Advertisement

ಚೆಂಡು ಒದ್ದೆಯಾದರೆ ಕೂಡಲೇ ಬದಲಿಸಿ: ಡೀನ್‌ ಜೋನ್ಸ್‌

12:13 AM Nov 02, 2019 | Sriram |

ಮೆಲ್ಬರ್ನ್: ಹಗಲು-ರಾತ್ರಿ ಟೆಸ್ಟ್‌ ಪಂದ್ಯದ ವೇಳೆ ಮಂಜಿನ ಪ್ರಭಾವ ಇದ್ದೇ ಇರುತ್ತದೆ. ಗುಲಾಲಿ ಚೆಂಡು ಒದ್ದೆಯಾಗುವುದೂ ಸಹಜ. ಆಗ ಚೆಂಡನ್ನು ಕೂಡಲೇ ಬದಲಿಸುವುದೇ ಸೂಕ್ತ ನಿರ್ಧಾರವಾಗಲಿದೆ ಎಂದು ಆಸ್ಟ್ರೇಲಿಯದ ಮಾಜಿ ಆಟಗಾರ ಡೀನ್‌ ಜೋನ್ಸ್‌ ಹೇಳಿದ್ದಾರೆ.

Advertisement

“ಕ್ರಿಕೆಟಿನ ನಿಯಮಾವಳಿ ಬದಲಾಗಿದೆ. ಬ್ರಾಡ್‌ಮನ್‌ ಕಾಲದಲ್ಲಿ ಪ್ರತೀ 200 ರನ್ನಿಗೆ ಹೊಸ ಚೆಂಡನ್ನು ತೆಗೆದುಕೊಳ್ಳಲಾಗುತ್ತಿತ್ತು. ನಾವೀಗ ಅಹರ್ನಿಶಿ ಪಂದ್ಯದ ಕಾಲದಲ್ಲಿದ್ದೇವೆ. ಎಲ್ಲ ಕಡೆ ಮಂಜಿನ ಪ್ರಭಾವ ಇರುವುದು ಸಹಜ. ಚೆಂಡು ಒದ್ದೆಯಾಗಿ ಜಾರುವಂತಿದ್ದರೆ ಅದನ್ನು ಕೂಡಲೇ ಬದಲಿಸುವಂತಾಗಬೇಕು’ ಎಂದು ಡೀನ್‌ ಜೋನ್ಸ್‌ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next