Advertisement

ಅಗತ್ಯವಲ್ಲದ ಅಂಗಡಿ ತೆರೆದರೆ 500 ರೂ. ದಂಡ

07:40 AM May 09, 2020 | Suhan S |

ಬೀದರ: ಬೀದರ ನಗರಸಭೆ ವ್ಯಾಪ್ತಿಯಲ್ಲಿ ಇನ್ಮುಂದೆ ಅಗತ್ಯವಿಲ್ಲದ ಅಂಗಡಿಗಳನ್ನು ತೆರೆದಿರುವುದಕ್ಕೆ ಮೊದಲ ಸಲ ಉಲ್ಲಂಘನೆಗೆ 500 ರೂ., ಮತ್ತು ಎರಡನೇ ಸಲ ಉಲ್ಲಂಘನೆಗೆ 1000 ರೂ., ದಂಡನೆ ವಿಧಿಸಸಬೇಕು ಎಂಧು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ನಿರ್ದೇಶನ ನೀಡಿದ್ದಾರೆ.

Advertisement

ಮೊದಲ ಸಲ ಉಲ್ಲಂಘನೆಗೆ ದಂಡದ ಮೊತ್ತ ಮಾಸ್ಕ್ ಹಾಕದಿದ್ದರೆ 50 ರೂ., ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ 250 ರೂ., ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ 100 ರೂ., ಗುಟ್ಕಾ ತಂಬಾಕುಗಳನ್ನು ಮಾರಾಟ ಮಾಡಿದರೆ ದಂಡ 250 ರೂ., ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ. ಅದೇ ರೀತಿ ಎರಡನೇ ಸಲ ಉಲ್ಲಂಘನೆಗೆ ದಂಡದ ಮೊತ್ತವು ಮಾಸ್ಕ್ ಹಾಕದಿದ್ದರೆ 100 ರೂ., ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದಕ್ಕೆ ದಂಡ 500 ರೂ., ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದಕ್ಕೆ ದಂಡ 200 ರೂ., ಗುಟ್ಕಾ ತಂಬಾಕುಗಳನ್ನು ಮಾರಾಟ ಮಾಡ್ತಿರುವುದಕ್ಕೆ 500 ರೂ., ಯಾವುದೇ ಅಗತ್ಯ ವಸ್ತುಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ 1000 ರೂ. ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next