬಾರದ ಪರಿಸ್ಥಿತಿ ಉಂಟಾಗಿದೆ. ಜಲಾಶಯದ ಹಿನ್ನೀರನ್ನು ಬೇರೆ ಜಿಲ್ಲೆಗೆ ಕೊಡುವುದು ವೈಜ್ಞಾನಿಕವಾಗಿ ಸರಿಯುಲ್ಲ ಎಂದರು. ಸಚಿವ ಸಂಪುಟ ಸಭೆಯಲ್ಲಿ ನೀರು ಬಿಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುವಾಗ ಮೂರು ಜಿಲ್ಲೆಗಳ ಸಚಿವರ,
ಶಾಸಕರು ವಿರೋಧಿಸದೇ ಮೌನ ವಹಿಸಿರುವುದು ರೈತ ವಿರೋಧಿ ಧೋರಣೆ ಆಗಿದೆ. ಶಿಂಗಟಾಲೂರು ಹಾಗೂ ತುಂಗಾ ಯೋಜನೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ನೀರು ಕಡಿಮೆಯಾಗಿದೆ. ಅಂಥದ್ದರಲ್ಲಿ ಪಾವಗಡಕ್ಕೆ ನೀರು ಬಿಡುವುದು ರೈತರಿಗೆ ಬರೆ ಎಳೆದಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ತೀರ್ಮಾನ ಕೈಬಿಡದಿದ್ದರೆ ಮೂರು ಜಿಲ್ಲೆಗಳ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿ ಮುಖಂಡರಾದ ಅಮರೇಗೌಡ ವಿರೂಪಾಪುರ, ಕೊಲ್ಲಾ ಶೇಷಗಿರಿರಾವ್, ಈರೇಶ ಇಲ್ಲೂರು, ಅಡಿವೆಪ್ಪ, ಮಧ್ವರಾಜಾಚಾರ್ಯ ಇತರರು ಇದ್ದರು.