Advertisement

ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧವಾದರೆ ಸ್ವತ್ಛ ಭಾರತ ಯಶಸ್ವಿ

03:51 PM Dec 02, 2018 | Team Udayavani |

ದಾವಣಗೆರೆ: ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧ ಆದಾಗ ಮಾತ್ರ ಸ್ವತ್ಛ ಭಾರತದ ಪರಿಕಲ್ಪನೆ ಯಶಸ್ವಿಯಾಗಲು ಸಾಧ್ಯ ಎಂದು ಪಾಲಿಕೆ ಉಪಮೇಯರ್‌ ಕೆ. ಚಮನ್‌ಸಾಬ್‌ ಹೇಳಿದರು.

Advertisement

ಶನಿವಾರ, ಪಿ.ಜೆ ಬಡಾವಣೆಯ ಎಸ್‌ .ಎ.ಜೆ.ಬಿ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ (ಶಿವಮೊಗ್ಗ, ಮಂಗಳೂರು), ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ವತ್ಛ ಭಾರತ (ನಗರ) ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಸ್ವತ್ಛ ಭಾರತ ಪರಿಕಲ್ಪನೆ ಬಗ್ಗೆ ಕನಸು ಕಂಡವರು. ಅದೇ ರೀತಿ ಕೇಂದ್ರ ಸರ್ಕಾರ ಸ್ವತ್ಛತೆ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸ್ವತ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ರೋತ್ಸಾಹಿಸುತ್ತಿದೆ. ಆದರೆ ಈ ಅಭಿಯಾನ ಯಶಸ್ವಿಯಾಗಲು ಮೊದಲು ದೇಶ ಪ್ಲಾಸ್ಟಿಕ್‌ ಮುಕ್ತ ಆಗಬೇಕಿದೆ ಎಂದರು.

ದಾವಣಗೆರೆ ನಗರದಲ್ಲಿ ಪ್ರತಿನಿತ್ಯ ಸಾವಿರ 150 ಟನ್‌ ಕಸ ಉತ್ಪತ್ತಿ ಆಗುತ್ತಿದೆ. ಕಸ ವಿಲೇವಾರಿಗಾಗಿ 150 ಟಾಟಾ ಏಸ್‌ ವಾಹನ, 15 ಟ್ರ್ಯಾಕ್ಟರ್‌, 4 ಲಾರಿಗಳು ಇವೆ. ಆದರೂ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಸcತ್ಛತೆ ನಿರ್ವಹಣೆ ಮಾಡುವುದು ಮಹಾನಗರಪಾಲಿಕೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಯಾರು ಏನೇ ಮಾಡಿದರೂ ಕೂಡ ಸ್ವತ್ಛತೆ ಆಗಲ್ಲ. ಈ ಬಗ್ಗೆ ಅರಿವು ಪ್ರತಿಯೊಬ್ಬರಲ್ಲಿ ಬರಬೇಕು. ನಮ್ಮ ಮನೆಗಳನ್ನು ಹೇಗೆ ಸ್ವತ್ಛತೆಯಿಂದ ಕಾಪಾಡಿಕೊಳ್ಳುತ್ತೇವೆಯೋ ಅದೇ ರೀತಿ ತಮ್ಮ ಬಡಾವಣೆ, ನಗರ ಸ್ವತ್ಛವಾಗಿಟ್ಟುಕೊಳ್ಳಲು ಪ್ರತಿಯೊಬ್ಬರೂ ಮುಂದಾದಲ್ಲಿ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
 
ಸಮಾಜ ಸೇವಕ ಟಿ.ಎಸ್‌. ಮಹಾದೇವಸ್ವಾಮಿ ಮಾತನಾಡಿ, ಪ್ಲಾಸ್ಟಿಕ್‌ ನಿರ್ಮೂಲನೆ ಸರ್ಕಾರದಿಂದಲೇ ಸಾಧ್ಯವಿಲ್ಲ. ವಿದ್ಯಾವಂತರಾದ ನಾವೇ ಅವಿದ್ಯಾವಂತರಂತೆ ನಡೆದುಕೊಂಡರೇ ಹೇಗೆ? ಮೊದಲು ವಿದ್ಯಾವಂತರು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ಬಿಡಬೇಕು. ಪರಿಸರಕ್ಕೆ ಪೂರಕವಾದ ಬ್ಯಾಗ್‌ಗಳನ್ನು ಬಳಕೆ ಮಾಡಿ ಇತರರಿಗೂ ಪ್ರೇರಣೆ ಆಗಬೇಕು ಎಂದು ಹೇಳಿದರು.

ಸ್ವತ್ಛ ಭಾರತ ಸಂಯೋಜಕಿ ಡಾ| ಶಾಂತಭಟ್‌ ಮಾತನಾಡಿ, ಸ್ವತ್ಛತೆ ಕಾರ್ಯ ಕೇವಲ ಒಂದು ದಿನಕ್ಕೆ ಸಿಮೀತ ಆಗಬಾರದು. ನಿತ್ಯವೂ ನಡೆಯಬೇಕು. ಮನುಷ್ಯ ಗೊಬ್ಬರಕ್ಕಾಗಿ ಅಲೆದಾಡದೇ ತಮ್ಮ ಮನೆಯಲ್ಲೇ ದೊರೆಯುವ ಶೇ. 80ರಷ್ಟು ಹಸಿಕಸ ಹಾಗೂ ರಸ್ತೆ, ಅಂಗಳದಲ್ಲಿ ಸಿಗುವ ಒಣ ಕಸ ಬೇರ್ಪಡಿಸಿ ಸೂಕ್ತ ರೀತಿಯಲ್ಲಿ ಸಂಸ್ಕರಿಸಿ, ಸಾವಯವ ಗೊಬ್ಬರ ತಯಾರಿಸಿಕೊಳ್ಳಬಹುದು
ಎಂದು ಸಲಹೆ ನೀಡಿದರು.ಈ ರೀತಿ ತಯಾರಿಸಿದ ಗೊಬ್ಬರವನ್ನು ಮನೆ ಅಂಗಳದ ಗಿಡ-ಮರಗಳಿಗೆ, ತಾರಸಿ ತೋಟಕ್ಕೆ ನೀಡಿದರೆ ಭೂಮಿಯು ಸಮೃದ್ಧವಾಗುತ್ತದೆ. ಜೊತೆಗೆ ಹಸಿರೀಕರಣದಿಂದ ಶುದ್ಧ ಗಾಳಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

Advertisement

ಕ್ಷೇತ್ರ ಜನಸಂಪರ್ಕ ಪ್ರಚಾರಾಧಿಕಾರಿ ಜಿ. ತುಕರಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಉಪ ಆಯುಕ್ತ
ರವೀಂದ್ರ ಬಿ. ಮಲ್ಲಾಪುರ, ಕಾಲೇಜು ಪ್ರಾಂಶುಪಾಲ ಎಸ್‌. ಪ್ರದೀಪ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next