Advertisement

Rohith Sharma: ರೋಹಿತ್‌ ಪಾಸ್‌ಪೋರ್ಟ್‌ ಮರೆತರೆ? ವಿಚಾರ ಬಹಿರಂಗಪಡಿಸಿದ ಕೊಹ್ಲಿ

10:27 AM Sep 20, 2023 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಗೆ ಆಗಾಗ ಮರೆಯುವ ಸ್ವಭಾವವಿದೆ. ಅದೂ ಪಾಸ್‌ಪೋರ್ಟ್‌, ಐಪ್ಯಾಡ್‌ ನಂತಹ ಮಹತ್ವದ ಸಂಗತಿಗಳನ್ನೇ ಮರೆತುಬಿಡುತ್ತಾರೆ.

Advertisement

ಇತ್ತೀಚೆಗೆ ಶ್ರೀಲಂಕಾದಲ್ಲಿ ಏಷ್ಯಾ ಕಪ್‌ ಗೆದ್ದ ಭಾರತ ತಂಡ, ಕೊಲಂಬೊದಿಂದ ಭಾರತಕ್ಕೆ ಹೊರಡಲು ಸಿದ್ಧವಾಗಿತ್ತು. ಆಗ ಹೋಟೆಲ್‌ನಿಂದ ಹೊರಬರುವಾಗ ರೋಹಿತ್‌ಗೆ ಪಾಸ್‌ಪೋರ್ಟ್‌ ಅನ್ನೇ ಮರೆತಿರುವುದು ನೆನಪಾಗಿದೆ. ಕೂಡಲೇ ಸಹಾಯಕ ಸಿಬ್ಬಂದಿ ರೋಹಿತ್‌ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮರಳಿ ಪಾಸ್‌ಪೋರ್ಟ್‌ ಅನ್ನು ರೋಹಿತ್‌ಗೆ ತಲುಪಿಸಿದ್ದಾರೆ. ಈ ಕಾರಣ ಅವರು ತಡವಾಗಿ ತಂಡದ ಬಸ್‌ ಹತ್ತಿದ್ದಾರೆ. ಇದನ್ನು ವಿರಾಟ್‌ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಬಹಿರಂಗಪಡಿಸಿದ್ದಾರೆ. ಈಗ ತಂಡದ ವ್ಯವಸ್ಥಾಪಕರು ರೋಹಿತ್‌ಗೆ ಸಂಬಂಧಿಸಿದ ವಸ್ತುಗಳನ್ನು ಎರಡೆರಡು ಭಾರಿ ಪರಿಶೀಲಿಸಲು ವ್ಯವಸ್ಥೆ ಮಾಡಿದ್ದಾರಂತೆ.

ಇದನ್ನೂ ಓದಿ: CM Whatsapp Channel: ಸಿಎಂ ವಾಟ್ಸ್‌ಆ್ಯಪ್‌ ಚಾನೆಲ್‌ಗೆ ನಿರೀಕ್ಷೆ ಮೀರಿ ಸ್ಪಂದನೆ

Advertisement

Udayavani is now on Telegram. Click here to join our channel and stay updated with the latest news.

Next