Advertisement

Siddaramaiah ಸುಳ್ಳುರಾಮಯ್ಯ ಅಲ್ಲವಾದರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ: ಸಿ.ಟಿ.ರವಿ

02:47 PM Jun 15, 2023 | Team Udayavani |

ಚಿಕ್ಕಮಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ “ಸುಳ್ಳುರಾಮಯ್ಯ” ಅಲ್ಲ ಅನ್ನೋದಾದರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು  ಗುರುವಾರ ವಾಗ್ದಾಳಿ ನಡೆಸಿದ್ದಾರೆ.

Advertisement

ಅಕ್ಕಿ ರಾಜಕೀಯದಲ್ಲಿ ಕೇಂದ್ರದ ಮೇಲೆ ಕಾಂಗ್ರೆಸ್ ಆರೋಪ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಸಿ.ಟಿ.ರವಿ, ಅಕ್ಕಿ ಕಳಿಸುತ್ತೇವೆ, ನಿಮ್ಮ ಹೆಸರು ಹಾಕಿಕೊಂಡು ಕೊಡಿ ಅಂತ ಲೆಟರ್ ಕಳಿಸಿಲ್ಲ. ಎಲ್ಲಿದೆ ಕಮಿಟ್ಮೆಂಟ್ ಲೆಟರ್? ತೋರಿಸಲಿ. FCI ಅವರು ನಿಮಗೆ ಅಗತ್ಯವಿರುವ ಅಕ್ಕಿ ಕಳಿಸುತ್ತೇವೆ ಎಂದು ಹೇಳಿದ್ದಾರಾ, ಲೆಟರ್ ತೋರಿಸಿ. ತನ್ನ ಕೈಯಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಬೊಟ್ಟು ಮಾಡುವುದನ್ನು ಈಗಲೇ ಶುರು ಮಾಡಿದ್ದಾರೆ.ಆರೋಪ ಮಾಡುವುದು ನಾಲ್ಕೈದು ತಿಂಗಳ ಬಳಿಕ ಎಂದು ಭಾವಿಸಿದ್ದೆ, ಈಗಲೇ ಶುರು ಮಾಡಿದ್ದಾರೆ. ಕೊಟ್ಟರೆ ನಾನು ಕೊಟ್ಟೆ ಅನ್ನೋದು, ಕೊಡದಿದ್ದರೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಎಂದು ಕಿಡಿ ಕಾರಿದರು.

ಜುಲೈ 1ರಿಂದ ಅಕ್ಕಿ ಉಚಿತ ಎಂದು ಭಾಷಣ ಮಾಡಿದ್ದರು, ಈಗ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವು ಎಲ್ಲಾ BPL ಕಾರ್ಡು ದಾರರ ಖಾತೆಗೆ ಹಣ ಹಾಕಿ, ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ. ಆಕಾಶವೇನು ಕಳಚಿ ಬಿದ್ದಿಲ್ಲ, ಹಣ ಕೊಟ್ಟರೆ ಅಕ್ಕಿ ಸಿಗುತ್ತೆ, ಮೊದಲು ಹಣ ಹಾಕಿ ಎಂದು ಸವಾಲು ಹಾಕಿದರು.

‘ಕೊಟ್ಟಿದ್ದು ಭಯಂಕರ ಸೌಂಡ್, ಕಿತ್ತುಕೊಂಡಿದ್ದು ಸೌಂಡ್ ಲೆಸ್’ಎಂದ ಸಿ.ಟಿ ರವಿ ಅವರು, ‘ಏನನ್ನೂ ಕೇಳದೆ ವಿದ್ಯುತ್ ಶಕ್ತಿ ದರ ಏರಿಸಿದ್ದಾರೆ. ಅದು KERC ತೀರ್ಮಾನ ಹಿಂದೆಯೇ‌ ಆಗಿತ್ತು ಎಂದರು. ಹಿಂದೆ-ಮುಂದೆ ನೋಡದೆ ಅನುಮೋದನೆ ಕೊಟ್ಟವರು ಇವರು. KERC ಇಂತಹ ಪ್ರಸ್ತಾವನೆಯನ್ನ ಬಿಜೆಪಿ ಸರ್ಕಾರದ ಮುಂದಿಟ್ಟಿತ್ತು, ಬಿಜೆಪಿ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ. ಅದಕ್ಕೆ ಅನುಮತಿ ಕೊಟ್ಟಿದ್ದೆ ಕಾಂಗ್ರೆಸ್ ಸರ್ಕಾರ’ ಎಂದರು.

ಸದ್ದಿಲ್ಲದೆ, ಎಲ್ಲಾ ಲಿಕ್ಕರ್ ಮೇಲೆ 20 ರೂಪಾಯಿ ಜಾಸ್ತಿ ಮಾಡಿದ್ದಾರೆ. ಅದಕ್ಕೂ ಕಾರಣ ಕೇಂದ್ರ ಸರ್ಕಾರವೇವೇ? ರಿಜಿಸ್ಟ್ರೇಷನ್ ಫೀಸ್, ಮೋಟಾರ್ ವೆಹಿಕಲ್ ಮೇಲಿನ ದರ ಹೆಚ್ಚಿಸಲು ಮುಂದಾಗಿದ್ದಾರಂತೆ. ಒಂದು ಕಡೆ ಕಿತ್ತಿಕೊಳ್ಳುವುದು, ಮತ್ತೊಂದು ಕಡೆ ಕೊಟ್ಟಂತೆ ಮಾಡುವುದು ಎಂದು ಕಿಡಿ ಕಾರಿದರು.

Advertisement

ಅಧಿಕಾರಿಗಳ ಜೊತೆ ಸುರ್ಜೆವಾಲ ಸಭೆ ಕುರಿತು ಪ್ರತಿಕ್ರಿಯಿಸಿ, ಯಾವುದರಲ್ಲಿ ಎಷ್ಟು ಹಣವನ್ನ ಕೇಂದ್ರಕ್ಕೆ ಎಟಿಎಂ ಮೂಲಕ ಕಳಿಸಬಹುದು ಎಂಬುದಕ್ಕೆ ಮೀಟಿಂಗ್ ಮಾಡಿದ್ದಾರೆ. ಇಲ್ಲವಾದರೆ ಅವರಿಗೆ ಏನು ಕೆಲಸ ಅಲ್ಲಿ, ಕಾಂಗ್ರೆಸ್ ಇತಿಹಾಸ ಇರುವ ಪಕ್ಷ, ಅದು ಪಕ್ಷದ ಸಭೆಯಾದರೆ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಅಧಿಕಾರಿಗಳ ಸಭೆಯಾದರೆ ಸುರ್ಜೆವಾಲರಿಗೆ ಏನು ಕೆಲಸ? ಎಂದು ಪ್ರಶ್ನಿಸಿದರು.

ಎಸಿ, ಡಿಸಿ, ತಹಶೀಲ್ದಾರ್ ಪೋಸ್ಟ್ ಗೆ ಇಷ್ಟು ಅಂತ ಅಡ್ವಟೈಸ್ಮೆಂಟ್ ಕೂಡ ಕೊಟ್ಟಿದ್ದರು. ಪೋಸ್ಟ್ ಗಳನ್ನ ಹರಾಜು ಮಾಡುತ್ತಿದ್ದಾರೆ, ಕೆಲವು ಓಪನ್ ಕೆಲವು ಸೀಲ್ಡ್ ಬಿಡ್ , ನಮ್ಮ ಮೇಲೆ ಆರೋಪ ಮಾಡಿದ್ರು, ಇವತ್ತು ಅದೇ ಕೆಲಸ ಮಾಡುತ್ತಿರುವುದು ಅವರು. ನಾನು 3 ರಾಜ್ಯದ ಪ್ರಭಾರಿ, 2 ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಎಲ್ಲೂ ಕೂಡ ಮುಖ್ಯಮಂತ್ರಿಗಳ ಜೊತೆ ಅಧಿಕಾರಿಗಳ ಸಭೆ ಮಾಡಿಲ್ಲ. ಸಿಎಂ‌, ಮಂತ್ರಿ ಹಾಗೂ ಪಕ್ಷದ ಶಾಸಕರ ಜತೆ ಸಭೆ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next