Advertisement
ಹಾಗಾಗಿ ಫ್ಯಾಷನ್ ಲೋಕದಲ್ಲಿ ಋತುಮಾನ ಗಳಿಗೂ ಒಂದು ಅಧ್ಯಾಯವಿದೆ. ಇದು ಚಳಿ ಗಾಲದ ಕಥೆ. ಬೇಸಿಗೆಯಲ್ಲೂ ಬೂಟ್‌ಗಳನ್ನು ಧರಿಸಿ ಬಬ್ಲಿ ಬಬ್ಲಿಯಾಗಿ ಕಾಣುವುದೂ ಈಗ ಹೆಣ್ಣುಮಕ್ಕಳಿಗೆ ಖುಷಿ ತರುವಂಥದ್ದೇ. ಸದ್ಯಕ್ಕೆ ಫ್ಯಾಷನ್ ಲೋಕದಲ್ಲಿ ಬೂಟ್‌ಗಳದ್ದೇ ಸದ್ದು,ಆಯ್ಕೆಯ ಬಗ್ಗೆ ಗಮನವಿರಲಿ ಬೂಟ್ ನಿಮ್ಮ ಸೊಗಸನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ಮಾಡಿಕೊಂಡದ್ದು. ಹಾಗಾಗಿ ಅದರ ಆಯ್ಕೆಯಲ್ಲಿ ತುಸು ಎಚ್ಚರಿಕೆ ವಹಿಸಬೇಕು. ಬರೀ ಮೆಲ್ನೋಟಕ್ಕೆ ಚೆನ್ನಾಗಿ ಕಂಡು ಪಾದಗಳಿಗೆ ಹೊಂದದ್ದಿದ್ದರೆ, ನಾವು ಹಾಕಿಕೊಳ್ಳುವ ದಿರಿಸಿಗೆ-ಅದರ ಬಣ್ಣಕ್ಕೆ ಹೊಂದಿಕೊಳ್ಳದಿದ್ದರೂ ಧರಿಸುವಾಗ ಮುಜುಗರ ಅನುಭವಿಸುತ್ತೇವೆ. ಹಾಗಾಗಿ ಆ ಬಗ್ಗೆ ಸಾಕಷ್ಟು ಯೋಚನೆ ಮಾಡಿ ಖರೀದಿಸುವ ಮೊದಲು.
Related Articles
Advertisement
ವಿವಿಧ ರೀತಿಯ ಬೂಟ್ಗಳುಬೂಟ್ಗಳಲ್ಲಿ ರಬ್ಬರ್, ಪ್ಲಾಸ್ಟಿಕ್, ಬಟ್ಟೆ, ಚರ್ಮಗಳಿಂದ ಮಾಡಿದ ಬೂಟ್ ಮಾರುಕಟ್ಟೆಗಳಲ್ಲಿ ಲಭ್ಯ. ವಿಭಿನ್ನ ವಿನ್ಯಾಸಗಳೂ ಇವೆ. ಬೂಟ್‌ಗಳು ಶಾರ್ಟ್ಸ್, ಥ್ರಿà ಪೋರ್ಥ್, ಸ್ಕರ್ಟ್, ಫ್ರಾಕ್ ಹೀಗೆ ಎಲ್ಲ ಬಟ್ಟೆಗಳಿಗೂ ಹೊಂದುತ್ತದೆ. ಯಾರಿಗೆ ಯಾವುದು ಉತ್ತಮ?
ಶಾರ್ಟ್ ಫ್ರಾಕ್ ಅಥವಾ ಮಿನಿ ಸ್ಕರ್ಟ್ ಧರಿಸುವಾಗ ಲೆದರ್ ಬೂಟ್ಸ್‌ಗಳನ್ನು ಧರಿಸಿ ಇದು ಹುಟ್ಟು ಹಬ್ಬದ ಸಮಾರಂಭ, ಸರಳವಾದ ಕಾರ್ಯಕ್ರಮಕ್ಕೆ ಬಹಳ ಚೆನ್ನಾಗಿ ಹೊಂದುತ್ತದೆ. ಗಿಡ್ಡ ಕಾಲಿನವರು ಆ್ಯಂಕಲ್ ಲೆಂತ್ ಬೂಟ್ ಮತ್ತು ಉದ್ದ ಕಾಲಿನವರು ಲಾಂಗ್ ಲೆಂತ್ ಬೂಟ್ಸ್ ಬಳಸಿದರೆ ಉತ್ತಮ. ಇದು ಕಾಲುಗಳ ಸೊಗಸನ್ನು ಹೆಚ್ಚಿಸಬಲ್ಲದು. ಕಸ್ಟಮೈಸ್ ಬೂಟ್ಸ್‌ಗಳ ಹಾವಳಿ
ಜಿಪ್, ಬಟನ್, ಲೇಸ್, ಹ್ಯಾಂಗಿಂಗ್, ಮ್ಯಾಗ್ನೆಟ್ ಹೀಗೆ ಹಲವಾರು ಆಯ್ಕೆಗಳಿದ್ದು, ಬೂಟ್ಸ್‌ಗಳ ಮೇಲೆ ಹೆಸರು, ಭಾವಚಿತ್ರ, ನಿಮ್ಮ ಪ್ರೀತಿ ಪಾತ್ರರ ಹೆಸರು, ಪ್ರಾಣಿಗಳ ಹೆಸರು, ನೆಚ್ಚಿನ ನಟ, ನಟಿಯರ ಹೆಸರನ್ನೂ ಇವುಗಳ ಮೇಲೆ ಮೂಡಿಸಬಹುದು. ಇತ್ತೀಚೆಗೆ ಇದಕ್ಕೆ ಆನ್‌ಲೈನ್ ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇವುಗಳು ಸ್ವಲ್ಪ ದುಬಾರಿ. -ಪ್ರೀತಿ ಭಟ್