Advertisement

ಸೀಟು ಕೊಡದಿದ್ದರೆ ಬೆಂಬಲಿಸಲ್ಲ: ಮಾಂಜಿ

09:20 AM Feb 26, 2018 | Harsha Rao |

ಗಯಾ: ಬಿಹಾರದಲ್ಲಿರುವ 6 ರಾಜ್ಯಸಭೆ ಸೀಟುಗಳ ಪೈಕಿ ಒಂದನ್ನು ನಮ್ಮ ಪಕ್ಷಕ್ಕೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಗಳಲ್ಲಿ ನಮ್ಮ ಪಕ್ಷ ಬಿಜೆಪಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡುವುದಿಲ್ಲ. ಹೀಗೊಂದು ಷರತ್ತನ್ನು ಮುಂದಿಟ್ಟಿರುವುದು ಬಿಹಾರದ ಮಾಜಿ ಸಿಎಂ, ಹಿಂದುಸ್ಥಾನಿ ಅವಾಮ್‌ ಮೋರ್ಚಾ(ಎಚ್‌ಎಎಂ) ಮುಖ್ಯಸ್ಥ ಜಿತನ್‌ ರಾಂ ಮಾಂಜಿ.

Advertisement

ಭಾನುವಾರ ಈ ಕುರಿತು ಮಾತನಾಡಿದ ಮಾಂಜಿ, ಕನಿಷ್ಠ ಒಂದು ರಾಜ್ಯಸಭೆ ಸೀಟನ್ನು ನಮ್ಮ ಪಕ್ಷದ ನಾಯಕನಿಗೆ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಮಾರ್ಚ್‌ 23ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಮಾ.11ರಂದು ಅರಾರಿಯಾ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರಗಳಾದ ಜಹಾನಾಬಾದ್‌ ಮತ್ತು ಭಭುವಾಗೆ ಉಪಚುನಾವಣೆ ನಡೆಯಲಿದೆ. ಕಳೆದ ಒಂದೂವರೆ ವರ್ಷಗಳಿಂದಲೂ ನಾನು ಮತ್ತು ನಮ್ಮ ಪಕ್ಷ ಬಿಹಾರದಲ್ಲಿ ಎನ್‌ಡಿಎಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದೇವೆ. ಹೀಗಾಗಿ ನಮಗೆ ಒಂದು ಸ್ಥಾನವಾದರೂ ನೀಡಬೇಕು ಎಂದಿದ್ದಾರೆ ಮಾಂಜಿ.

Advertisement

Udayavani is now on Telegram. Click here to join our channel and stay updated with the latest news.

Next