ಗುಳೇದಗುಡ್ಡ: ಕಂದಾಯ ಇಲಾಖೆಯಿಂದ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ವಿವಿಧ ಪಿಂಚಣಿ ಪಡೆಯುತ್ತಿರುವವರ ಕುರಿತು ಸಮಗ್ರ ಪರಿಶೀಲನೆ ನಡೆಯುತ್ತಿದ್ದು, ನ.10ರೊಳಗೆ ಆಯಾ ವಾರ್ಡ್‌ಗಳಲ್ಲಿನ ಕೇಂದ್ರಗಳಲ್ಲಿ ಕುಳಿತ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪಿಂಚಣಿ ಪಡೆಯುವವರು ದಾಖಲೆ ನೀಡಬೇಕು. ಇಲ್ಲದಿದ್ದರೇ ಮಾಸಾಶನ ರದ್ದು ಮಾಡಲಾಗುವುದು ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವಿಧವಾ, ವೃದ್ಧಾಪ್ಯ, ಇಂದಿರಾಗಾಂಧಿ, ವಿಕಲಚೇತನ ಪಿಂಚಣಿ ಪಡೆಯುವವರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಪ್ರತಿಗಳನ್ನು ಕೂಡಲೇ ನೀಡಬೇಕು. ಗುಳೇದಗುಡ್ಡ ಪಟ್ಟಣದಲ್ಲಿ ಸರಿಯಾದ ರೀತಿಯಲ್ಲಿ ದಾಖಲೆ ಸಲ್ಲಿಕೆ ಮಾಡಿಲ್ಲ. ಇನ್ನೂ 3311 ಜನರು ದಾಖಲೆ ನೀಡಬೇಕು ಎಂದು ತಿಳಿಸಿದ್ದಾರೆ.
ಗುಳೇದಗುಡ್ಡ ತಾಲೂಕಿನಲ್ಲಿ ಒಟ್ಟು 11154 ಜನರು ವಿಧವಾ, ವೃದ್ಧಾಪ್ಯ, ಇಂದಿರಾಗಾಂಧಿ, ವಿಕಲಚೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ವಿವಿಧ ಮಾಸಾಶನ ಪಡೆಯುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಸದ್ಯ ಸಮಗ್ರ ಪರಿಶೀಲನೆ ನಡೆಯುತ್ತಿದ್ದು, 7843ಜನರು ದಾಖಲೆ ಪರಿಶೀಲನೆಯಾಗಿದ್ದು, ಇನ್ನೂ 3311ಜನರ ದಾಖಲೆ ಪರಿಶೀಲನೆಯಾಗಬೇಕಿದೆ ಎಂದು ಹೇಳಿದರು.
ಇಲ್ಲಿ ಭೇಟಿ ಕೊಡಿ: ಗ್ರಾಮೀಣ ಭಾಗದಲ್ಲಿ ಪೂರ್ಣಗೊಂಡಿದೆ. ಆದರೆ ಗುಳೇದಗುಡ್ಡ ಪಟ್ಟಣದಲ್ಲಿ ಇದುವರೆಗೂ ಜನರು ಸರಿಯಾಗಿ ಸ್ಪಂದಿಸಿಲ್ಲ. ಆದ್ದರಿಂದ ಜನರು ದಾಖಲೆ ಸಲ್ಲಿಸಲು ಸಾಲೇಶ್ವರ ದೇವಸ್ಥಾನ, ಹರದೊಳ್ಳಿ ಮಾರುತೇಶ್ವರ ದೇವಸ್ಥಾನ, ಖಜಾನೆ ಹತ್ತಿರ, ಕಂಠಿಪೇಟೆ ಬನಶಂಕರಿ ದೇವಸ್ಥಾನ, ಸರಕಾರಿ ಪ್ರಾಥಮಿಕ ಶಾಲೆ ನಂ.2ರಲ್ಲಿ, ರಜಂಗಳಪೇಟೆಯ ದಾನಮ್ಮ ದೇವಸ್ಥಾನದಲ್ಲಿ ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಗಳು ನೇಮಕ ಮಾಡಿದ್ದು, ಆಯಾ ವಾರ್ಡ್‌ಗಳ ಪಿಂಚಣಿ ಪಡೆಯುವ ಜನರು ಅವರಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನೀಡಿ, ದಾಖಲೆ ಪರಿಶೀಲನೆ ಮಾಡಿಕೊಳ್ಳಬೇಕು. ನ.10ರೊಳಗೆ ದಾಖಲೆ ಪರಿಶೀಲನೆ ಮಾಡಿಸದಿದ್ದರೇ ಅಂತಹವರ ಮಾಸಾಶನ ರದ್ದುಪಡಿಸಲಾಗುವುದು ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ ತಿಳಿಸಿದ್ದಾರೆ.