Advertisement

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

11:42 AM Dec 01, 2021 | Team Udayavani |

ಬೆಂಗಳೂರು: ದಕ್ಷಿಣ ಆಫ್ರಿಕಾ ಪ್ರಜೆಯ ರೋಗ ಲಕ್ಷಣ ವಿಭಿನ್ನವಾಗಿದ್ದು, ಒಂದು ವೇಳೆ ಈ ರೋಗ ಒಮಿಕ್ರಾನ್ ಎಂದು ಖಚಿತವಾದರೆ ಬಿಗಿ ಕ್ರಮ ಗ್ಯಾರಂಟಿ. ಆದರೆ ಇದುವರೆಗೂ ಇದೇ ತಳಿ ಎಂದು ಖಚಿತವಾಗಿಲ್ಲ. ಆದರೆ ಮುಂದೆ ಖಚಿತವಾದರೆ ಬಿಗಿ ಕ್ರಮ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ನಾವು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲು ಚಿಂತನೆ ನಡೆಸಿದೆ ಎಂದರು.

ಸದ್ಯಕ್ಕೆ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ. ಆದರೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಪ್ರತಿ ಜಿಲ್ಲೆಗಳ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಚ್ಚರಿಕೆ ನೀಡಿದ್ದೇವೆ. ಆದರೆ ಸದ್ಯಕ್ಕಂತೂ ಎಲ್ಲಿಯೂ ಈ ರೀತಿಯ ಹೊಸ ತಳಿ ಪತ್ತೆಯಾಗಿಲ್ಲ ಎಂದರು.

ಇದನ್ನೂ ಓದಿ:ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ರಾಜ್ಯದ ಜನರ ಪ್ರಾಣ ರಕ್ಷಣೆ ಮಾಡುದು ಸರ್ಕಾರದ ಜವಾಬ್ದಾರಿ. ಆ ದೃಷ್ಟಿಯಿಂದ ಎಲ್ಲಾ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜ್ಯ ವಿಪತ್ತು ನಿರ್ವಹಣೆಯ ಉಪಾಧ್ಯಕ್ಷರಾಗಿ ನಮಗೆ ಆ ಜವಾಬ್ದಾರಿಯಿದೆ ಎಂದರು.

Advertisement

ಬೆಳಗಾವಿ ಅಧಿವೇಶನಕ್ಕೆ ಶಾಸಕರ ಅಪಸ್ವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ಬೆಳಗಾವಿ ಅಧಿವೇಶನ ನಡೆಯಲಿದೆ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಅಧಿವೇಶನ ನಡೆಯುತ್ತದೆ. ನಿಗದಿತ ದಿನಾಂಕದಂತೆ ಅಧಿವೇಶನ ನಡೆಯಲಿದೆ. ಈಗಾಗಲೇ ಎರಡು ವರ್ಷಗಳಿಂದ‌ ಬೆಳಗಾವಿ ಅಧಿವೇಶನವನ್ನು ಮುಂದೂಡಲಾಗುತ್ತಿದೆ. ಈಗ ಇದ್ದಕ್ಕಿದ್ದಂತೆ ಅಧಿವೇಶನ ರದ್ದು ಮಾಡಿದರೆ ಅಲ್ಲಿನ ಜನರಿಗೆ ಬೇರೆ ರೀತಿಯ ಸಂದೇಶ ಹೋಗುತ್ತದೆ. ಜನರು ಕೂಡ ಭಯಭೀತರಾಗುತ್ತಾರೆ. ಇದು ಒಳ್ಳೆಯ ಸಂದೇಶ ಅಲ್ಲ. ಅಧಿವೇಶನ ಅಲ್ಲಿ ನಡೆಸಲೇಬೇಕಾಗಿದೆ. ಕೊವೀಡ್ ಸೂತ್ರ ತೆಗೆದುಕೊಂಡು ಅಧಿವೇಶನ ಸುಸೂತ್ರವಾಗಿ ನಡೆಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next