Advertisement
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಯಾವಾಗ ಬೀಳುತ್ತದೆ ಎಂಬುದುಗೊತ್ತಿಲ್ಲವಾದರೂ ಸಂಪುಟ ರಚನೆಯಾದ ನಂತರ ದಿನಗಣನೆ ಶುರುವಾಗುತ್ತದೆ. ದುರಂತದಲ್ಲಿ ಸರ್ಕಾರ ಅಂತ್ಯಗೊಳ್ಳುತ್ತದೆ. ಆದರೆ, ಬಿಜೆಪಿ ಯಾರೊಂದಿಗೂ ಸೇರಿ ಸರ್ಕಾರ ರಚಿಸಲ್ಲ. ಮತ್ತೆ ಜನರ ಬಳಿಗೆ ಹೋಗುತ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸ್ಥಾನವನ್ನು ಐದು ವರ್ಷಗಳ ಕಾಲ ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದಕ್ಕೆ
ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ, ಆರ್.ವಿ.ದೇಶಪಾಂಡೆ ಸೇರಿದಂತೆ ಇತರ ನಾಯಕರು ತಮ್ಮ ನೋವು ಹಾಗೂ ಹತಾಶೆ ವ್ಯಕ್ತಪಡಿಸಿದ್ದನ್ನು ನೋಡಿದರೆ ಸರ್ಕಾರಕ್ಕೆ ಭವಿಷ್ಯ ಇಲ್ಲ ಎಂಬುದು ಖಾತ್ರಿಯಾಗುತ್ತಿದೆ.
ಹಸಿದವರ-ಹಳಸಿದವರ ಸಂಬಂಧ ಬಹಳ ದಿನ ನಡೆಯದು ಎಂದರು.