Advertisement

ಸನಾತನ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ

07:20 AM Jan 28, 2019 | Team Udayavani |

ಚನ್ನರಾಯಪಟ್ಟಣ: ಸನಾತನ ಹಿಂದೂ ಧರ್ಮ ನಶಿಸಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ, ಸಾಹಿತಿ ಪ್ರೊ. ಟಿ.ಎನ್‌.ಪ್ರಭಾಕರ್‌ ತಿಳಿಸಿದರು. ತಾಲೂಕಿನ ನವೋದಯ ಶಾಲಾ ಆವರಣದಲ್ಲಿ ನಡೆಯುತ್ತಿರುವ ತಾಲೂಕು ಬ್ರಾಹ್ಮಣ ಸಮ್ಮೇಳನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವ ವಿಷಯವಾಗಿ ನಡೆದ ಯುವ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ವಿಶ್ವದ ಇತರೆ ದೇಶಗಳು ಭಾರತವನ್ನು ಗುರುತಿಸು ತ್ತಿರುವುದು ಸನಾತನ ಸಂಪ್ರದಾಯದಿಂದ. ಹಿಂದೂ ಧರ್ಮವನ್ನು ಹಾಳು ಮಾಡಲು ಸ್ವಯಂ ಘೋಷಿತ ಬುದ್ಧಿಜೀವಿಗಳು ಮುಂದಾಗುತ್ತಿದ್ದಾರೆ ಎಂದು ಆಪಾದಿಸಿದರು.

ಸಂಸ್ಕೃತಿ ಉಳಿಸಿ: ಸರ್ವರ ಏಳಿಗೆಗಾಗಿ ದೇವರಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತಿರುವುದ ಭಾರತದ ಸನಾತನ ಧರ್ಮದಲ್ಲಿ. ಜಗತ್ತು ಬದಲಾಗಬೇಕು ಎನ್ನುವುದಕಕ್ಕಿಂತ ನಾವು ಬದಲಾಗಬೇಕು. ನಮ್ಮ ಸಂಪ್ರದಾಯ ಹಾಗೂ ಸಂಸ್ಕಾರವನ್ನು ಮೊದಲು ನಾವು ಆಚರಣೆ ಮಾಡುವ ಮೂಲಕ ಅದರ ಫ‌ಲವನ್ನು ಅನುಭವಿಸಬೇಕು, ಇತರರ ಮೇಲೆ ಅನಗತ್ಯವಾಗಿ ನಮ್ಮ ಸಂಪ್ರದಾಯವನ್ನು ಹೇರಬಾರದು ಎಂದು ತಿಳಿಸಿದರು.

ವಿಜ್ಞಾನದಿಂದ ಸಾಬೀತಾಗಿದ್ದು ಬದಲಾಗುತ್ತದೆ. ವೇದಾಂತ ವಿಜ್ಞಾನ ಎಂದಿಗೂ ಬದಲಾಗುವುದಿಲ್ಲ. ಧರ್ಮ ಉಳಿವಿಗಾಗಿ ವಿಜ್ಞಾನ ಇರಬೇಕು. ಇದರ ಬದಲಾಗಿ ಧಾರ್ಮಿಕ ವಿರೋಧಕ್ಕಾಗಿ ವಿಜ್ಞಾನವನ್ನು ಬಳಸಲಾಗುತ್ತಿದೆ. ನಿಜವಾದ ವಿಜ್ಞಾನ ಎಂದಿಗೂ ಸನಾತನ ಧರ್ಮವನ್ನು ವಿರೋಧಿಸುವುದಿಲ್ಲ. ವಿಜ್ಞಾನದ ಮುಖವಾಡ ಹಾಕಿರುವವರು ಹಿಂದೂ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಚಾರದ ಗೀಳು: ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ಕುರಿತು ವಿಚಾರ ಮಂಡನೆ ಮಾಡಿದ ಮೈಸೂರು ಪ್ರಸನ್ನ ಪ್ರಕಾಶ್‌ ಯಾರನ್ನೂ ಹಿಂಸಿದರೆ ಇರುವವರು, ಸ್ತ್ರೀಗಳನ್ನು ಮಾತೃ ಸಮಾನ ವಾಗಿ ನೋಡುವುದು ಬ್ರಾಹ್ಮಣರ ಹುಟ್ಟುಗುಣ. ಬ್ರಾಹ್ಮಣ್ಯದ ಬಗ್ಗೆ ಸರಿಯಾಗಿ ತಿಳಿಯದ ವಿಚಾರವಾದಿ ಗಳು ಪ್ರಚಾರದ ಗೀಳಿಗೆ ಧರ್ಮವನ್ನು ವಿರೋಧಿಸುತ್ತಿದ್ದಾರೆ ಎಂದರು.

Advertisement

ಸಂಪ್ರದಾಯ ಬಿಡಬೇಡಿ: ನಮ್ಮ ವೇಷ ನಮ್ಮ ನಡತೆಯನ್ನು ತೋರಿಸುತ್ತದೆ. ವೈದಿಕ ವೇಷ ತೊಡಲು ನಾಚಿಕೆ ಪಡುವ ವ್ಯಕ್ತಿ ಧರ್ಮ ವಿರೋಧಿಯಾಗು ತ್ತಾನೆ. ತಾತ್ಸಾರ ಮನೋಭಾವದಿಂದ ನಾವೇ ನಮ್ಮ ಸಂಪ್ರದಾಯವನ್ನು ಕೈ ಬಿಡುವುದರಲ್ಲಿ ಅರ್ಥವಿಲ್ಲ, ಮನುಷ್ಯತ್ವದ ಪಾಠ ಹೇಳುವ ವಿಪ್ರ ತನ್ನ ಧರ್ಮವನ್ನು ಆಚರಣೆ ಮಾಡಬೇಕು ಎಂದರು.

ಮನು ಸ್ಮತಿ ಸುಟ್ಟರೆ ನಷ್ಟವಿಲ್ಲ: ಹಾಸನ ವಾಸವಿ ಶಾಲೆ ಪ್ರಾಂಶುಪಾಲ ಮಂಜುನಾಥ್‌ ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಮಹತ್ವದ ವಿಷಯ ಮಂಡನೆ ಮಾಡಿ, ದೇಶದಲ್ಲಿ ಭಗವದ್ಗೀತೆ ಹಾಗೂ ಮನುಸ್ಮತಿ ಸುಡುವುದಾಗಿ ಹೇಳುತ್ತಾರೆ ಇದರಿಂದ ನಷ್ಟ ಅನುಭವಿಸುವುದಿಲ್ಲ. ಈ ಎರಡು ಗ್ರಂಥ ಬರೆದ ಕತೃಗಳ ಬಗ್ಗೆ ದೇಶದಲ್ಲಿ ಹೆಚ್ಚು ಚರ್ಚೆ ಆಗುವುದಲ್ಲದೇ ಮುದ್ರಣದ ಸಂಖ್ಯೆ ಹೆಚ್ಚುತ್ತದೆ ಎಂದರು. ಗ್ರಂಥಗಳನ್ನು ಸುಡುವುದಾಗಿ ಹೇಳುವವರು ಈಗ ಮುದ್ರಣ ಗೊಂಡಿರುವ ಎಲ್ಲಾ ಕೃತಿಗಳನ್ನು ಖರೀದಿಸಿ ಸುಡುವ ಮನಸು ಮಾಡಲಿ ಎಂದು ಅವರು ಸವಾಲು ಹಾಕಿದರು.

ಮನುಸ್ಮತಿ ಅರ್ಥ ಮಾಡಿಕೊಳ್ಳಿ: ಮನುಸ್ಮತಿ ಓದಿ ಅರ್ಥ ಮಾಡಿಕೊಂಡವರು ಪರಿಸರ ಸಂರಕ್ಷಕರಾಗುತ್ತಾರೆ. ಮನು ಅಂದೇ ಪರಿಸರ ಮಾಲಿನ್ಯದ ಬಗ್ಗೆ ಬರೆದಿದ್ದ. ಒಂದು ವೇಳೆ ಮನುಸ್ಮತಿ ಓದಿ ಇತರರಿಗೆ ಮಾರ್ಗದರ್ಶನ ಮಾಡಿದ್ದರೆ ನದಿ, ಸಾಗರ ಸರೋವರಗಳಲ್ಲಿ ಜಲಮಾಲಿನ್ಯ ಆಗುತ್ತಿರಲಿಲ್ಲ. ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತೆ ಮರಿಚಿಕೆಯಾಗಿ ಅಶುಚಿತ್ವ ತಾಂಡ ವಾಡುತ್ತಿರಲಿಲ್ಲ. ಇದೊಂದು ಬದುಕುವ ದಾರಿ ತೋರಿಸುತ್ತದೆ ಹಾಗೂ ಇತರರು ಬದುಕಲು ಅವಕಾಶ ಮಾಡಿಕೊಡುವ ಸತ್ವವಿದೆ ಎಂದರು.

ಸಮ್ಮೇಳನಾಧ್ಯಕ್ಷ ಎ.ಎಸ್‌.ಉಮೇಶ್‌, ಬ್ರಾಹ್ಮಣ ಯು ವೇದಿಕೆ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಡಾ. ಸಿ.ಎನ್‌.ಶೇಷ ಶಯನ, ಅತ್ತಾವರ ರಾಮದಾಸ, ತಾಲೂಕು ಅಧ್ಯಕ್ಷ ತಿಮ್ಮಪ್ಪಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next