Advertisement

ಮಾವು ವಹಿವಾಟು ವೇಳೆ ಕೋವಿಡ್ ತಡೆಗೆ ಕ್ರಮಕೈಗೊಳ್ಳಿ

12:12 PM Apr 25, 2020 | mahesh |

ಶ್ರೀನಿವಾಸಪುರ: ಮೇ ಮೊದಲ ಅಥವಾ ಎರಡನೇ ವಾರ ಮಾವು ವಹಿವಾಟು ಆರಂಭಿಸಲಾಗುತ್ತಿದ್ದು, ಕೋವಿಡ್ ಸೋಂಕು ಹರಡದಂತೆ ಮಂಡಿ ಮಾಲಿಕರು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತು ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಚರ್ಚೆ ನಡೆಸಿದರು. ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಮಂಡಿ ಮಾಲಿಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ತಹಶೀಲ್ದಾರ್‌ ಎಸ್‌. ಎಂ.ಶ್ರೀನಿವಾಸ್‌, ಮಾವು ವಹಿವಾಟು ವೇಳೆ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮಾಲಿಕರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಮಂಡಿಯ ಕೆಲಸಕ್ಕೆ ಜಿಲ್ಲೆಯ ಕಾರ್ಮಿಕರನ್ನೇ ಬಳಸಿಕೊಳ್ಳಬೇಕು, ಮಂಡಿಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಆಧಾರ್‌ ಹೊಂದಿರಬೇಕು. ಆರೋಗ್ಯ ಪರೀಕ್ಷೆ ನಡೆಸಿದ ನಂತರ, ಸೋಂಕು ಇಲ್ಲದ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಎಪಿಎಂಸಿ ಕಾರ್ಯದರ್ಶಿ ವೇಣು, ಎಲ್ಲಾ ಮಂಡಿಗಳವರು ಈ
ನಿಯಮಗಳನ್ನು ಪಾಲಿಸದಿದ್ದಲ್ಲಿ ಅಂತವರ ಮಂಡಿಗಳ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಹೇಳುತ್ತಿದ್ದಂತೆ ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದರು.

ಎಪಿಎಂಸಿ ಅಧ್ಯಕ್ಷ ಎನ್‌.ರಾಜೇಂದ್ರಪ್ರಸಾದ್‌ ಮಾತನಾಡಿ, ಪ್ರಾಂಗಣದ ಎರಡು ಕಡೆ ಸೋಂಕು ನಿರೋಧಕ ಸುರಂಗ ಮಾರ್ಗ ನಿರ್ಮಿಸಿ ಮಾರು ಕಟ್ಟೆಗೆ ಬರುವ ವಾಹನಗಳ ಚಾಲಕರು ಹಾಗೂ ಇತರರನ್ನು ಸುರಂಗ ಮೂಲಕ ಒಳಗಡೆ ಬಿಡಲಾ ಗುತ್ತದೆ. ಅದೇ ರೀತಿ ಮಾವಿನಕಾಯಿ ಹೊತ್ತು ತರುವ ವಾಹನಗಳ ಮೇಲೆ ಔಷಧಿ ಸಿಂಪಡಣೆ ಮಾಡಲಾಗುತ್ತದೆ.

ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿಯಮ ಪಾಲಿಸಬೇಕೆಂದು ಮನವಿ ಮಾಡಿ ದರು. ಎಪಿಎಂಸಿ ಅಧಿಕಾರಿಗಳು, ತೋಟ ಗಾರಿಕೆ, ತಾಲೂಕು ಪಂಚಾಯ್ತಿ, ಕಂದಾಯ, ಆರೋಗ್ಯ ಇಲಾಖೆ, ಪುರಸಭೆ, ಇತರೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next